ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಟಿ ಗಮ್ಮತ್ತು ಕಾರ್ಯಕ್ರಮ

ಆಟಿ ಉತ್ಸವದಲ್ಲಿ ನಮ್ಮ ಆಚರಣೆಗಳನ್ನು ನಂಬಿಕೆಗಳನ್ನು ದಾರಿ ತಪ್ಪಿಸುವ ಕೆಲಸ ನಡೆಯಬಾರದು ಎಂದು ಸಾಹಿತಿ ವಿಮಲಾರುಣ ಪಡ್ಡಂಬೈಲು ಹೇಳಿದರು.
ತಾಲೂಕು ಪಂಚಾಯತ್ ಸುಳ್ಯ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ (ರಿ) ಸುಳ್ಯ ಇವರ ಸಹಯೋಗದಲ್ಲಿ ತುಳುನಾಡಿನ ಕಟ್ಟು-ಕಟ್ಟಳೆ, ಪರಂಪರೆ ಮತ್ತು ತಿನಿಸುಗಳ ಸಂಭ್ರಮವನ್ನು ಒಂದಾಗಿ ಆಚರಿಸಲು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ.13ರಂದು ಹಮ್ಮಿಕೊಂಡ ಆಟಿ ಗಮ್ಮತ್ತು ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಗಾರರಾಗಿ ಮಾತನಾಡಿದರು.
ಕೆಲವೊಂದು ಕಡೆ ಆಟಿ  ಉತ್ಸವದಲ್ಲಿ ಸಾಂಪ್ರದಾಯಿಕ ಪದ್ಧತಿಗೆ ದಕ್ಕೆಯಾಗುತ್ತಿದೆ. ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲು  ಮನರಂಜನೆಗಾಗಿ ಆಟಿಕಳಂಜನ ಕುಣಿತವನ್ನು ಕಾಣಬಹುದು. ಆದರೆ ಇದು ಮನರಂಜನೆಗಲ್ಲ   ಇದರಿಂದ ಅಟಿ ಕಳಂಜದ ಮೇಲೆ ಇಟ್ಟಂತಹ ನಂಬಿಕೆಗಳು ದುರ್ಬಲವಾಗುತ್ತಿವೆ.
ತುಳುನಾಡಿನ ಆಟಿ ತಿಂಗಳ ಆಚರಣೆಗಳು ಕೇವಲ ಸಂಪ್ರದಾಯಗಳಲ್ಲ; ಅವು ಪ್ರಕೃತಿ, ಆರೋಗ್ಯ, ಕೃಷಿ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಜೀವನಪದ್ಧತಿಗಳಾಗಿವೆ. ಈ ಪರಂಪರೆಯನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸಿ ಉಳಿಸುವ ದೃಷ್ಟಿಯಿಂದ ಆಟಿ ಆಚರಣೆಗಳು ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿವೆ.
ಆಟಿ ಕಾರ್ಯಕ್ರಮವೆಂದು ನಾವು ಸಂಭ್ರಮದಿಂದ ಆಚರಿಸುತ್ತೇವೆ. ಇದು ಆಚರಣೆ ಅಲ್ಲ ಬದುಕು , ಹಿಂದಿ ನ ಬದುಕಿನ ಅರಿವನ್ನು ನಾವು ಮೂಡಿಸಬೇಕು.
 ಆಟಿ ಖಾದ್ಯದ ಮುಖಾಂತರ ಹಿಂದಿನ ಬದುಕಿನ ಆಹಾರ ಪದ್ಧತಿಗಳ ರುಚಿಗೆ ದಕ್ಕೆ ಯಾಗದಂತೆ ತಯಾರು ಮಾಡುವುದು ಸವಾಲು ಎಂದು ಅವರು ಹೇಳಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿಯವರು ಮಾತನಾಡಿ ನಮ್ಮ ಹಿರಿಯರ ನಂಬಿಕೆ ಆಚರಣೆಯ ಹಿಂದೆ ವೈಜ್ಞಾನಿಕ ಸತ್ಯಗಳಿವೆ.ಮೂಡನಂಬಿಕೆಗಳಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ಮಾತನಾಡಿ ಆಟಿ ಆಚರಣೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.ನಮ್ಮ‌ಸಂಸ್ಕತಿ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಕೆಲಸ ನಡೆಯಬೇಕು ಎಂದು ಅವರು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರು ಮಾತನಾಡಿ
ಆಟಿಯ ಮಹತ್ವವನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ಆಟಿ ಆಚರಣೆಯ ಮುಖ್ಯ ಉದ್ದೇಶ.ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಂಘ ಸಂಸ್ಥೆಗಳನ್ಬು ಸೇರಿಸಿಕೊಂಡು ಆಟಿಯ ಮಹತ್ವವನ್ನು ನೆನಪಿಸಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಸುಳ್ಯ ಸೂಡ ಅಧ್ಯಕ್ಷ ಮುಸ್ತಫಾ ಅವರು ಮಾತನಾಡಿ ಆಟಿಯ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣಗಳಿವೆ .ಇದರ ಮಹತ್ವ ನಾನು ಕೂಡ ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು.
ಮಾಜಿ ತಾಲೂಕು ಪಂಚಾಯತ್ ಸ್ಥಾಯಿ‌ ಸಮಿತಿ ಅಧ್ಯಕ್ಷ ರಾಧಾಕೃಷ್ಣನ ಬೊಳ್ಳುರು ಮಾತನಾಡಿ ನಮ್ಮ ಹಿಂದಿನ ಸಂಪ್ರದಾಯಗಳನ್ನು ನಾವು ಮರೆಯುತ್ತಿದ್ದೇವೆ.ಇದು ಉತ್ತಮ ಕಾರ್ಯಕ್ರಮ,ಮುಂದೆಯೂ ಇಂತಹ ಕಾರ್ಯಕ್ರಮ ನಡೆಯಲಿ‌ ಎಂದು ಶುಭ ಹಾರೈಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮಾತನಾಡಿ
ಆಟಿ ಆಚರಣೆಯ ಕಾರ್ಯಕ್ರಮಗಳಿಗೆ ನಾನು ಬಂದಿರುವುದರಿಂದ ಆಟಿಯ
ವಿಶೇಷತೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಸುದ್ದಿ ಸಮೂಹ ಸಂಸ್ಥೆಗಳ ಡಾ. ಯು. ಪಿ. ಶಿವಾನಂದ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಎಸ್. ಹರಗಿ, ಅಕ್ಷರ ದಾಸೋಹ ಅಧಿಕಾರಿ ಎಂ.ಟಿ.ವೀಣಾ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ರವಿಚಂದ್ರ ವ್ಯವಸ್ಥಾಪಕಿ ರಾಜಲಕ್ಷ್ಮಿ,
ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಕಾರ್ಯದರ್ಶಿ
ದಿವ್ಯ ಸುಜಯ್ ಗುಡ್ಡೆಮನೆ ಉಪಸ್ಥಿತರಿದ್ದರು.
ದೇವರಾಜ್ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು.
ಮಹೇಶ್ ಸ್ವಾಗತಿಸಿ, ಶ್ವೇತಾ ವಂದಿಸಿದರು.ಹಲವಾರು ಬಗೆಯ ಆಟಿ ತಿಂಡಿ ತಿನಿಸಿನ‌ ವ್ಯವಸ್ತೆ ಮಾಡಲಾಗಿತ್ತು.ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯಿತು.



















Leave a Comment

Your email address will not be published. Required fields are marked *

error: Content is protected !!
Scroll to Top