July 2026

ಪೂಜಾ ಬೋರ್ಕರ್ ಗೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ಇವರ ವತಿಯಿಂದ ಸನ್ಮಾನ

ಸುಳ್ಯ ಕಸಬಾ ಬೆಟ್ಟಂಪಾಡಿ ನಿವಾಸಿ ಚಿತ್ರಕಲಾವಿದೆ ಪೂಜಾ ಬೋರ್ಕರ್ ರರಿಗೆ ದಿನಾಂಕ 19-07-2026 ರಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ದಲ್ಲಿ ಶ್ರೀ ಶಿವಪ್ರಕಾಶ್ ಗುರುಸ್ವಾಮಿ ಯವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.ಈಗಾಗಲೇ “IBR Achiever” ಪಟ್ಟಿಯನ್ನು ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯನ್ನು ನಿರ್ಮಿಸಿರುವ ಇವರು ಬೆಟ್ಟಂಪಾಡಿ ದಿ| ರಮೇಶ್ ನಾಯಕ್ ಹಾಗೂ ಹೇಮಲತಾ ದಂಪತಿಯ ಪುತ್ರಿ, ಮನೋಜ್ ಆನಡ್ಕ ಇವರ ಪತ್ನಿ.

ಪೂಜಾ ಬೋರ್ಕರ್ ಗೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ಇವರ ವತಿಯಿಂದ ಸನ್ಮಾನ Read More »

ಮರ್ಕಂಜ : ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

ಶ್ರೀ ಕ್ಷೇ ಧ ಗ್ರಾ ಯೋಜನೆ, ಪ್ರಗತಿಬಂಧು ಸ್ವ ಸಹಾಯ ಸಂಘ ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಸಾರ್ವಜನಿಕ “ಶ್ರೀ ವರಮಹಾಲಕ್ಷ್ಮೀ “ಪೂಜಾ ಸಮಿತಿ ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಇದರವತಿಯಿಂದ 2026ನೇ ಸಾಲಿನ “ಶ್ರೀವರಮಹಾಲಕ್ಷ್ಮೀ ” ಪೂಜಾ ಸಮಿತಿ ರಚನೆ ಬಗ್ಗೆ ಶ್ರೀ ವಿನಾಯಕ ” ಸಭಾ ಭವನ ರೆಂಜಾಳದಲ್ಲಿ ಸಭೆ ನಡೆಯಿತು. ಸಂಪಾಜೆ ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪಾಜೆ ವಲಯ ಜನಜಾಗೃತಿ ಅಧ್ಯಕ್ಷರಾದ ಸತೀಶ್ ರಾವ್ ದಾಸರಬೈಲು ಅಧ್ಯಕ್ಷತೆ ವಹಿಸಿದ್ದರು.

ಮರ್ಕಂಜ : ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ Read More »

ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ಪೇರೆಂಟ್ ಓರಿಯೆಂಟಷನ್ ಪ್ರೋಗ್ರಾಮ್

ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ 2026ರ ಪೋಷಕರ ಪರಿಚಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಪೋಷಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೌನ್ಸಿಲರ್ ಕಾವ್ಯ ಅವರು “ಸಂತೋಷದ ಪೋಷಕತ್ವ (Happy Parenting)” ಕುರಿತು ಅರ್ಥಪೂರ್ಣ ಹಾಗೂ ಪ್ರೇರಣಾದಾಯಕ ಉಪನ್ಯಾಸ ನೀಡಿ, ಮಕ್ಕಳನ್ನು ಪ್ರೀತಿ, ತಾಳ್ಮೆ ಮತ್ತು ಸಕಾರಾತ್ಮಕ ಮನೋಭಾವದಿಂದ ಬೆಳೆಸುವ ಕುರಿತು ಪೋಷಕರಿಗೆ ಮಾರ್ಗದರ್ಶನ ನೀಡಿದರು.ಶಾಲೆಯ ಕರಸ್ಪಾಂಡೆಂಟ್ ಗೀತಾಂಜಲಿ ಟಿ. ಜಿ. ಅವರು ಮಾಂಟೆಸ್ಸೋರಿ ಶಿಕ್ಷಣ ಪದ್ಧತಿಯ ಪರಿಚಯ ಮಾಡಿಕೊಟ್ಟು, ಅದರ ತತ್ವಗಳು, ತರಗತಿ

ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ಪೇರೆಂಟ್ ಓರಿಯೆಂಟಷನ್ ಪ್ರೋಗ್ರಾಮ್ Read More »

ಡಾ. ಅನುರಾಧ ಕುರುಂಜಿಯವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026

ಸುಳ್ಯ : ಶಿಕ್ಷಣ ಕ್ಷೇತ್ರ, ಸಾಹಿತ್ಯ ಸಮಾಜಸೇವೆ ಹಾಗೂ ಸಂಘಟನೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಕೊಡುಗೆಗಾಗಿ ಶಿಕ್ಷಣ ತಜ್ಞೆ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಸಾಹಿತಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅನುರಾಧ ಕುರುಂಜಿ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026” ಘೋಷಿಸಲಾಗಿದೆ. ಗಡಿನಾಡು ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಂಚಾಲಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಭವನ ಮತ್ತು ಗ್ರಂಥಾಲಯ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು

ಡಾ. ಅನುರಾಧ ಕುರುಂಜಿಯವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 Read More »

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ, 85 ವರ್ಷದ ಚೆನ್ನಮ್ಮ ಅವರು ಜುಲೈ 18ರಂದು ನಿಧನರಾಗಿದ್ದಾರೆ.ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜುಲೈ 15ರಿಂದ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. 1954ರ ಮೇ 25ರಂದು ದೇವೇಗೌಡರೊಂದಿಗೆ ವಿವಾಹವಾಗಿದ್ದ ಚನ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರಾದಾಗ ತಜ್ಞ ವೈದ್ಯ ಡಾ.ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ Read More »

ಜುಲೈ 25 ; ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ 2026 – 2027ನೇ ಸಾಲಿನ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.25ರಂದು ಸಂಜೆ 7-00ಕ್ಕೆ ಬೆಳ್ಳಾರೆಯ ದೇವಿ ಹೈಟ್ಸ್‌ನಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ರೋ‌.ಆರೀಫ್ ಬಿ.ಎಂ ಹಾಗೂ ಕಾರ್ಯದರ್ಶಿ ಪ್ರಶಾಂತ್ ಟಿ.ಎಂ ತಿಳಿಸಿದ್ದಾರೆ.ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು‌.ಪದಗ್ರಹಣ ಅಧಿಕಾರಿಯಾಗಿ ಪೂರ್ವ ಜಿಲ್ಲಾ ಗವರ್ನರ್ ರೊ| ಎ. ಆರ್. ರವೀಂದ್ರ ಭಟ್‌ರವರು, ಗೌರವ ಅತಿಥಿಗಳಾಗಿ ವಲಯದ ಸಹಾಯಕ ಗವರ್ನರ್ ರೊ।

ಜುಲೈ 25 ; ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ Read More »

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆಯ ಮುನ್ಸೂಚನೆ ಇರುವ ಕಾರಣ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು.18ರ ಶನಿವಾರ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಲಾವಣ್ಯ ಹತ್ಯೆ ಆರೋಪಿಯ ಬಂಧನ

ಬಿ.ಸಿ.ರೋಡ್ ಕೆಎಸ್‌ಆರ್ಟಿಸಿ ಬಸ್‌ ನಿಲ್ದಾಣದಲ್ಲಿಜು.16 ಸಂಜೆ ಯುವತಿ ಲಾವಣ್ಯಳ‌ನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಅರೋಪಿ ಚೇತನ್ ವಿಷಪ್ರಾಷನ ಮಾಡಿದ್ದು, ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಂಟ್ವಾಳ ತಾಲೂಕಿನ ಉಳಿ ಗ್ರಾಮ ನಿವಾಸಿ ಲಾವಣ್ಯ (21) ಎಂಬಾಕೆಯನ್ನು ಬೆಳ್ತಂಗಡಿ ಒಡಿಲ್ನಾಳ ನಿವಾಸಿ, ಆಕೆಯ ದೂರದ ಸಂಬಂಧಿ ಚೇತನ್ ಎಂಬಾತ ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದ.ಆದರೆ ಈ ವೇಳೆ ಆರೋಪಿ ಇಲಿ ಪಾಷಾಣ ಸೇವಿಸಿದ್ದ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವೀಡಲಾಗುತ್ತಿದೆ ಎಂದು ಎಸ್ ಪಿ

ಲಾವಣ್ಯ ಹತ್ಯೆ ಆರೋಪಿಯ ಬಂಧನ Read More »

ರೋಟರಿ ಕ್ಲಬ್ ಸುಳ್ಯ ಸಿಟಿವತಿಯಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು. ಸ್ವಚ್ಛತೆಯ ಸಲುವಾಗಿ ದೇವಸ್ಥಾನಕ್ಕೆ ಕಸದ ಬುಟ್ಟಿಗಳನ್ನು ಹಸ್ತಾಂತರಿಸಲಾಯಿತು ಉಪ ವಲಯ ಅರಣ್ಯಧಿಕಾರಿ ರೊ .ವೆಂಕಟೇಶ್ ,ಪಾರೆಸ್ಟ್ ಗಾರ್ಡ್ ಮನೋಜ್, ಸಿಬ್ಬಂದಿಗಳು ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಕೊಳಲುಮೂಲೆ,ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್, ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ, ದೇವಳದ

ರೋಟರಿ ಕ್ಲಬ್ ಸುಳ್ಯ ಸಿಟಿವತಿಯಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ Read More »

ಚೊಕ್ಕಾಡಿ ವಿದ್ಯಾಸಂಸ್ಥೆಗಳ 54 ನೇ ವರ್ಷದ ಸ್ಥಾಪನಾ ದಿನಾಚರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಸುಳ್ಯ ತಾಲೂಕಿನ ಅಮರಮಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿರುವ ಚೊಕ್ಕಾಡಿ ವಿದ್ಯಾಸಂಸ್ಥೆಗಳ 54 ನೇ ವರ್ಷದ ಸ್ಥಾಪನಾ ದಿನಾಚರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು. 14 ರಂದು ಶಾಲಾ ಸಭಾಭವನದಲ್ಲಿ ನಡೆಯಿತು.ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಇದರ ಅಧ್ಯಕ್ಷರಾದ ನಿರಂಜನ್ ಕೊಡ್ತುಗುಳಿ ಯವರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪಂಜ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂ‌ರ್, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಡೀನ್‌ ವಿಜಯ ಸರಸ್ವತಿ ಬಿ, ಸುಳ್ಯಕ್ಷೇತ್ರ ಶಿಕ್ಷಣಾಧಿಕಾರಿ ವೈ .ಎಸ್. ಹರಗಿ,

ಚೊಕ್ಕಾಡಿ ವಿದ್ಯಾಸಂಸ್ಥೆಗಳ 54 ನೇ ವರ್ಷದ ಸ್ಥಾಪನಾ ದಿನಾಚರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ Read More »

error: Content is protected !!
Scroll to Top