ರಕ್ತದಾನವು ಮಾನವೀಯತೆಯ ಶ್ರೇಷ್ಠ ಸೇವೆಗಳಲ್ಲಿ ಒಂದಾಗಿದ್ದು, ರಕ್ತದಾನ ಮಾಡಿ-ಜೀವದಾನ ನೀಡಿ, ನಿಮ್ಮ ಒಂದು ಹನಿ ರಕ್ತ ಮತ್ತೋಬ್ಬರ ಬದುಕಿಗೆ ಆಶಾಕಿರಣವಾಗಬಹುದು ಎಂಬ ಆಶಯದೊಂದಿಗೆ ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ, ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು ಹಾಗೂ ಸರಕಾರಿ ಆಸ್ಪತ್ರೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕದ ೨ನೇ ಬೃಹತ್ ರಕ್ತದಾನ ಶಿಬಿರ ಹಾಗೂ ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು ಇವರ ೪ನೇ ರಕ್ತದಾನ ಶಿಬಿರವು ಜೂನ್ ೧೩ರಂದು ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ವಾಹ್ನ ೯.೩೦ರಿಂದ ಮಧ್ಯಾಹ್ನ ೦೧.೦೦ಘಂಟೆಯ ವರೆಗೆ ನಡೆಯಲಿದ್ದು, ನಿಮ್ಮ ಒಂದು ಯೂನಿಟ್ ರಕ್ತವು ಯಾರದೋ ಅಮೂಲ್ಯ ಜೀವವನ್ನು ಉಳಿಸಬಹುದು, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಕೈ ಜೋಡಿಸಬೇಕಾಗಿ ಜಂಟಿ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.