ಅವಿನ್ ರಂಗತ್ತಮಲೆಯವರಿಗೆ ಉಪತಹಶೀಲ್ದಾರ್ ಆಗಿ ಪದೋನ್ನತಿ

ಸುಳ್ಯದಲ್ಲಿ ಕಂದಾಯ ನಿರೀಕ್ಷಕರಾಗಿರುವ ಅವಿನ್ ರಂಗತ್ತಮಲೆಯವರು‌ ಉಪತಹಶೀಲ್ದಾರ್ ಆಗಿ ಪದೋನ್ನತಿಗೊಂಡಿದ್ದಾರೆ.
ಅವಿನ್ ರವರು 1993ರಲ್ಲಿ ಬೆಳ್ತಂಗಡಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸರಕಾರಿ ಸೇವೆಗೆ ಸೇರಿದ ಇವರು 1994ರಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಮರ್ಕಂಜಕ್ಕೆ ವರ್ಗಾವಣೆ ಗೊಂಡರು. ಆ ಬಳಿಕ ಅಜ್ಜಾವರ, ಮಂಡೆಕೋಲು, ಉಬರಡ್ಕಮಿತ್ತೂರು, ಜಾಲ್ಸೂರು ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಕಂದಾಯ ನಿರೀಕ್ಷರಾಗಿ ಪದೋನ್ನತಿಗೊಂಡ ಅವರು ಸುಳ್ಯದಲ್ಲಿ ಸೇವೆ ಮುಂದುವರಿಸಿದರು.
ಸುಳ್ಯ ಕೇರ್ಪಳ ನಿವಾಸಿಯಾಗಿರುವ ಅವಿನ್ ರವರ ಪತ್ನಿ ವನಿತಾ ಎಲಿಮಲೆ ಶಾಲೆಯಲ್ಲಿ ದೈ.ಶಿ.ಶಿಕ್ಷಕರಾಗಿದ್ದಾರೆ.
ಪುತ್ರ ಅಮೋಗ್ ಅವಿನ್ ಎಂ.ಬಿ.ಬಿ.ಎಸ್. ಅಧ್ಯಾಯನ ಮಾಡಿದ್ದಾರೆ. ಇನ್ನೋರ್ವ ಪುತ್ರ ಆಗ್ನೆಯ ಅವಿನ್ ಮೂಡಬಿದಿರೆಯಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ.

































































































































Leave a Comment

Your email address will not be published. Required fields are marked *

error: Content is protected !!
Scroll to Top