August 2026

80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ 60 ಸಾವಿರ ಲಡ್ಡು ವಿತರಣೆ

80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಳ್ಯ ಹಾಗೂ ಕಡಬ ತಾಲೂಕಿನ 161 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಹಾಗೂ ಸುಳ್ಯ ಮತ್ತು ಕಡಬ ತಾಲೂಕು ಪಂಚಾಯತ್‌ಗಳು ಮತ್ತು ಕಡಬ ಪಟ್ಟಣ ಪಂಚಾಯತ್‌ಗೆ ಸುಮಾರು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ 60 ಸಾವಿರ ಲಡ್ಡು ಪ್ರಸಾದವನ್ನು ವಿತರಿಸಲಾಗಿದೆ.ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಶ್ರೀ ಕ್ಷೇತ್ರದ ಪ್ರಸಾದ ತಲುಪಿಸುವ ಉದ್ದೇಶದಿಂದ ದೇವಳದ ವತಿಯಿಂದ ಈ ವಿಶೇಷ

80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ 60 ಸಾವಿರ ಲಡ್ಡು ವಿತರಣೆ Read More »

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಸುಳ್ಯ ತಾಲೂಕು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಾಧಿಕಾರಿ ಡಾ|| ಡಿ ವೀರೆಂದ್ರ ಹೆಗ್ಗಡೆಯವರ ಆಶಯದಂತೆ “ನಮ್ಮ ಊರು ನಮ್ಮ ಶ್ರದ್ಧಾ ಕೇಂದ್ರ “ಸ್ವಚ್ಛತಾ ಸಪ್ತಾಹ” ಕಾರ್ಯಕ್ರಮವನ್ನು ಪ್ರತಿ ವರ್ಷ 2 ಬಾರಿ ಸ್ವಾತಂತ್ರೋತ್ಸವ ಹಾಗೂ ಮಕರ ಸಂಕ್ರಮಣರಂದು ಸುಳ್ಯ ತಾಲೂಕಿನಾದ್ಯಂತ ಅನೇಕ ದೇವಸ್ಥಾನ, ದೈವಸ್ಥಾನ, ಸರಕಾರಿ ಶಾಲಾ ಆವರಣ,ಭಜನಾ ಮಂದಿರಗಳ ಆವರಣ ಹಾಗೂ ಇತರೆ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅದೇ ರೀತಿ

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ Read More »

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಿಶ್ವ ಆನೆ ದಿನಾಚರಣೆ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಆ.12 2026 ರಂದು ಕರ್ನಾಟಕ ಅರಣ್ಯ ಇಲಾಖೆ ಸುಬ್ರಮಣ್ಯ ಉಪವಿಭಾಗ, ಮಂಗಳೂರು ವಿಭಾಗ ವತಿಯಿಂದ ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಕು. ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ, ಆನೆಗಳಿಂದ ತಾಲೂಕಿನಲ್ಲಿ ಉಂಟಾಗುವ ಸಮಸ್ಯೆಗಳನ್ನು ಹಾಗೂ ಇದಕ್ಕೆ ತಕ್ಕ ಪರಿಹಾರವಾಗಬೇಕು ಎಂದು ತಿಳಿಸುತ್ತಾ ಅಧ್ಯಕ್ಷೀಯ ಮಾತುಗಳನ್ನಾಡಿದರು. ಈ ಸಂಧರ್ಭದಲ್ಲಿ ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ರಚಿಸಲ್ಪಟ್ಟ ಕೃತಿ –

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಿಶ್ವ ಆನೆ ದಿನಾಚರಣೆ Read More »

ವಸತಿ ಶಾಲೆಗಳ ವಿವಿಧ ಸಿ ಗ್ರೂಪ್  ಹುದ್ದೆಗೆಗಳ ಭರ್ತಿಗೆ ಅರ್ಜಿ ಆಹ್ವಾನ ಅವಧಿ ವಿಸ್ತರಣೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ವಸತಿ ಶಾಲೆಗಳಲ್ಲಿನ (ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಅಟಲ್ ಬಿಹಾರಿ ವಾಜಪೇಯಿ / ಶ್ರೀಮತಿ ಇಂದಿರಾಗಾಂಧಿ /ಡಾ.ಬಿ.ಆ‌ರ್.ಅಂಬೇಡ್ಕರ್ ವಸತಿ ಶಾಲೆಗಳು) ಉಳಿಕೆ ಮೂಲ ವೃಂದದಲ್ಲಿ ಖಾಲಿಯಿರುವ ವಿವಿಧ ಗ್ರೂಪ್-ಸಿ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ದಿನಾಂಕ 10.07.2026 ರಂದು ಅಧಿಸೂಚನೆ ಹೊರಡಿಸಿ ದಿನಾಂಕ 13.08.2026 ರವರೆಗೆ ಅರ್ಜಿ ಸಲ್ಲಿಸಲು

ವಸತಿ ಶಾಲೆಗಳ ವಿವಿಧ ಸಿ ಗ್ರೂಪ್  ಹುದ್ದೆಗೆಗಳ ಭರ್ತಿಗೆ ಅರ್ಜಿ ಆಹ್ವಾನ ಅವಧಿ ವಿಸ್ತರಣೆ Read More »

ಕೇರಳ ಸ್ಟೇಟ್ ಇಂಟರ್ ಡಿಸ್ಟಿಕ್ ಕ್ಲಬ್ ಅತ್ಲೇಟಿಕ್ ಚಾಂಪಿಯನ್ ಶಿಪ್, ಹ್ಯಾಮರ್ ಥ್ರೋ ವಿಭಾಗದಲ್ಲಿ ಅನುಷಾ ತ್ರತೀಯ

ಕು. ಅನುಷಾ. ಬಿ ಕೇರಳದ ಕೊಲ್ಲo ನಲ್ಲಿ ಆ 6ರಂದು ನಡೆದ 19 ನೇ ಕೇರಳ ಸ್ಟೇಟ್ ಇಂಟರ್ ಡಿಸ್ಟಿಕ್ ಕ್ಲಬ್ ಅತ್ಲೇಟಿಕ್ ಚಾಂಪಿಯನ್ ಶಿಪ್ ನಲ್ಲಿ ಹ್ಯಾಮರ್ ಥ್ರೋ ವಿಭಾಗದಲ್ಲಿ ತ್ರತೀಯ ಸ್ಥಾನ ಪಡೆದಿರುತ್ತಾರೆ.ಇವರು ರಾಷ್ಟ ಮಟ್ಟದ ಅತ್ಲೇಟಿಕ್ಸ್ ನಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ. ಅಲ್ಲದೆ 3 ಬಾರಿ ಕೇರಳ ಹಾಗೂ 2 ಬಾರಿ ಕರ್ನಾಟಕ ಅತ್ಲೇಟಿಕ್ ಚಾಂಪಿಯನ್ ಶಿಪ್ ನಲ್ಲಿ ತ್ರತೀಯ ಸ್ಥಾನ ಪಡೆದಿರುತ್ತಾರೆ .ಇವರು ಕಲ್ಲಪಳ್ಳಿಯ ದಿ| ಭಾಸ್ಕರ ಮತ್ತು ಪುಷ್ಪಾವತಿ ಯವರ

ಕೇರಳ ಸ್ಟೇಟ್ ಇಂಟರ್ ಡಿಸ್ಟಿಕ್ ಕ್ಲಬ್ ಅತ್ಲೇಟಿಕ್ ಚಾಂಪಿಯನ್ ಶಿಪ್, ಹ್ಯಾಮರ್ ಥ್ರೋ ವಿಭಾಗದಲ್ಲಿ ಅನುಷಾ ತ್ರತೀಯ Read More »

ಬಾಳಿಲ : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಂತಿಕಲ್ಲು ವಲಯ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿಂತಿ ಕಲ್ಲು ವಲಯ,ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲದ ಶಾಲಾ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು.ಜನಜಾಗೃತಿ ವೇದಿಕೆ ನಿಂತಿ ಕಲ್ಲು ವಲಯದ ಸದಸ್ಯರಾದ ಕೂಸಪ್ಪ ಗೌಡ ಮುಗಪ್ಪು ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಜನಜಾಗೃತಿ ಕಾರ್ಯಕ್ರಮ ಮತ್ತು ದುಶ್ಚಟ ಮುಕ್ತ ಸಮಾಜದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗಿ.ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು.ಶಾಲಾ ಮುಖ್ಯ ಗುರುಗಳಾದ ಉದಯಕುಮಾರ್ ರೈಯವರು ಅಧ್ಯಕ್ಷತೆಯನ್ನು ವಹಿಸಿ.

ಬಾಳಿಲ : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ Read More »

ಬೆಳ್ಳಾರೆ : ಮಹಿಳೆ ಮಗುವಿನೊಂದಿಗೆ ನಾಪತ್ತೆ

ಪುತ್ತೂರು ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಕುಂಟಿಕಾನ ನಿವಾಸಿ ವಿವಾಹಿತೆ ಮಹಿಳೆಯೊಬ್ಬರು ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಆ.10ರಂದು ವರದಿಯಾಗಿದೆ.ರಮ್ಯಾ ಎ. ವಿ( 29 ವರ್ಷ )ಹಾಗೂ ಅವರ ಪುತ್ರಿ ಪ್ರಾಪ್ತಿ 3 ವರ್ಷ ಇವರು ಮನೆಯಿಂದ ನಾಪತ್ತೆಯಾದವರು.ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ತಾಯಿ ಮಗು ಕಂಡು ಬಂದಲ್ಲಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳ್ಳಾರೆ : ಮಹಿಳೆ ಮಗುವಿನೊಂದಿಗೆ ನಾಪತ್ತೆ Read More »

ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಟಿ ಗಮ್ಮತ್ತು ಕಾರ್ಯಕ್ರಮ

ಆಟಿ ಉತ್ಸವದಲ್ಲಿ ನಮ್ಮ ಆಚರಣೆಗಳನ್ನು ನಂಬಿಕೆಗಳನ್ನು ದಾರಿ ತಪ್ಪಿಸುವ ಕೆಲಸ ನಡೆಯಬಾರದು ಎಂದು ಸಾಹಿತಿ ವಿಮಲಾರುಣ ಪಡ್ಡಂಬೈಲು ಹೇಳಿದರು.ತಾಲೂಕು ಪಂಚಾಯತ್ ಸುಳ್ಯ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ (ರಿ) ಸುಳ್ಯ ಇವರ ಸಹಯೋಗದಲ್ಲಿ ತುಳುನಾಡಿನ ಕಟ್ಟು-ಕಟ್ಟಳೆ, ಪರಂಪರೆ ಮತ್ತು ತಿನಿಸುಗಳ ಸಂಭ್ರಮವನ್ನು ಒಂದಾಗಿ ಆಚರಿಸಲು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ.13ರಂದು ಹಮ್ಮಿಕೊಂಡ ಆಟಿ ಗಮ್ಮತ್ತು ಕಾರ್ಯಕ್ರಮದಲ್ಲಿ ಅವರು

ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಟಿ ಗಮ್ಮತ್ತು ಕಾರ್ಯಕ್ರಮ Read More »

ಸುಳ್ಯ:  ಎನ್ನೆಂಸಿಯಲ್ಲಿ ಆಟಿ ಆಚರಣೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಇವರ ಆಶ್ರಯದಲ್ಲಿ ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ, ಕನ್ನಡ ಸಂಘ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸಂಘದ ಸಹಯೋಗದೊಂದಿಗೆ ‘ಆಟಿನ ನೆನಪು – ಸಂಪ್ರದಾಯದ ಮೆಲುಕು’ ಎಂಬ ಶೀರ್ಷಿಕೆಯಲ್ಲಿ ಆಟಿ ಆಚರಣೆ ಕಾಲೇಜಿನ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ಎ.ಒ ಎಲ್.ಐ. (ರಿ.), ಸುಳ್ಯದ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ದೀಪ ಬೆಳಗಿ, ಹಿಂಗಾರ ಅರಳಿಸಿ ಉದ್ಘಾಟಿಸಿ ಮಾತನಾಡುತ್ತಾ,ಇಂದಿನ

ಸುಳ್ಯ:  ಎನ್ನೆಂಸಿಯಲ್ಲಿ ಆಟಿ ಆಚರಣೆ Read More »

ಗೋಮೂತ್ರಕ್ಕೂ ಬಂತು ಬೇಡಿಕೆ !

ಹೈನುಗಾರಿಕೆಯಲ್ಲಿ ರೈತರು ಮತ್ತಷ್ಟು ಆದಾಯ ಪಡೆಯುವ ಉದ್ದೇಶದಿಂದ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗೋಮೂತ್ರ ಸಂಗ್ರಹಣೆ ಹಾಗೂ ಖರೀದಿಗೆ ಪೈಲಟ್ ಯೋಜನೆಯೊಂದನ್ನು ಆರಂಭಿಸಲಾಗಿದೆ. ಹೈನುಗಾರಿಕೆ ಕೈಗೊಂಡ ರೈತರಿಂದ ಪ್ರತಿ ಲೀಟರ್‌ಗೆ ₹10 ದರದಲ್ಲಿ ಗೋಮೂತ್ರ ಖರೀದಿಸಲಾಗುತ್ತಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೋ ಸಂರಕ್ಷಣೆ, ಸಾವಯವ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದ ಭಾಗವಾಗಿ ಈ ಉಪಕ್ರಮ ಆರಂಭಿಸಲಾಗಿದೆ. ಬುಲಂದ್‌ಶಹರ್‌ನ ಸ್ಯಾನಾ ಪ್ರದೇಶದ 15 ಗ್ರಾಮಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಯೋಜನೆಗೆ ಚಾಲನೆ ನೀಡಲಾಗಿದೆ.ಈ ಯೋಜನೆಯಡಿ ಸಂಗ್ರಹಿಸಿದ

ಗೋಮೂತ್ರಕ್ಕೂ ಬಂತು ಬೇಡಿಕೆ ! Read More »

error: Content is protected !!
Scroll to Top