August 2026

ಅರಣ್ಯ ಇಲಾಖೆಯ‌ ಬೊಲೆರೋ ಹಾಗೂ ಮಹೀಂದ್ರ ಜೀತೋ ವಾಹನದ ನಡುವೆ ಅಪಘಾತ

ಸುಳ್ಯದ ಹಳೇಗೇಟು ಬಳಿ ಅರಣ್ಯ ಇಲಾಖೆಯ‌ ಬೊಲೆರೋ ಹಾಗೂ ಮಹೀಂದ್ರ ಜೀತೋ ವಾಹನದ ನಡುವೆ ಅಪಘಾತ ಸಂಭವಿಸಿದ ಘಟನೆ ಆ.12ರಂದು ಸಂಜೆ ವರದಿಯಾಗಿದೆ.ಅರಣ್ಯ ಇಲಾಖೆಯ ಬೊಲೆರೋ ವಾಹನವು ಸುಳ್ಯದಿಂದ ಪೈಚಾರ್ ಕಡೆಗೆ ಹೋಗುತ್ತಿತ್ತು. ಮಹೀಂದ್ರ ಜೀತೋ ವಾಹನವು ಮಡಿಕೇರಿ ಕಡೆಗೆ ಹೋಗುತ್ತಿತ್ತು.ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ವಾಹನಗಳು ಜಖಂಗೊಂಡಿವೆ‌.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ‌.

ಅರಣ್ಯ ಇಲಾಖೆಯ‌ ಬೊಲೆರೋ ಹಾಗೂ ಮಹೀಂದ್ರ ಜೀತೋ ವಾಹನದ ನಡುವೆ ಅಪಘಾತ Read More »

ಸುಳ್ಯ ತಾಲೂಕು ಕಚೇರಿಗೆ ಲೋಕಾಯುಕ್ತ ದಿಡೀರ್ ದಾಳಿ!

ಸುಳ್ಯ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಆ.12ರಂದು ದಿಡೀರ್ ದಾಳಿ ನಡೆಸಿದ್ದಾರೆ.ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕಡತಗಳ ಪರಿಶೀಲನೆ,ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ‌.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಸುಳ್ಯ ತಾಲೂಕು ಕಚೇರಿಗೆ ಲೋಕಾಯುಕ್ತ ದಿಡೀರ್ ದಾಳಿ! Read More »

ಫ್ರಿಡ್ಜ್ ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿ

ಫ್ರಿಡ್ಜ್ ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರಿನಲ್ಲಿ ಆ.11ರ ಸಂಜೆ ನಡೆದಿದೆ.ಈ ಘಟನೆ ನಡೆದಿರುವುದು ಆತೂರಿನ ಸಿದ್ದಿಕ್ ಅವರ ಮನೆಯಲ್ಲಿ.ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು, ಮೇಲ್ಛಾವಣಿ ಹಾಗೂ ಪೀಠೋಪಕರಣಗಳಿಗೆ ಹಾನಿಯಾಗಿದೆ. ಸ್ಫೋಟದ ಬೆನ್ನಲ್ಲೇ ಬೆಂಕಿ ಮನೆಯೊಳಗೆ ವ್ಯಾಪಿಸಿದ್ದರಿಂದ ಇತರ ಎಲೆಕ್ಟ್ರಾನಿಕ್ ಉಪಕರಣಗಳು

ಫ್ರಿಡ್ಜ್ ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿ Read More »

ಆಗಸ್ಟ್ 18 : ವಿವಿಧ ಭೇಡಿಕೆಗಳ ಇಡೇರಿಕೆಗೆ ಒತ್ತಾಯಿಸಿ ಮಂಗಳೂರಿನಲ್ಲಿ BMS ಪ್ರತಿಭಟನೆ

ಭಾರತೀಯ ಮಜೂರ್ ಸಂಘ (BMS) ವತಿಯಿಂದ ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ BMS ವತಿಯಿಂದ ಆಗಸ್ಟ್ 18ರಂದು ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಮಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದುಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಕಲ್ಮಂಜ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಾರ್ಮಿಕರಿಗೆ ನ್ಯಾಯಯುತ ವೇತನ,

ಆಗಸ್ಟ್ 18 : ವಿವಿಧ ಭೇಡಿಕೆಗಳ ಇಡೇರಿಕೆಗೆ ಒತ್ತಾಯಿಸಿ ಮಂಗಳೂರಿನಲ್ಲಿ BMS ಪ್ರತಿಭಟನೆ Read More »

ಕೊಡಗು ಜಿಲ್ಲಾಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆದರ್ಶ ಪ್ರೆಂಡ್ಸ್ ಚೆಡಾವು ತಂಡಕ್ಕೆ ದಾಖಲೆಯ 1 ಗಂಟೆ ಹಗ್ಗ ಹಿಡಿದು ಗೆಲುವು

ಕೊಡಗು ಜಿಲ್ಲಾಮಟ್ಟದ ಹಗ್ಗಜಗ್ಗಾಟವಿರಾಜಪೇಟೆಯಲ್ಲಿ ನಡೆದ ಹಗ್ಗಜಗ್ಗಾಟ ಪಂದ್ಯದಲ್ಲಿ ವಿಷ್ಣ್ಣು ಬೇಗೂರು ತಂಡದ ವಿರುದ್ಧ ಸಂಪಾಜೆ ಚೆಡಾವಿನ ಆದರ್ಶ ಪ್ರೆಂಡ್ಸ್ ಚೆಡಾವು ತಂಡ ದಾಖಲೆಯ 1.ಗಂಟೆ ಹಗ್ಗ ಹಿಡಿದು ಗೆಲುವು ತನ್ನದಾಗಿಸಿಕೊಂಡು ಕೊಡಗು ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದೆ.

ಕೊಡಗು ಜಿಲ್ಲಾಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆದರ್ಶ ಪ್ರೆಂಡ್ಸ್ ಚೆಡಾವು ತಂಡಕ್ಕೆ ದಾಖಲೆಯ 1 ಗಂಟೆ ಹಗ್ಗ ಹಿಡಿದು ಗೆಲುವು Read More »

ಜ್ಞಾನದೀಪ ಗೌರವ ಶಿಕ್ಷಕರನ್ನು ನೀಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಪಂದನೆ ಮಾಡಿರುವುದು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದಂತಾಗಿದೆ : ವೈ.ಎಸ್.ಹರಗಿ

ಶಿಕ್ಷಕರ ಕೊರೆತೆಗೆ ಜ್ಞಾನದೀಪ ಗೌರವ ಶಿಕ್ಷಕರನ್ನು ನೀಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಪಂದನೆ ಮಾಡಿರುವುದು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದಂತಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ ಹೇಳಿದರು.ಸುಳ್ಯತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಇಲ್ಲಿಯ ಸಭಾಭವನದಲ್ಲಿ ಆ.11ರಂದು ಜ್ಞಾನದೀಪ ಗೌರವ ಶಿಕ್ಷಕರ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ತಾಲೂಕಿನ 138 ಪ್ರಾಥಮಿಕ ಶಾಲೆಗಳಲ್ಲಿ 225 ಶಿಕ್ಷಕರ ಕೊರತೆ ಇದೆ. 15 ಮಂದಿ ಶಿಕ್ಷಕರು ಈಗಾಲೇ ನಿವ್ರತ್ತಿ ಹೊಂದಿದ್ದಾರೆ.ಇಂತಹ ಸಂಕಷ್ಟದಲ್ಲಿ

ಜ್ಞಾನದೀಪ ಗೌರವ ಶಿಕ್ಷಕರನ್ನು ನೀಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಪಂದನೆ ಮಾಡಿರುವುದು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದಂತಾಗಿದೆ : ವೈ.ಎಸ್.ಹರಗಿ Read More »

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ವಿಶೇಷ ಗ್ರಾಮ ಸಭೆ ಕರೆಯಲು ರೈತ ಸಂಘದಿಂದ ಮನವಿ

ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ವಿಶೇಷ ಗ್ರಾಮ ಸಭೆ ಕರೆದು ನಿರ್ಣಾಯಿಸಿ ಸರಕಾರಕ್ಕೆ ಬರೆಯಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ಪಿ.ಡಿ.ಒ‌ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಉಪಾಧ್ಯಕ್ಷ ತೀರ್ಥರಾಮ‌ ಉಳುವಾರುಹಾಗೂ ಸದಸ್ಯರಾದ ಕೆ. ದೇವಪ್ಪ ಗೌಡ ಮನವಿ ಸಲ್ಲಿಸಿದ್ದಾರೆ.ರೈತಾಪಿ ವರ್ಗದ ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪೂರ್ವಜರಿಂದ ಬಂದಂತಹ ಭೂಮಿಯಲ್ಲಿ ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದೇವೆ. ಆದರೆ ಈಗಿನ ಸರಕಾರಗಳು ಬಡ ಕೃಷಿಕರ ತಲೆಯ ಮೇಲೆ ಕಲ್ಲುಚಪ್ಪಡಿ ಎಳೆಯಲು ಕಸ್ತೂರಿರಂಗನ್ ಎಂಬ

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ವಿಶೇಷ ಗ್ರಾಮ ಸಭೆ ಕರೆಯಲು ರೈತ ಸಂಘದಿಂದ ಮನವಿ Read More »

ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ನೋಂದಣಿಯ ಅವಧಿ ವಿಸ್ತರಣೆ

“ತೋಟಗಾರಿಕಾ ಬೆಳೆಗಳನ್ನು ಬೆಳೆದ ರೈತರು ಹವಾಮಾನವೈಪರಿತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2026-27ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮುಗಳಿಗೆಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ನೋಂದಣಿಯ ಅಂತಿಮ ದಿನಾಂಕವನ್ನು ಆ.17 ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ಜಿಲ್ಲಾ ತೋಟಗಾರಿಕಾ ಜಂಟಿ ನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ. ಸದರಿ ಯೋಜನೆಯ ಅಡಿಯಲ್ಲಿ ಸಾಲ ಪಡೆದ/ಪಡೆಯದ ರೈತರು ನೋಂದಾವಣೆಗೊಳ್ಳಲುಅಂತಿಮ ದಿನಾಂಕವನ್ನು

ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ನೋಂದಣಿಯ ಅವಧಿ ವಿಸ್ತರಣೆ Read More »

ತೊಡಿಕಾನ : ಸ್ವಚ್ಚತಾ ಕಾರ್ಯಕ್ರಮ

ಶ್ರೀ. ಕ್ಷೇ.ಧ.ಗ್ರಾ.ಯೋಜನೆ (ರಿ)ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯದ ತೊಡಿಕಾನ ಕಾರ್ಯ ಕ್ಷೇತ್ರದ ವತಿಯಿಂದ ಸ್ವಾತಂತ್ರೊತ್ಸವದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮವು ಸುಳ್ಯ ಸೀಮೆ ಮಹತೋಭಾರ ತೊಡಿಕಾನ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ಬಸ್ ತಂಗುದಾಣಗಳ ಸ್ವಚ್ಚತೆ ಒಕ್ಕೂಟದ ಪದಾದಿಕಾರಿಗಳು, ಸದಸ್ಯರುಗಳು ಹಮ್ಮಿಕೊಂಡರು. ಅರಂತೋಡು ಗ್ರಾಮ ಪಂಚಾಯತ್ ನವರು ಸಹಕಾರ ನೀಡಿದರು.ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಹೂವಯ್ಯ ಗೌಡ ಸೀತಾ ಪಂಜಿ ಕೋಡಿ,ವಿಶಾಲಾಕ್ಷಿ ಅಡ್ಯಡ್ಕ,ರತ್ನಾವತಿ ಪಂಜಿ ಕೋಡಿ, ರವೀಶ ಶೆಟ್ಯಡ್ಕ,ಲಿಲಾ ವತಿ ಕೆಮ್ಮಾರ, ಪ್ರೇಮಲತಾ ಬಾಳೆ ಕಜೆ,ಸುಲೋಚನಾ ಮುಪ್ಪ

ತೊಡಿಕಾನ : ಸ್ವಚ್ಚತಾ ಕಾರ್ಯಕ್ರಮ Read More »

ಆಗಸ್ಟ್ 15ರಂದು ಸುಳ್ಯದಲ್ಲಿ ಆಟಿ ಕೂಟ – 2026 ಆಮಂತ್ರಣ ಪತ್ರಿಕೆ ಬಿಡುಗಡೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ “ಕಾಫಿಕೃಪಾ” ಕಟ್ಟಡ ರಾಜಸೀಟ್ ರಸ್ತೆ, ಮಡಿಕೇರಿ, ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ, ಸಂಧ್ಯಾಚೇತನ ಪ್ರವಾಸ ಬಳಗ ಸುಳ್ಯ ಇವರ ಆಶ್ರಯದಲ್ಲಿ “ಆಟಿ ಕೂಟ -2026′ ಆಟಿ ತಿಂಗಳ್ ನ ಆಚರಣೆಗ, ಜನಪದ ಪದ್ದತಿನ ನೆಂಪಿಸುವ ಜಂಬರ ಆಗಸ್ಟ್ 15ರಂದು ಸುಳ್ಯದ ಕನ್ನಡ ಭವನದಲ್ಲಿ ವಿವಿಧ ಆಟಿಕೂಟದ ಪಂತಗಳೊಟ್ಟಿಗೆ ಕಾರ್ಯಕ್ರಮ ನಡೆಯಲ್ಲಿದ್ದು, ಆಮಂತ್ರಣ ಪತ್ರಿಕೆಯನ್ನು ಜೇಸಿ ಭವನ ಸುಳ್ಯದಲ್ಲಿ ಘಟಕಾಧ್ಯಕ್ಷರಾದ ಜೆ. ಎಪ್. ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ

ಆಗಸ್ಟ್ 15ರಂದು ಸುಳ್ಯದಲ್ಲಿ ಆಟಿ ಕೂಟ – 2026 ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top