June 2026

ಸಂಕಷ್ಟದಲ್ಲಿದ್ದವರಿಗೆ ಮಾಡುವ ದಾನ ಶ್ರೇಷ್ಠ ದಾನ : ರಾಜೇಶ್ ರೈ ಮೇನಾಲ

ಸಂಕಷ್ಟದಲ್ಲಿವರಿಗೆ ದಾನ ಮಾಡಿದ್ದಾಗ ಅದು ಶ್ರೇಷ್ಠ ದಾನವಾಗುತ್ತದೆ ಎಂದು ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರಾಜೇಶ್ ರೈ ಮೇನಾಲ ಹೇಳಿದರು.ಅವರು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದದಲ್ಲಿ ಇಲ್ಲಿಯ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಯವರ “ಧರ್ಮ ಕ್ಷೇತ್ರವೇ ಯುದ್ಧಕ್ಷೇತ್ರವಾಗಬಾರದು” ಎಂಬ 136ನೇ ಕೃತಿಮಾಲೆ ಬಿಡುಗಡೆಗೊಳಿಸಿ ಮತ್ತು ಆಶ್ರಮದ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳನ್ನು‌ ಉಚಿತವಾಗಿ ವಿತರಿಸಿ ಮಾತನಾಡಿದರು.ಭಾರತದ ಪ್ರಾಚಿನ ಕಾಲದಲ್ಲಿ ಅನ್ನ,ನೀರು,ವಿದ್ಯೆ,ವೈದ್ಯ ಸೇವೆ ದುಡ್ಡಿಗೆ ಸಿಗುತ್ತಿರಲಿಲ್ಲ.ಅದನ್ನು […]

ಸಂಕಷ್ಟದಲ್ಲಿದ್ದವರಿಗೆ ಮಾಡುವ ದಾನ ಶ್ರೇಷ್ಠ ದಾನ : ರಾಜೇಶ್ ರೈ ಮೇನಾಲ Read More »

ಸುಳ್ಯ ಕಸಾಪ ವತಿಯಿಂದ ಎಸ್ ಎಸ್ ಎಲ್ ಸಿ.ಕನ್ನಡ ವಿಷಯದಲ್ಲಿ ಶೇಕಡಾ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಸುಳ್ಯ ತಾಲೂಕು ಘಟಕ ಇದರ ಆಶ್ರಯದಲ್ಲಿ2025-26ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇಕಡಾ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆಗೌರವಾರ್ಪಣೆ ಕಾರ್ಯಕ್ರಮ ಜೂ. 06 ರಂದು ಅಪರಾಹ್ನ ಸುಳ್ಯ ಕನ್ನಡ ಭವನದಲ್ಲಿ ನಡೆಯಿತು..ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದರು ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಿ ಮಾತನಾಡಿ “ಪ್ರತೀ ವರುಷವು ಶೇ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕಸಾಪ ವತಿಯಿಂದ ಅಭಿನಂದಿಸುವ ಕಾರ್ಯ ಶ್ಲಾಘನೀಯ.

ಸುಳ್ಯ ಕಸಾಪ ವತಿಯಿಂದ ಎಸ್ ಎಸ್ ಎಲ್ ಸಿ.ಕನ್ನಡ ವಿಷಯದಲ್ಲಿ ಶೇಕಡಾ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ Read More »

ಜೂನ್ 9 ರಂದು ಜಿಫ್ರಿ ತಂಘಳ್ ರವರಿಂದ ಅರಂತೋಡು ಮಸೀದಿಯ ಮೇಲಂತಸ್ತು ಮತ್ತು ನೂತನ ಮದರಸ ಕಟ್ಟಡಕ್ಕೆ ಶಿಲಾನ್ಯಾಸ

ಅರಂತೋಡು : ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ಮೇಲಂತಸ್ತು ನಿರ್ಮಾಣ ಕಾಮಗಾರಿಗೆ ಹಾಗೂ ನುಸ್ರತುಲ್ ಇಸ್ಲಾಂ ಮದರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಜೂನ್ 9 ರಂದು ಬೆಳಗ್ಗೆ ಗಂಟೆ 9.30ಕ್ಕೆ ಅರಂತೋಡು ಮಸೀದಿ ವಠಾರದಲ್ಲಿ ನಡೆಯಲಿದೆ. ನೂತನ ಮದರಸ ಕಟ್ಟಡಕ್ಕೆ ಶಿಲಾನ್ಯಾಸವನ್ನು ಸಮಸ್ತ ಕೇರಳ ಜಂಇತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಉಲಮಾ, ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಘಳ್ ನೆರವೇರಿಸಲಿದ್ದು, ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್

ಜೂನ್ 9 ರಂದು ಜಿಫ್ರಿ ತಂಘಳ್ ರವರಿಂದ ಅರಂತೋಡು ಮಸೀದಿಯ ಮೇಲಂತಸ್ತು ಮತ್ತು ನೂತನ ಮದರಸ ಕಟ್ಟಡಕ್ಕೆ ಶಿಲಾನ್ಯಾಸ Read More »

ಸುಳ್ಯ : ಇಲಿ ಪಾಷಾಣ ಸೇವಿಸಿದ ಯುವಕ ಸಾವು!

ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಜಟ್ಪಿಪಳ್ಳದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜೂ.6ರಂದು ವರದಿಯಾಗಿದೆ.ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ ಯುವಕನನ್ನು‌ ಜಟ್ಟಿಪಳ್ಳ ನಿವಾಸಿ ದಿ.ಭಾಸ್ಕರ ಅವರ ಮಗ ಉಮೇಶ(32 ವರ್ಷ) ಎಂದು ತಿಳಿದು‌ ಬಂದಿದೆ.ಒಂದು ವಾರದ ಅವರು ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಾಗ ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ವೈದ್ಯರು ಚಿಕಿತ್ಸೆ ಫಲಕಾರಿಯಾಗುವುದು ಅಸಾಧ್ಯ ಎಂದು ತಿಳಿಸಿದ ಕಾರಣ ಸುಳ್ಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮ್ರತರು ತಾಯಿ,ಓರ್ವ ಸಹೋದರ,ಸಹೋದರಿಯನ್ನು ಅಗಲಿದ್ದಾರೆ.

ಸುಳ್ಯ : ಇಲಿ ಪಾಷಾಣ ಸೇವಿಸಿದ ಯುವಕ ಸಾವು! Read More »

ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್‌ ಪಾಸ್‌ಗೆ ಅರ್ಜಿ ಆಹ್ವಾನ

2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ವಿದ್ಯಾರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದ್ದು ಸರ್ಕಾರದ ನಿಯಮಾನುಸಾರ ರೂ.30 ಸೇವಾ ಶುಲ್ಕ ವಿಧಿಸಲಾಗುತ್ತದೆ. ಅರ್ಜಿದಾರರು ಡಿಕ್ಲರೇಶನ್ ಫಾರ್ಮ್ ಅನ್ನು ಅಥವಾ ಸೇವಾಸಿಂಧು ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಿ ಶಾಲೆ/ಕಾಲೇಜಿನ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರ ಸಹಿ

ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್‌ ಪಾಸ್‌ಗೆ ಅರ್ಜಿ ಆಹ್ವಾನ Read More »

ಮಾಣಿ-ಸಂಪಾಜೆ ರಸ್ತೆ ಅಲೈನ್‌ಮೆಂಟ್‌ಗೆ ಇನ್ನೂ ಸಚಿವಾಲಯದ ಅನುಮೋದನೆ ಇಲ್ಲ !

ಸುಳ್ಯ: ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ಸುಳ್ಯ ಘಟಕದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರು ಕಚೇರಿಗೆ ಸಲ್ಲಿಸಲಾಗಿದ್ದ, ಮಾಹಿತಿ ಹಕ್ಕು ಅಧಿನಿಯಮ 2005 ರ ಕಾಯ್ದೆಯಡಿಯಲ್ಲಿ ಮಾಣಿ ಸಂಪಾಜೆ ರಸ್ತೆ ಅಲೈನ್ ಮೆಂಟ್ ಗೆ ಇನ್ನೂ ಸಚಿವಾಲಯದ ಅನುಮೋದನೆ ಇಲ್ಲ ಎಂದು ತಿಳಿಸಲಾಗಿದೆ. ಕೆ.ಆರ್.ಎಸ್. ಸುಳ್ಯ ಘಟಕದ ಅಧ್ಯಕ್ಷ ಡಿ. ಎಂ. ಶಾರಿಖ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲಾದ ಮಾಹಿತಿಯ ಪ್ರಕಾರ, ಅನಧಿಕೃತವಾಗಿ ಅಗೆದಿರುವ ರಸ್ತೆಯನ್ನು ಯಥಾಸ್ಥಿತಿಗೆ ತಂದು ಸಾರ್ವಜನಿಕರಿಗೆ ಹಾಗೂ ವಾಹನಸಂಚಾರಕ್ಕೆ

ಮಾಣಿ-ಸಂಪಾಜೆ ರಸ್ತೆ ಅಲೈನ್‌ಮೆಂಟ್‌ಗೆ ಇನ್ನೂ ಸಚಿವಾಲಯದ ಅನುಮೋದನೆ ಇಲ್ಲ ! Read More »

ತೊಡಿಕಾನ ದೇವಳದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೂವಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ವಿಶ್ವ ಪರಿಸರ ದಿನದ ಪ್ರಯುಕ್ತ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬೆಂಗಳೂರು ಇವರ ವತಿಯಿಂದ ಸುಳ್ಯ ಸೀಮೆ ತೊಡಿಕಾನ ಶ್ರೀ ದೇವಳದಲ್ಲಿ ಹೂವಿನ ಗಿಡ ನೆಡುವ ಕಾರ್ಯಕ್ರಮ ನಡೆಯಿತು.ತೊಡಿಕಾನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಹೂವಿನ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ಬಾಲಕೃಷ್ಣ ಕುಂಟುಕಾಡು,ತಿಮ್ಮಯ್ಯ ಮೆತ್ತಡ್ಕ,ಮಾಲತಿ ಬೋಜಪ್ಪ,ರಾಜರಾಜೇಶ್ವರಿ ದೇವಳದ ಟ್ರಸ್ಟಿ ಚಂಗಪ್ಪ,ದೇವಳದ. ಸಿಬ್ಬಂದಿಗಳು ಈ ಸಂದರ್ಭದಲ್ಲಿ

ತೊಡಿಕಾನ ದೇವಳದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೂವಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ Read More »

ಮಾಣಿ : ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು

ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ ಸಮೀಪದಲ್ಲಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಪ್ರತಿಭಾವಂತೆಯಾಗಿರುವ ಬಾಲಕಿ ನೈರುತಿ ಎಂ ಸುವರ್ಣ(10) ಮೃತಪಟ್ಟ ಘಟನೆ ವರದಿಯಾಗಿದೆ.ಬಾಳ್ತಿಲ ಗ್ರಾಮದ ನಿವಾಸಿ ಹೇಮಂತ್ ಎಂಬವರ ಪುತ್ರಿಯಾಗಿರುವ ನೈರುತಿ ಪ್ರತಿಭಾವಂತೆಯಾಗಿದ್ದಳು,ತಂದೆ ಮತ್ತು ತಾಯಿಯೊಂದಿಗೆ ಬುಧವಾರ ಸಂಜೆ ವೇಳೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬರುವಾಗ ಸೂರಿಕುಮೇರು ಸಮೀಪಿಸುತ್ತಿರುವಾಗಲೇ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದು ಕಾಂಕ್ರೀಟ್ ರಸ್ತೆಗೆಸೆಯಲ್ಪಟ್ಟ ನೈರುತಿಯ ತಲೆ ಭಾಗಕ್ಕೆ ಗಂಭೀರ ಪೆಟ್ಟು ತಗುಲಿರುವುದರಿಂದ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಸಾವನ್ನಪ್ಪಿದಳು.

ಮಾಣಿ : ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು Read More »

ಕೊಡಗು : ಭೀಕರ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಸಾವು!

ಕೊಡಗು ಜಿಲ್ಲೆಯ ತಿತಿಮತಿ ಬಳಿಯ ಕೋಣನಕಟ್ಟೆಯಲ್ಲಿ ಕಾಫಿ ತೋಟ ವೀಕ್ಷಿಸಲು ಹೋಗಿದ್ದಾಗನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (60) ಕಾಡಾನೆ ದಾಳಿಯಿಂದ ಸಾವನ್ಜಪ್ಪಿದ ಘಟನೆ ವರದಿಯಾಗಿದೆ.ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಏಕಾಏಕಿ ದಾಳಿ ನಡೆಸಿದೆ.ಆನೆ ದಾಳಿಯಿಂದ ಓಡಿ ಹೋಗಿ ಇಬ್ಬರು ಕಾಫಿ ತೋಟದ ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ.ಚಿಕಿತ್ಸೆಗಾಗಿ ಗೋಣಿಕೊಪ್ಪಲು ಲೋಪಾಮುದ್ರಾ ಆಸ್ಪತ್ರೆಗೆ ರವಾನೆ ವೇಳೆ ಸಂಧ್ಯಾ ಅವರು ಮೃತಪಟ್ಟಿದ್ದಾರೆ.ಗಾಯಾಳು ಕಾರ್ಮಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಡಗು : ಭೀಕರ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಸಾವು! Read More »

ಡಿ.ಕೆ.ಶಿ ಸರ್ಕಾರದ ಮೊದಲ ವಿಕೆಟ್ ಪತನ!

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ತಮಗೆ ನಿರೀಕ್ಷಿತ “ಬೆಂಗಳೂರು ನಗರಾಭಿವೃದ್ಧಿ” ಖಾತೆ ಸಿಗದ ಕಾರಣ ಅಚ್ಚರಿಯ ರಾಜೀನಾಮೆ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಖಾತೆ ಸಿಗದ ಕಾರಣ ಸಚಿವ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲದೆ ಈ ನಿರ್ಧಾರ ಕೈಗೊಂಡಿದ್ದೇನೆ,” ಎಂದು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿ ಸರ್ಕಾರದ ಮೊದಲ ವಿಕೆಟ್ ಪತನ! Read More »

error: Content is protected !!
Scroll to Top