August 2026

ನಾಳೆ ಆರೋಗ್ಯ ಸಚಿವ ಯು.ಟಿ ಖಾದರ್ ಸುಳ್ಯಕ್ಕೆ ಭೇಟಿ

ರಾಜ್ಯ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವರು ಆ.6ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ.ಬೆಳಗ್ಗೆ 9 ಗಂಟೆಗೆ ಸುಳ್ಯಕ್ಕೆ ಬರಲಿರುವ ಅವರು ಪ್ರಾಕೃತಿಕ ವಿಕೋಪ ಪರಿಶೀಲನೆ ನಡೆಸಿ, ಬೆಳಗ್ಗೆ 10 ಗಂಟೆಗೆ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ನಾಳೆ ಆರೋಗ್ಯ ಸಚಿವ ಯು.ಟಿ ಖಾದರ್ ಸುಳ್ಯಕ್ಕೆ ಭೇಟಿ Read More »

ತೊಡಿಕಾನ ದೇವಳಕ್ಕೆ ಮಾಜಿ ಮುಖ್ಯ ಮಂತ್ರಿ ಡಿ.ವಿ ಸದಾನಂದ ಗೌಡ ಭೇಟಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರು ಮಗ ಕಾರ್ತಿಕ್ ಅವರೊಂದಿಗೆ ಆ. 5ರಂದು ಆಗಮಿಸಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು.ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ. ಗೌರವಿಸಿದರು‌.ವ್ಯವಸ್ಥಾಪನಾ ಸಮಿತಿ ಸದಸ್ಯ ತಿಮ್ಮಯ್ಯ ಮೆತ್ತೆಡ್ಕ,ದೇವಳ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ಮತ್ತು ಭವಿತ್ ಬಾಳೆಕಜೆ ಉಪಸ್ಥಿತರಿದ್ದರು.

ತೊಡಿಕಾನ ದೇವಳಕ್ಕೆ ಮಾಜಿ ಮುಖ್ಯ ಮಂತ್ರಿ ಡಿ.ವಿ ಸದಾನಂದ ಗೌಡ ಭೇಟಿ Read More »

ಶತಾಯುಷಿ ಕಮಲ ಚಂಗಪ್ಪ ಕುಯಿಂತೋಡು ನಿಧನ

ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಕುಯಿಂತೋಡು ಮನೆ ದಿ. ಚಂಗಪ್ಪ ಪಠೇಲ್ ರವರ ಪತ್ನಿ ಶತಾಯುಷಿ ಕಮಲ ಚಂಗಪ್ಪ ( 101 ವರ್ಷ)ಆ.5ರಂದು ಬೆಳಿಗ್ಗೆ ನಿಧನರಾದರು.ಮೃತರು ಪುತ್ರರಾದ ನಾರಾಯಣ ಕೆ.ಸಿ., ಜಯರಾಮ ಕೆ.ಸಿ., ಗಣೇಶ ಕೆ.ಸಿ., ಉದಯಕುಮಾರ ಕೆ.ಸಿ. ಪುತ್ರಿಯರಾದ ಗಂದಾವತಿ ಕೆ.ಸಿ., ಮೋಹಿನಿ ಕೆ.ಸಿ., ಮೀನಾಕ್ಷಿ ಕೆ.ಸಿ., ಮಾದವಿ ಕೆ.ಸಿ. ಮತ್ತು ಕುಟುಂಭಸ್ಥರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

ಶತಾಯುಷಿ ಕಮಲ ಚಂಗಪ್ಪ ಕುಯಿಂತೋಡು ನಿಧನ Read More »

ಕಟ್ಟಮನೆ ಗೋಪಾಲ ಗೌಡ ನಿಧನ

ಮಡಿಕೇರಿ ತಾಲೂಕು ಚೆಂಬು ಗ್ರಾಮದ ನಿವಾಸಿ ಕಟ್ಟೆಮನೆ ಗೋಪಾಲ(68) ಅವರು ಹೃದಯಾಘಾತದಿಂದ ಜುಲೈ 4 ರಂದು ದಾರಿ ಮಧ್ಯೆ ನಿಧನರಾದರು.ಮೃತರು ತಮ್ಮ ಮನೆಯಿಂದ ನಾಯಿಯನ್ನು ದೇವಾಲಯ ಬಳಿ ಚುಚ್ಚು ಮದ್ದು ನೀಡಲು ಕರೆದುಕೊಂಡು ಬರುವ ವೇಳೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ಸಂಪಾಜೆ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಎಂದು ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು‌ಇಬ್ಬರು ಸಹೋದರನ್ನು ಆಗಲಿದ್ದಾರೆ.

ಕಟ್ಟಮನೆ ಗೋಪಾಲ ಗೌಡ ನಿಧನ Read More »

ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಸುಳ್ಯ,: ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವು ಐಕ್ಯೂಎಸಿ (IQAC) ಸಹಯೋಗದಲ್ಲಿ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು “ರಕ್ತ ನೀಡಿ ಜೀವ ಉಳಿಸಿ” ಎನ್ನುವ ಶೀರ್ಷಿಕೆಯಡಿಯಲ್ಲಿ ಆಯೋಜಿಸಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಉದ್ಘಾಟಿಸಿ, ರಕ್ತದಾನವು ಜೀವ ಉಳಿಸುವ ಅತ್ಯಂತ ಶ್ರೇಷ್ಠ ಮಾನವೀಯ ಸೇವೆಯಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ಯುವಜನರು ನಿಯಮಿತವಾಗಿ ರಕ್ತದಾನ ಮಾಡುವ

ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ Read More »

ಕಡಬ : ಅಡಿಕೆ ಮರದಿಂದ ಬಿದ್ದು ಮೃತ ಪಟ್ಟ ಕುಟುಂಬಕ್ಕೆ ರೂ 5 ಲಕ್ಷ ಪರಿಹಾರ ವಿತರಣೆ

ಕಡಬ ತಾಲ್ಲೂಕಿನ ಕುಂತೂರು ನಿವಾಸಿ ಯಾದವ ಗೌಡ ಕೇವಳ ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವ ಸಂದರ್ಭ ಆಡಿಕೆ ಮರ ಬಿದ್ದು ಮೃತ ಪಟ್ಟಿದ್ದರು ಅವರ ಮನೆಗೆ ಮಾನ್ಯ ಶಾಸಕರು ಭೇಟಿ ನೀಡಿ ಸಾಂತ್ವನ ತಿಳಿಸಿ ಸರಕಾರದ ಪ್ರಾಕೃತಿಕ ವಿಕೋಪದಿಂದ ಜೀವ ಹಾನಿಯಾದ ಪರಿಹಾರ ಮೊತ್ತ 5ಲಕ್ಷವನ್ನು ವಿತರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಮಂಡಲ ಪ್ರಧಾನಕಾರ್ಯದರ್ಶಿ ಪ್ರದೀಪ್ ರೈ,ಜಿಲ್ಲಾ ಉಪಾಧ್ಯಕ್ಷ ರಾಕೇಶ ರೈ,SC ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಿ ಎಲ್ತಿಮಾರ್,ಮಹಾ ಶಕ್ತಿ ಕೇಂದ್ರ ಪ್ರಮುಖ್ ಸುರೇಶ ದೇಂತಾರು, ಕೊಯಿಲಾ

ಕಡಬ : ಅಡಿಕೆ ಮರದಿಂದ ಬಿದ್ದು ಮೃತ ಪಟ್ಟ ಕುಟುಂಬಕ್ಕೆ ರೂ 5 ಲಕ್ಷ ಪರಿಹಾರ ವಿತರಣೆ Read More »

ಸಂಪಾಜೆ : ಯುವ ಕಾಂಗ್ರೆಸ್ ವತಿಯಿಂದ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರ ಮತ್ತು ಪೊದೆಗಳ ತೆರವು

ಸಂಪಾಜೆ ಗ್ರಾಮದ ಕೀಲಾರು ಹೊಳೆಯ ಕಿಂಡಿ ಅಣೆಕಟ್ಟಿಗೆ ಭಾರೀ ಮಳೆಗೆ ನೀರಿನಲ್ಲಿ ಕೊಚ್ಚಿಕೊಂಡು ಬಂದು ಅಡ್ಡವಾಗಿ ನಿಂತಿದ್ದ ಮರ ಮತ್ತು ಪೊದೆ ಕಸಗಳನ್ನು ಯುವ ಕಾಂಗ್ರೆಸ್ ಕಾರ್ಯಪಡೆ ವತಿಯಿಂದ ಜು.4ರಂದು ತೆರವು ಮಾಡಲಾಯಿತು.ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ ಹಮೀದ್ ಮತ್ತು ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ದೊಡ್ಡಡ್ಕ ಇವರ ನೇತೃತ್ವ ವಹಿಸಿದ್ದರು.ಕೀಲಾರು ಕಿಂಡಿ ಅಣೆಕಟ್ಟು ಬೇಸಿಗೆಯಲ್ಲಿ ಕೃಷಿಕರಿಗಾಗಿ ನೀರು ಸಂಗ್ರಹಿಸಲು ನಿರ್ಮಿಸಲಾಗಿದ್ದು,ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮರ ಪೊದೆ ಇತ್ಯಾದಿಗಳು ಬಂದು

ಸಂಪಾಜೆ : ಯುವ ಕಾಂಗ್ರೆಸ್ ವತಿಯಿಂದ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರ ಮತ್ತು ಪೊದೆಗಳ ತೆರವು Read More »

ಅಜ್ಜಾವರ : ಕಂಡದ ಗೌಜಿ ಕೆಸರ್ದ ಪರ್ಬ”ಕ್ರೀಡಾಕೂಟದ ಪೂರ್ವಭಾವಿಯಾಗಿ ಗದ್ದೆ ಮುಹೂರ್ತ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ,ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ಹಾಗೂಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ವತಿಯಿಂದನಡೆಯಲಿರುವ 5ನೇ ವರ್ಷದ “ಕಂಡದ ಗೌಜಿ ಕೆಸರ್ದ ಪರ್ಬ” ಕ್ರೀಡಾಕೂಟದ ಪೂರ್ವಭಾವಿಯಾಗಿಆ.4ರಂದು ಗದ್ದೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ ಗದ್ದೆ ಮೂಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಅಜ್ಜಾವರ ಕೊರಂಗುಬೈಲು ಗದ್ದೆಯ ಮಾಲಕರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯ್ಕ್ ಹಾಗೂ ಲೀಲಾಬಾಲಕೃಷ್ಣ ನಾಯ್ಕ್ ,ಪ್ರತಾಪ ಯುವಕ

ಅಜ್ಜಾವರ : ಕಂಡದ ಗೌಜಿ ಕೆಸರ್ದ ಪರ್ಬ”ಕ್ರೀಡಾಕೂಟದ ಪೂರ್ವಭಾವಿಯಾಗಿ ಗದ್ದೆ ಮುಹೂರ್ತ ಕಾರ್ಯಕ್ರಮ Read More »

ಭಾರೀ ಮಳೆ ಹಿನ್ನಲೆ; ಉಂಬಳೆ ಜಲಪಾತ ವೀಕ್ಷಣೆಗೆ ನಿಷೇಧ ಹೇರಿ ಬ್ಯಾನರ್ ಅಳವಡಿಕೆ

ಚೆಂಬು ಗ್ರಾಮದ ಉಂಬಳೆ ಎಂಬಲ್ಲಿ ಮೀಸಲು ಅರಣ್ಯದೊಳಗಿರುವ ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ನಿಷೇಧ ಹೇರಿ ಬ್ಯಾನ‌ರ್ ಅಳವಡಿಸಿದೆ.ಜಲಪಾತ ವೀಕ್ಷಣೆ ಹಾಗೂ ಮೀಸಲು ಅರಣ್ಯದೊಳಗಡೆ ಅಕ್ರಮ ಪ್ರವೇಶವನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ.ಪ್ರವಾಸಿಗರು ಜಲಪಾತಗಳಿಗೆ ಭೇಟಿ ನೀಡುವುದನ್ನು ಮತ್ತು ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,ಮೀಸಲು ಅರಣ್ಯದೊಳಗಿರುವ ಜಲಪಾತದಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದ್ದು, ಪ್ರವಾಸಿಗರಿಗೆ ಅಪಾಯದ ಮುನ್ಸೂಚನೆ ಇರುವುದರಿಂದ ಜಲಪಾತಕ್ಕೆ ಹೋಗುವ ಪ್ರವಾಸಿಗರಿಗೆ ನಿರ್ಭಂದ ವಿಧಿಸಲಾಗಿದೆ . ತಪ್ಪಿದ್ದಲ್ಲಿ ಕ್ರಮ

ಭಾರೀ ಮಳೆ ಹಿನ್ನಲೆ; ಉಂಬಳೆ ಜಲಪಾತ ವೀಕ್ಷಣೆಗೆ ನಿಷೇಧ ಹೇರಿ ಬ್ಯಾನರ್ ಅಳವಡಿಕೆ Read More »

ಭಾರೀ ಮಳೆ ಹಿನ್ನಲೆ; ಉಂಬಳೆ ಜಲಪಾತ ವೀಕ್ಷಣೆಗೆ ನಿಷೇಧ ಹೇರಿ ಬ್ಯಾನರ್ ಅಳವಡಿಕೆ

ಚೆಂಬು ಗ್ರಾಮದ ಉಂಬಳೆ ಎಂಬಲ್ಲಿ ಮೀಸಲು ಅರಣ್ಯದೊಳಗಿರುವ ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ನಿಷೇಧ ಹೇರಿ ಬ್ಯಾನ‌ರ್ ಅಳವಡಿಸಿದೆ.ಜಲಪಾತ ವೀಕ್ಷಣೆ ಹಾಗೂ ಮೀಸಲು ಅರಣ್ಯದೊಳಗಡೆ ಅಕ್ರಮ ಪ್ರವೇಶವನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ.ಪ್ರವಾಸಿಗರು ಜಲಪಾತಗಳಿಗೆ ಭೇಟಿ ನೀಡುವುದನ್ನು ಮತ್ತು ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.ಮೀಸಲು ಅರಣ್ಯದೊಳಗಿರುವ ಜಲಪಾತದಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದ್ದು, ಪ್ರವಾಸಿಗರಿಗೆ ಅಪಾಯದ ಮುನ್ಸೂಚನೆ ಇರುವುದರಿಂದ ಜಲಪಾತಕ್ಕೆ ಹೋಗುವ ಪ್ರವಾಸಿಗರಿಗೆ ನಿಷೇಧ ಮಾಡಲಾಗಿದೆ . ತಪ್ಪಿದ್ದಲ್ಲಿ ಕ್ರಮ

ಭಾರೀ ಮಳೆ ಹಿನ್ನಲೆ; ಉಂಬಳೆ ಜಲಪಾತ ವೀಕ್ಷಣೆಗೆ ನಿಷೇಧ ಹೇರಿ ಬ್ಯಾನರ್ ಅಳವಡಿಕೆ Read More »

error: Content is protected !!
Scroll to Top