ಅವಿನ್ ರಂಗತ್ತಮಲೆಯವರಿಗೆ ಉಪತಹಶೀಲ್ದಾರ್ ಆಗಿ ಪದೋನ್ನತಿ
ಸುಳ್ಯದಲ್ಲಿ ಕಂದಾಯ ನಿರೀಕ್ಷಕರಾಗಿರುವ ಅವಿನ್ ರಂಗತ್ತಮಲೆಯವರು ಉಪತಹಶೀಲ್ದಾರ್ ಆಗಿ ಪದೋನ್ನತಿಗೊಂಡಿದ್ದಾರೆ.ಅವಿನ್ ರವರು 1993ರಲ್ಲಿ ಬೆಳ್ತಂಗಡಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸರಕಾರಿ ಸೇವೆಗೆ ಸೇರಿದ ಇವರು 1994ರಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಮರ್ಕಂಜಕ್ಕೆ ವರ್ಗಾವಣೆ ಗೊಂಡರು. ಆ ಬಳಿಕ ಅಜ್ಜಾವರ, ಮಂಡೆಕೋಲು, ಉಬರಡ್ಕಮಿತ್ತೂರು, ಜಾಲ್ಸೂರು ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಕಂದಾಯ ನಿರೀಕ್ಷರಾಗಿ ಪದೋನ್ನತಿಗೊಂಡ ಅವರು ಸುಳ್ಯದಲ್ಲಿ ಸೇವೆ ಮುಂದುವರಿಸಿದರು.ಸುಳ್ಯ ಕೇರ್ಪಳ ನಿವಾಸಿಯಾಗಿರುವ ಅವಿನ್ ರವರ ಪತ್ನಿ ವನಿತಾ ಎಲಿಮಲೆ ಶಾಲೆಯಲ್ಲಿ ದೈ.ಶಿ.ಶಿಕ್ಷಕರಾಗಿದ್ದಾರೆ.ಪುತ್ರ ಅಮೋಗ್ ಅವಿನ್ ಎಂ.ಬಿ.ಬಿ.ಎಸ್. ಅಧ್ಯಾಯನ ಮಾಡಿದ್ದಾರೆ. […]
ಅವಿನ್ ರಂಗತ್ತಮಲೆಯವರಿಗೆ ಉಪತಹಶೀಲ್ದಾರ್ ಆಗಿ ಪದೋನ್ನತಿ Read More »










