August 2026

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ ಮಹಾಸಭೆಯು ಸಂಘದ ಅಧ್ಯಕ್ಷರಾದ ಮೋಹನ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಸಭಾಂಗಣದಲ್ಲಿ ನಡೆಯಿತು.ಕಾರ್ಯದರ್ಶಿ ವಿಮಲಾ ಪೈಕ ವರದಿ ಮಂಡಿಸಿ ಸಭೆಯ ಅನುಮೋದನೆ ಪಡೆಯಲಾಯಿತು. ಮುಖ್ಯ ಅತಿಥಿಗಳಾಗಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶಿವಕುಮಾರ್ ಹಾಲಿನ ಗುಣಮಟ್ಟ ಹಾಗೂ ಇಳುವರಿ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷರು ಮಾತನಾಡಿ ಕಳೆದ ವರ್ಷ ನಮ್ಮ ಸಂಘದಲ್ಲಿ ದಿನಕ್ಕೆ 250 ಲೀ. ಇದ್ದ ಹಾಲು ಈ ಬಾರಿ

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ Read More »

ಕಾಡು ಪ್ರಾಣಿಗಳ ಬೇಟೆಯಾಡಿದ ಆರೋಪಿಗಳ ಬಂಧನ

ಚೆಂಬು ಅರಣ್ಯದಲ್ಲಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ ಇಬ್ಬರು ಆರೋಪಿಗಳನ್ನು ಕೊಡಗು ಕೊಯನಾಡು ಅರಣ್ಯವಲಯ ಸಿಬ್ಬಂದಿಗಳು ಬಂಧಿಸಿದ ಘಟನೆ ವರದಿಯಾಗಿದೆ.ಆರೋಪಿಗಳನ್ನು ಗೌತಮ್ ಚೆಂಬು, ಶರತ್ ಪೆರಾಜೆ, ಹಾಗೂ ಯತಿನ್ ಕಾಡುಪಂಜ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಡಗು ವ್ಯಾಪ್ತಿಗೆ ಒಳಪಟ್ಟ ಚೆಂಬು ಅರಣ್ಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ ಬೇಟೆಯಾಡಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ . ಬಳಿಕ ಮಾಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕೆ. ಎ 12 ರಿಜಿಸ್ಟ್ರೇಷನ್ ನ ಇಕೋ ಕಾರಿನ ಮೂಲಕ

ಕಾಡು ಪ್ರಾಣಿಗಳ ಬೇಟೆಯಾಡಿದ ಆರೋಪಿಗಳ ಬಂಧನ Read More »

ಸುಳ್ಯ ನ.ಪಂ. ಮುಂಭಾಗದ ಶೆಡ್‌ನಲ್ಲಿರುವ ಕಸ ತೆರವುಗೊಳಿಸಿ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಆರೋಗ್ಯ ಸಚಿವ ಯು. ಟಿ. ಖಾದರ್ ರವರಿಗೆ ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಮೋಂಟಡ್ಕ ಮನವಿ

ಸುಳ್ಯ ನಗರ ಪಂಚಾಯತ್ ಮುಂಭಾಗದ ಶೆಡ್‌ನಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಕಸವನ್ನು ತೆರವುಗೊಳಿಸಿ, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಮೋಂಟಡ್ಕ ಆರೋಗ್ಯ ಸಚಿವ ಯು.ಟಿ ಖಾದರ್ ರವರಿಗೆ ಇಂದು ಮನವಿ ಸಲ್ಲಿಸಿದ್ದಾರೆ.ಪ್ರಾಕೃತಿಕ ವಿಕೋಪ ಪ್ರಗತಿ ಪರಿಶೀಲನಾ ಸಭೆಗೆ ಇಂದು ಸುಳ್ಯಕ್ಕೆ ಆಗಮಿಸಿದ ವೇಳೆ ಸುಪ್ರೀತ್ ರವರು ಸಚಿವರಿಗೆ ಈ ಮನವಿ ಸಲ್ಲಿಸಿದ್ದಾರೆ.ಸುಳ್ಯ ನಗರ ಪಂಚಾಯತ್ ಕಚೇರಿ ಮುಂಭಾಗದಲ್ಲಿರುವ ಶೆಡ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಕಸವನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ದುರ್ವಾಸನೆ ಉಂಟಾಗುವುದರ ಜೊತೆಗೆ

ಸುಳ್ಯ ನ.ಪಂ. ಮುಂಭಾಗದ ಶೆಡ್‌ನಲ್ಲಿರುವ ಕಸ ತೆರವುಗೊಳಿಸಿ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಆರೋಗ್ಯ ಸಚಿವ ಯು. ಟಿ. ಖಾದರ್ ರವರಿಗೆ ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಮೋಂಟಡ್ಕ ಮನವಿ Read More »

ಕ್ಯಾನ್ಸರ್ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದೇ ಇದನ್ನು ತಡೆಗಟ್ಟುವ ಏಕೈಕ ಮಾರ್ಗ : ಸಚಿವ ಯು.ಟಿ ಖಾದರ್

ಕ್ಯಾನ್ಸರ್ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದೇ ಇದನ್ನು ತಡೆಗಟ್ಟುವ ಏಕೈಕ ಮಾರ್ಗ. ಇಂತಹ ಅಭಿಯಾನಗಳು ಪ್ರತಿ ಮನೆಗೂ ತಲುಪಬೇಕು” ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅಭಿಪ್ರಾಯಪಟ್ಟರು.ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ರೋಟರಿ ಕ್ಲಬ್ ಸುಳ್ಯ ಮತ್ತು ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ “ಅರಿವೇ ಜೀವ – ಬದುಕು” ಕ್ಯಾನ್ಸ‌ರ್ ಮಹಾ ಜಾಗೃತಿ ಅಭಿಯಾನಕ್ಕೆ ಆ.06 ರಂದು ಚಾಲನೆ ನೀಡಿ ಮಾತನಾಡಿದರು.ಕಾರ್ಯಕ್ರಮ ರೋಟರಿ ಸಮುದಾಯ

ಕ್ಯಾನ್ಸರ್ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದೇ ಇದನ್ನು ತಡೆಗಟ್ಟುವ ಏಕೈಕ ಮಾರ್ಗ : ಸಚಿವ ಯು.ಟಿ ಖಾದರ್ Read More »

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್ ಬಂಧ‌ನ

2022 ರಲ್ಲಿ ನಡೆದ ಬಿಜೆಪಿಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್ ನನ್ನು ಬಂಧಿಸಿದೆ.ಇದರೊಂದಿಗೆ ಹೈಪ್ರೊಫೈಲ್ ಪ್ರಕರಣದಲ್ಲಿ ಒಟ್ಟು ಬಂಧನಗಳ ಸಂಖ್ಯೆ 25 ಕ್ಕೆ ತಲುಪಿದೆ.ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಉದ್ದೇಶಿತ ಕಾರ್ಯಾಚರಣೆಯ ನಂತರ ಕೇರಳದ ಕೊಚ್ಚಿಯಲ್ಲಿ ಉಮ್ಮರ್ ಫಾರೂಕ್ ಎಂ.ಆರ್ ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಲಾಯಿತು.ತಲೆಮರೆಸಿಕೊಂಡಿರುವ ಆರೋಪಿ ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ (ಆರ್‌ಸಿಎನ್) ಮತ್ತು

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್ ಬಂಧ‌ನ Read More »

ಸುಳ್ಯ ತಾಲೂಕಿನಲ್ಲಿ ಯಾವುದೇ ಮಳೆಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ!

ಸುಳ್ಯ ತಾಲೂಕಿನಲ್ಲಿ ಯಾವುದೇ ಮಳೆ ಮಾಪನ ಸಮರ್ಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸುಳ್ಯ ತಹಶೀಲ್ದಾರ್ ಮಂಜುಳ ಬಹಿರಂಗ ಪಡಿಸಿದ್ದಾರೆ.ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಆ.7ರಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಪ್ರಕೃತಿ ವಿಕೋಪದ ಪ್ರಗತಿ ಪರಿಶೀಲನಾ ಅಧಿಕಾರಿಗಳ ಸಭೆಯಲ್ಲಿ ಸಚಿವರ ಪ್ರಶ್ನೆಗೆ ಉತ್ತರಿಸಿದರು.ಶಾಸಕಿ ಭಾಗೀರಥಿ ಮುರುಳ್ಯರು ಮಳೆ ಮಾಪನ ಸಮರ್ಪಕವಾಗಿ ಕಾರ್ಯನಿರ್ವಾಹಿಸದೆ ಕಳೆದ ಬಾರಿ ಅನೇಕ ರೈತರಿಗೆ ಬೆಳೆ ವಿಮೆ ದೊರೆಯದೆ ಅನ್ಯಾಯವಾಗಿದೆ ಎಂದು ಸಚಿವರ ಗಮನಕ್ಕೆ ತಂದಾಗ ಸಚಿವರು ತಹಶೀಲ್ದಾರಿಂದ ಮಾಹಿತಿ ಪಡಕೊಂಡರು.ಈ

ಸುಳ್ಯ ತಾಲೂಕಿನಲ್ಲಿ ಯಾವುದೇ ಮಳೆಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ! Read More »

ಎಡಮಂಗಲ- ಪುಲಿಕುಕ್ಕು ಮರ್ಕಂಜ- ಎಲಿಮಲೆ,ರಸ್ತೆಗಳ ಅಭಿವೃದ್ಧಿಗೆ DPR ಪ್ರಕ್ರಿಯೆಗೆ ಟೆಂಡರ್ ಪೂರ್ಣ

ಎಡಮಂಗಲ- ಪುಲಿಕುಕ್ಕು ,ಮರ್ಕಂಜ- ಎಲಿಮಲೆ,ರಸ್ತೆಗಳ ಅಭಿವೃದ್ಧಿಗೆ DPR ಪ್ರಕ್ರಿಯೆಗೆ ಟೆಂಡರ್ ಪೂರ್ಣಗೊಂಡಿದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಮುಖರಸ್ತೆಗಳಲ್ಲಿ ಎಡಮಂಗಲ- ಪುಲಿಕುಕುಕ್ಕು ರಸ್ತೆಗೆ 4ಕೋಟಿ ರೂ, ಮರ್ಕಂಜ- ಎಲಿಮಲೆ ರಸ್ತೆಗೆ 5ಕೋಟಿ ರೂ, ಐವರ್ನಾಡು- ದರ್ಖಾಸು ರಸ್ತೆ 3ಕೋಟಿ ಸೇರಿ  ಒಟ್ಟು 12ಕೋಟಿ ರೂಗಳಲ್ಲಿ  ಅಭಿವೃದ್ಧಿ ಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವಣೆಯನ್ನು ನಾನು ಸಲ್ಲಿಸಿದ್ದೆ‌. ಈ ಪ್ರಸ್ತಾವಣೆಯು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮೂಲಕ  ಆಂಗಿಕಾರಗೊಂಡು ಇಲಾಖೆಯಿಂದ

ಎಡಮಂಗಲ- ಪುಲಿಕುಕ್ಕು ಮರ್ಕಂಜ- ಎಲಿಮಲೆ,ರಸ್ತೆಗಳ ಅಭಿವೃದ್ಧಿಗೆ DPR ಪ್ರಕ್ರಿಯೆಗೆ ಟೆಂಡರ್ ಪೂರ್ಣ Read More »

ಭಾರತೀಯ ಸಂವಿಧಾನವು ಆದೇಶಿಸುವ ಖಾಝಿ ಕಾಯಿದೆಯ ವಿಷಯಗಳನ್ನು ಮಾತ್ರ ಖಾಝಿಯಾಗಿ ನನಗೆ ಮಾಡಲು ಸಾಧ್ಯ: ಜಿಫ್ರಿ ತಂಙಳ್

ಸುಳ್ಯ: ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಇದರ ಅಧೀನದಲ್ಲಿ ಬರುವ 13 ಜಮಾಅತ್‌ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಆ. 4ರಂದು ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ‘ಭಾರತೀಯ ಸಂವಿಧಾನವು ಆದೇಶಿಸುವ, ಭಾರತದಲ್ಲಿರುವ ಖಾಝಿ ಕಾಯಿದೆಯು ಸೂಚಿಸುವ ಮಾನ್ಯತೆ ಪಡೆದ ಕಾನೂನುಗಳು ಹಾಗೂ ಅದರಲ್ಲಿ ಒಳಗೊಂಡ ವಿಷಯಗಳನ್ನು ಮಾತ್ರ ಖಾಝಿಯಾಗಿ ನನಗೆ ಮಾಡಲು ಸಾಧ್ಯ. ಅದಲ್ಲದ್ದನ್ನು ಮಾಡಲು

ಭಾರತೀಯ ಸಂವಿಧಾನವು ಆದೇಶಿಸುವ ಖಾಝಿ ಕಾಯಿದೆಯ ವಿಷಯಗಳನ್ನು ಮಾತ್ರ ಖಾಝಿಯಾಗಿ ನನಗೆ ಮಾಡಲು ಸಾಧ್ಯ: ಜಿಫ್ರಿ ತಂಙಳ್ Read More »

ಆಗಸ್ಟ್ 7ಕ್ಕೆ ; ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ “ರಾಷ್ಟ್ರೀಯ ಕೈಮಗ್ಗ ದಿನ- ಸ್ವಾತಂತ್ರ್ಯ ಹೋರಾಟದಲ್ಲಿ ಕೈಮಗ್ಗ ಹಾಗೂ ಸ್ವದೇಶಿ ಆಂದೋಲನದ ಪಾತ್ರ” ವಿಷಯದ ಕುರಿತ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ದಿನಾಂಕ 07-08-2026 ರ ಶುಕ್ರವಾರದಂದು ರಾತ್ರಿ 8.30ಕ್ಕೆ ಬಿತ್ತರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಈ ಹಿಂದೆ ಮಂಗಳೂರು ಹಾಗೂ ಮಡಿಕೇರಿ ಆಕಾಶವಾಣಿಗಳಲ್ಲಿ ಹಲವು ಬಾರಿ ಇವರ ಭಾಷಣಗಳು,ಕವಿತೆಗಳು,

ಆಗಸ್ಟ್ 7ಕ್ಕೆ ; ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ Read More »

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ “ರಾಷ್ಟ್ರೀಯ ಕೈಮಗ್ಗ ದಿನ- ಸ್ವಾತಂತ್ರ್ಯ ಹೋರಾಟದಲ್ಲಿ ಕೈಮಗ್ಗ ಹಾಗೂ ಸ್ವದೇಶಿ ಆಂದೋಲನದ ಪಾತ್ರ” ವಿಷಯದ ಕುರಿತ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ದಿನಾಂಕ 07-08-2026 ರ ಶುಕ್ರವಾರದಂದು ರಾತ್ರಿ 8.30ಕ್ಕೆ ಬಿತ್ತರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಈ ಹಿಂದೆ ಮಂಗಳೂರು ಹಾಗೂ ಮಡಿಕೇರಿ ಆಕಾಶವಾಣಿಗಳಲ್ಲಿ ಹಲವು ಬಾರಿ ಇವರ ಭಾಷಣಗಳು,ಕವಿತೆಗಳು,

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ Read More »

error: Content is protected !!
Scroll to Top