ಸುಳ್ಯ : ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ವಲಯದ ವಾರ್ಷಿಕೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರೀ ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ವಲಯ ಹಾಗೂ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ವಲಯದ ವಾರ್ಷಿಕೋತ್ಸವ ಸುಳ್ಯ ಯೋಜನಾ ಕಚೇರಿಯ ಸಭಾಂಗಣದಲ್ಲಿ ಜೂನ್ 21ರಂದು ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರವಾನ್ವಿತ ಯೋಜನಾಧಿಕಾರಿಗಳಾದ ಮಾಧವ ಗೌಡರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು ಯಾವುದೇ ಸರಕಾರಗಳು ಮಾಡದಂತಹ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಪೂಜ್ಯರು ನಡೆಸುತ್ತಿದ್ದಾರೆ ಎಂದು ತಿಳಿಸಿದ ಅವರು ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು ಈ ಕಾರ್ಯಕ್ರಮದಲ್ಲಿ ಘಟಕದ ಪ್ರತಿನಿಧಿ ಪಿಜಿ ಜಯರಾಮ ಶ್ರೀ ಮಂಜುನಾಥೇಶ್ವರ ಬಜನಾ ಪರಿಷತ್ತಿನ ಸುಳ್ಯ ವಲಯದ ಅಧ್ಯಕ್ಷ ರಾದ ಸವಿತಾ ಸಂದೇಶ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಯಾದ ಟಿ ಎನ್ ಸತೀಶ್ ಸುಳ್ಯ ವಲಯದ ಮೇಲ್ವಿಚಾರಕರಾದ ದಿನೇಶ್ ಡಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನಿರ್ಮಿಸಿದ ಮನೆಯ ಗ್ರಹ ಪ್ರವೇಶ ಮತ್ತು ಹಸ್ತಾಂತರ ಕಾರ್ಯಕ್ರಮ ಜೂನ್ 24ರಂದು ನಡೆಯಲಿರುವ ಬಗ್ಗೆ ಚರ್ಚಿಸಲಾಯಿತು ಘಟಕದ ಸಂಯೋಜಕರಾದ ಸುರೇಶ್ ರವರು ಸ್ವಾಗತಿಸಿ ಸದಸ್ಯರಾದ
ರತಿಶ್ ರವರು ವಂದಿಸಿದರು ಕಾರ್ಯಕ್ರಮದಲ್ಲಿ ಘಟಕದ 17 ಜನ ಸದಸ್ಯರು ಭಾಗವಹಿಸಿದ್ದರು.



















































































































Leave a Comment

Your email address will not be published. Required fields are marked *

error: Content is protected !!
Scroll to Top