ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ 2026 – 2027ನೇ ಸಾಲಿನ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.25ರಂದು ಸಂಜೆ 7-00ಕ್ಕೆ ಬೆಳ್ಳಾರೆಯ ದೇವಿ ಹೈಟ್ಸ್‌ನಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ರೋ.ಆರೀಫ್ ಬಿ.ಎಂ ಹಾಗೂ ಕಾರ್ಯದರ್ಶಿ ಪ್ರಶಾಂತ್ ಟಿ.ಎಂ ತಿಳಿಸಿದ್ದಾರೆ.
ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪದಗ್ರಹಣ ಅಧಿಕಾರಿಯಾಗಿ ಪೂರ್ವ ಜಿಲ್ಲಾ ಗವರ್ನರ್ ರೊ| ಎ. ಆರ್. ರವೀಂದ್ರ ಭಟ್‌ರವರು, ಗೌರವ ಅತಿಥಿಗಳಾಗಿ ವಲಯದ ಸಹಾಯಕ ಗವರ್ನರ್ ರೊ। ಆನಂದ ಖಂಡಿಗ, ರೋನಲ್ ಲೆಫ್ಟಿನೆಂಟ್ ರೊ| ಚಂದ್ರಶೇಖರ ರೈ ಬಜನಿ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ರೊ। ಲತಾ ಮಧುಸೂದನ್‌ರವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸೂಪರಿಂಟೆಂಡೆಂಟ್ ಆಗಿರುವ ಶ್ರೀಮತಿ ಪುಷ್ಪಾವತಿ ಕೆ. ಹಾಗೂ ಬೆಳ್ಳಾರೆಯ ಪವರ್‌ಮ್ಯಾನ್ ಜೋಸೆಫ್ ಮಣಿಕ್ಕರ ಇವರನ್ನು ಸನ್ಮಾನಿಸಿ ಗೌರವಿಸಲಿದ್ದೇವೆ. ಅಲ್ಲದೇ ಹಲವು ಸಮುದಾಯ ಸೇವಾ ಕೊಡುಗೆಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಗುರುತಿಸುವಿಕೆ, ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನೂ ನೀಡಲಿದ್ದೇವೆ.
2008ರಲ್ಲಿ ಪ್ರಾರಂಭಗೊಂಡ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು, ಕೊಡುಗೆಗಳ ಮುಖಾಂತರ ಉತ್ತಮ ಸೇವಾ ಸಂಸ್ಥೆಯಾಗಿ ಮೂಡಿಬಂದಿದೆ. ಇದೀಗ 19ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿದೆ.
ಕಳೆದ ವರ್ಷ ನಮ್ಮ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆದಿದ್ದು, ನಮ್ಮ ಯೋಜನೆಗಳನ್ನು ಮನಗಂಡ ರೋಟರಿ ಜಿಲ್ಲೆ 3181 ‘ಪ್ಲಾಟಿನಂ ಪ್ಲಸ್ ಕ್ಲಬ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಇದೀಗ 2026-27ನೇ ಸಾಲಿಗೆ ನೂತನ ತಂಡ ಆಯ್ಕೆಗೊಂಡಿದ್ದು, ಅಧ್ಯಕ್ಷರಾಗಿ ರೊ| ಆರಿಫ್ ಬೆಳ್ಳಾರೆ,ನಿಕಟಪೂರ್ವಾಧ್ಯಕ್ಷರಾಗಿ ರೊ। ವಿಶ್ವನಾಥ ಕೆ.ನಿಯೋಜಿತ ಅಧ್ಯಕ್ಷರಾಗಿ ರೊ| ಗಣೇಶ್ ಕುಕ್ಕುತಡಿ, ಕಾರ್ಯದರ್ಶಿಯಾಗಿ ರೊ| ಪ್ರಶಾಂತ್ ತಂಟೆಪ್ಪಾಡಿ, ಕೋಶಾಧಿಕಾರಿಯಾಗಿ ರೊ| ರವೀಂದ್ರ ಗೌಡ, ಸಾರ್ಜೆಂಟ್ ಆಟ್ ಆರ್ಮ್ಸ್ ಆಗಿ ರೊ| ನವೀನ್ ಕುಮಾರ್ ರೈ ತಂಬಿನಮಕ್ಕಿ, ಲರ್ನಿಂಗ್ ಫೆಸಿಲಿಟೇಟರ್ ಆಗಿ ರೊ| ಪ್ರಭಾಕರ ಆಳ್ವ, ಕ್ಲಬ್ ಅಡ್ಮಿನಿಸ್ಟ್ರೇಷನ್ ಚೇರ್‌ಮೆನ್ ಆಗಿ ರೊ। ವಿನಯಕುಮಾರ್, ರೋಟರಿ ಫೌಂಡೇಶನ್ ಚೇರ್‌ಮೆನ್ ಆಗಿ ರೊ| ಶಶಿಧರ್, ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚೇರ್‌ಮೆನ್ ಆಗಿ ರೊ| ಎ.ಕೆ. ಮಣಿಯಾಣಿ, ಪಬ್ಲಿಕ್ ರಿಲೇಶನ್ ಚೇರ್‌ಮೆನ್ ಆಗಿ ರೊ| ಪದ್ಮನಾಭ ಬೀಡು, ಸರ್ವಿಸ್ ಪ್ರಾಜೆಕ್ಟ್ ಚೇರ್‌ಮೆನ್ ಆಗಿ ರೊ। ಚಂದ್ರಶೇಖರ ರೈ ಬಜನಿ, ಸಂಘ ಸೇವೆ ನಿರ್ದೇಶಕರಾಗಿ ರೊ| ಧನರಾಜ್ ಕುಮಾರ್, ಸಮುದಾಯ ಸೇವೆ ನಿರ್ದೇಶಕರಾಗಿ ರೊ| ಬಾಲಕೃಷ್ಣ ಮಡ್ತಿಲ, ವೃತ್ತಿ ಸೇವೆ ನಿರ್ದೇಶಕರಾಗಿ ರೊ। ಹನೀಫ್ ಬೆಳ್ಳಾರೆ, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ರೊ। ನಟರಾಜನ್, ಯುವಜನ ಸೇವೆ ನಿರ್ದೇಶಕರಾಗಿ ರೊ। ವೀರನಾಥರವರು ಕಾರ್ಯನಿರ್ವಹಿಸಲಿದ್ದಾರೆ.ಸದ್ರಿ ವರ್ಷದಲ್ಲಿ ಜಿಲ್ಲಾ ಗವರ್ನರ್ ರೊ| ಸತೀಶ್ ಬೋಳಾರ್‌ರವರ ಆಶಯದಂತೆ ‘ಶಿಕ್ಷಣ ಮತ್ತು ಯುವಜನ ಸಬಲೀಕರಣ, ಆರೋಗ್ಯ ರಕ್ಷಣೆ ಸಂಬಂಧಿತ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ಹಿರಿಯ ನಾಗರಿಕ ಕ್ಷೇಮ ಯೋಜನೆ’ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ
ರೋ| ವಿಶ್ವನಾಥ ಕೆ. ರೊ. ರವೀಂದ್ರ ಗೌಡ, ರೊ| ಶಶಿಧರ್ ಬಿ.ಕೆ., ರೊ| ಚಂದ್ರಶೇಖರ ರೈ ಬಜನಿ, ರೊ| ಪದ್ಮನಾಭ ಬೀಡು, ರೊ| ವಿನಯಕುಮಾರ್ ಉಪಸ್ಥಿತರಿದ್ದರು.
ಜುಲೈ 25 ; ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ



















