ಎಡಮಂಗಲ- ಪುಲಿಕುಕ್ಕು ,ಮರ್ಕಂಜ- ಎಲಿಮಲೆ,ರಸ್ತೆಗಳ ಅಭಿವೃದ್ಧಿಗೆ DPR ಪ್ರಕ್ರಿಯೆಗೆ ಟೆಂಡರ್ ಪೂರ್ಣಗೊಂಡಿದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಮುಖರಸ್ತೆಗಳಲ್ಲಿ ಎಡಮಂಗಲ- ಪುಲಿಕುಕುಕ್ಕು ರಸ್ತೆಗೆ 4ಕೋಟಿ ರೂ, ಮರ್ಕಂಜ- ಎಲಿಮಲೆ ರಸ್ತೆಗೆ 5ಕೋಟಿ ರೂ, ಐವರ್ನಾಡು- ದರ್ಖಾಸು ರಸ್ತೆ 3ಕೋಟಿ ಸೇರಿ ಒಟ್ಟು 12ಕೋಟಿ ರೂಗಳಲ್ಲಿ ಅಭಿವೃದ್ಧಿ ಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವಣೆಯನ್ನು ನಾನು ಸಲ್ಲಿಸಿದ್ದೆ. ಈ ಪ್ರಸ್ತಾವಣೆಯು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮೂಲಕ ಆಂಗಿಕಾರಗೊಂಡು ಇಲಾಖೆಯಿಂದ ರಸ್ತೆಗಳ ಸಮಗ್ರ ಯೋಜನಾ ವರದಿ(DPR) ಸಲ್ಲಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೇ ವರದಿ ಸಲ್ಲಿಕೆಯಾಗಲಿದ್ದು ನಂತರ ರಸ್ತೆಗಳ ಅಭಿವೃದ್ಧಿ ಕಾರ್ಯಗಳ ತಾಂತ್ರಿಕ ಕೆಲಸಗಳು ಆರಂಭವಾಗಲಿದೆ.ರಾಜ್ಯದ ಒಟ್ಟು ರಸ್ತೆಗಳಿಗೆ ಹಂತ ಹಂತವಾಗಿ DPR ಟೆಂಡರ್ ಕರೆಯಲಾಗಿದ್ದು ಸುಳ್ಯ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಇತರ ಕ್ಷೇತ್ರಗಳ ರಸ್ತೆಗಳಿಗೆ ಹಂತ- 5,ಘಟ್ಟ2-ರಡಿಯ ಕಾಮಗಾರಿಗಳಿಗೆ DPR ಟೆಂಡರ್ ಕರೆಯಲಾಗಿತ್ತು ಎಂದು ಶಾಸಕರು ತಿಳಿಸಿದರು.
ಎಡಮಂಗಲ- ಪುಲಿಕುಕ್ಕು ಮರ್ಕಂಜ- ಎಲಿಮಲೆ,ರಸ್ತೆಗಳ ಅಭಿವೃದ್ಧಿಗೆ DPR ಪ್ರಕ್ರಿಯೆಗೆ ಟೆಂಡರ್ ಪೂರ್ಣ













