ಕೇರಳ ಸ್ಟೇಟ್ ಇಂಟರ್ ಡಿಸ್ಟಿಕ್ ಕ್ಲಬ್ ಅತ್ಲೇಟಿಕ್ ಚಾಂಪಿಯನ್ ಶಿಪ್, ಹ್ಯಾಮರ್ ಥ್ರೋ ವಿಭಾಗದಲ್ಲಿ ಅನುಷಾ ತ್ರತೀಯ

ಕು. ಅನುಷಾ. ಬಿ ಕೇರಳದ ಕೊಲ್ಲo ನಲ್ಲಿ ಆ 6ರಂದು ನಡೆದ 19 ನೇ ಕೇರಳ ಸ್ಟೇಟ್ ಇಂಟರ್ ಡಿಸ್ಟಿಕ್ ಕ್ಲಬ್ ಅತ್ಲೇಟಿಕ್ ಚಾಂಪಿಯನ್ ಶಿಪ್ ನಲ್ಲಿ ಹ್ಯಾಮರ್ ಥ್ರೋ ವಿಭಾಗದಲ್ಲಿ ತ್ರತೀಯ ಸ್ಥಾನ ಪಡೆದಿರುತ್ತಾರೆ.
ಇವರು ರಾಷ್ಟ ಮಟ್ಟದ ಅತ್ಲೇಟಿಕ್ಸ್ ನಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ. ಅಲ್ಲದೆ 3 ಬಾರಿ ಕೇರಳ ಹಾಗೂ 2 ಬಾರಿ ಕರ್ನಾಟಕ ಅತ್ಲೇಟಿಕ್ ಚಾಂಪಿಯನ್ ಶಿಪ್ ನಲ್ಲಿ ತ್ರತೀಯ ಸ್ಥಾನ ಪಡೆದಿರುತ್ತಾರೆ .
ಇವರು ಕಲ್ಲಪಳ್ಳಿಯ ದಿ| ಭಾಸ್ಕರ ಮತ್ತು ಪುಷ್ಪಾವತಿ ಯವರ ಮಗಳಾಗಿದ್ದು, ಆಲೆಟ್ಟಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ SDM ಕಾಲೇಜು ಉಜಿರೆ ಇಲ್ಲಿ ದ್ವಿತೀಯ ವರ್ಷದ ಬಿ. ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ದೈಹಿಕ ನಿರ್ದೇಶಕರಾದ ಸಂದೇಶ್ ಪೂಂಜ ಇವರು ತರಬೇತಿ ನೀಡುತ್ತಿದ್ದಾರೆ





















Leave a Comment

Your email address will not be published. Required fields are marked *

error: Content is protected !!
Scroll to Top