ಬಿ.ಸಿ.ರೋಡ್ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಲ್ಲಿ
ಜು.16 ಸಂಜೆ ಯುವತಿ ಲಾವಣ್ಯಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅರೋಪಿ ಚೇತನ್ ವಿಷಪ್ರಾಷನ ಮಾಡಿದ್ದು, ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ತಾಲೂಕಿನ ಉಳಿ ಗ್ರಾಮ ನಿವಾಸಿ ಲಾವಣ್ಯ (21) ಎಂಬಾಕೆಯನ್ನು ಬೆಳ್ತಂಗಡಿ ಒಡಿಲ್ನಾಳ ನಿವಾಸಿ, ಆಕೆಯ ದೂರದ ಸಂಬಂಧಿ ಚೇತನ್ ಎಂಬಾತ ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದ.
ಆದರೆ ಈ ವೇಳೆ ಆರೋಪಿ ಇಲಿ ಪಾಷಾಣ ಸೇವಿಸಿದ್ದ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವೀಡಲಾಗುತ್ತಿದೆ ಎಂದು ಎಸ್ ಪಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಲಾವಣ್ಯ ಹತ್ಯೆ ಆರೋಪಿಯ ಬಂಧನ




































































