ಸುಳ್ಯದಲ್ಲಿ ಸತೀಶ್ ಕಾಟೂರು ಹಾಗೂ ಶ್ರೀವತ್ಸ ಕಾಟೂರು ಮಾಲೀಕತ್ವದ ‘ಶ್ರೀ ಇನ್ಫೋ’ ಕಂಪ್ಯೂಟರ್ಸ್ ಸಹ ಸಂಸ್ಥೆ ನೂತನ ಎಕ್ಸ್‌ಕ್ಯೂಸಿವ್ ಲ್ಯಾಪ್‌ಟಾಪ್ ಶೋರೂಮ್ ‘ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್’ ಚೆನ್ನಕೇಶವ ದೇವಸ್ಥಾನದ ಬಳಿಯ ಸೌಪರ್ಣಿಕಾ ಆರ್ಕೇಡ್‌ನ ಪ್ರಥಮ ಮಹಡಿಯಲ್ಲಿ ಜುಲೈ 16 ರಂದು ಶುಭಾರಂಭಗೊಳ್ಳಲಿದೆ.
ಜುಲೈ 16 ರಂದು ಪೂ.10 ಗಂಟೆಗೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು .ಭಾಗೀರಥಿ ಮುರುಳ್ಯ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಪಿ. ಬಿ ಸುಧಾಕರ ರೈ ನೆಟ್ ಕಾo ,ಸೌಪರ್ಣಿಕಾ ಆರ್ಕೇಡ್ ಮಾಲಕ ನಾರಾಯಣ ಮಣಿಯಾಣಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ನಮ್ಮಲ್ಲಿ ಉದ್ಘಾಟನೆಯ ಪ್ರಯುಕ್ತ ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್‌ನಲ್ಲಿ ಆಕರ್ಷಕ ಆಫರ್‌ಗಳು ಲಭ್ಯವಿದೆ. ಎಲ್ಲಾ ಬ್ರಾಂಡ್‌ಗಳ ಆಕರ್ಷಕ ಲ್ಯಾಪ್‌ಟಾಪ್‌ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.ಉದ್ಘಾಟನೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಲ್ಯಾಪ್ ಟಾಪ್ ಖರೀದಿಗೆಂದು ಭರ್ಜರಿ ಆಫರ್ ರಿಯಾಯತಿ ದರದಲ್ಲಿ ಲಭ್ಯವಿದೆ. ಅಲ್ಲದೆ ಎಲ್ಲಾ ಪ್ರಸಿದ್ಧ ಕಂಪೆನಿಗಳ ಲ್ಯಾಪ್‌ಟಾಪ್‌ಗಳ ಸ್ಟಾಕ್‌ಗಳು ಲಭ್ಯವಿದೆ. ಆಫಲ್ ಮ್ಯಾಕ್‌ಬುಕ್, ಏಸರ್, ಡೆಲ್, ಆಸಸ್, ಲೆನೊವೊ, ಮತ್ತಿತರ ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳು ಇದೆ. ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್‌ನಲ್ಲಿ ಐಫೋನ್, ನತ್ತಿಂಗ್, ಸ್ಯಾಮ್‌ಸಂಗ್, ನೋಕಿಯಾ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್‌ಗಳು ಕೂಡ ಲಭ್ಯವಿದೆ. ತಮ್ಮ ಇಷ್ಟದ ಲ್ಯಾಪ್‌ಟಾಪ್‌ಗಳ ಬುಕ್ಕಿಂಗ್ ಮಾಡಲು ಅವಕಾಶ ಇದೆ. ಎಂದು ಶ್ರೀ ಇನ್ಫೋ ಕಂಪ್ಯೂಟರ್ ಸೆಂಟರ್‌ನ ಮಾಲಕರಾದ ಸತೀಶ್ ಕಾಟೂರು ಹಾಗೂ ಶ್ರೀವತ್ಸ ಕಾಟೂರು ತಿಳಿಸಿದ್ದಾರೆ.
ಜುಲೈ 16 ರಂದು ಸುಳ್ಯದಲ್ಲಿ ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್ ಶುಭಾರಂಭ




































































