September 2026

ಅನಾರೋಗ್ಯಕ್ಕೊಳಗಾದ ಸುಳ್ಯದ ಸಿಪಿಐಎಂ ಮುಖಂಡ ರಾಬರ್ಟ್ ಡಿಸೋಜರ ಮನೆಗೆ ಜಿಲ್ಲಾ ನಾಯಕರ ಭೇಟಿ

ಸುಳ್ಯ ತಾಲೂಕಿನ ಸಿಪಿಐಎಂ ಮುಖಂಡರೂ , ಸಿಪಿಐಎಂ ಜಿಲ್ಲಾ ನಾಯಕರೂ ಆಗಿರುವ ಕೆ.ಪಿ ರಾಬರ್ಟ್ ಡಿ’ಸೋಜ ಅವರು ಅನಾರೋಗ್ಯಕ್ಕೊಳಗಾಗಿದ್ದು ಅವರ ಮನೆಗೆ ಜಿಲ್ಲಾ ನಾಯಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅವರ ಆರೋಗ್ಯ ವಿಚಾರಿಸಲು ಅವರ ಮನೆಗೆ ಸುಕುಮಾರ್, ಜೆ ಬಾಲಕೃಷ್ಣ ಶೆಟ್ಟಿ, ಪಿಕೆ ಸತೀಶನ್, ಹಾಗೂ ಬಿ.ಎಂ.ಭಟ್ ಮತ್ತು SFI ಮುಖಂಡರಾದ ವಿನುಶರಮಣ ಅವರನ್ನೊಳಗೊಂಡ ಪಕ್ಷದ ನಿಯೋಗವು ಬೇಟಿ ಕೊಟ್ಟು , ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಲಿ, ಹಾಗೂ ಅವರು ಪಕ್ಷದ ಕೆಲಸದಲ್ಲಿ‌ ತೊಡಗಿಸಿಕೊಳ್ಳುವಂತಾಗಲಿ

ಅನಾರೋಗ್ಯಕ್ಕೊಳಗಾದ ಸುಳ್ಯದ ಸಿಪಿಐಎಂ ಮುಖಂಡ ರಾಬರ್ಟ್ ಡಿಸೋಜರ ಮನೆಗೆ ಜಿಲ್ಲಾ ನಾಯಕರ ಭೇಟಿ Read More »

ಅರಂತೋಡು ಪದವಿ ಪೂರ್ವ ಕಾಲೇಜಿಗೆ ಪಠೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೀಲಿಂಗ್ ಪ್ಯಾನ್ ಕೊಡುಗೆ

ಪಠೇಲ್ ಚಾರಿಟೇಬಲ್ ಟ್ರಸ್ಟ್ ಅರಂತೋಡು ಇದರ ವತಿಯಿಂದ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ನಾಲ್ಕು ಸೀಲಿಂಗ್ ಪ್ಯಾನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಸೆ.11 ರಂದು ನಡೆದ ಸರಳ ಸಮಾರಂಭದಲ್ಲಿ ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಬದ್ರುದ್ಧೀನ್ ಪಠೇಲ್ ರವರು ಶಾಲಾ ಸಂಚಾಲಕ ಎ.ಸಿ. ವಸಂತ್ ರವರಿಗೆ ಪ್ಯಾನ್ ಗಳನ್ನು ಹಸ್ತಾಂತರಿಸಿದರು . ಈ ಸಂಧರ್ಭದಲ್ಲಿ ಪಠೇಲ್ ಟ್ರಸ್ಟ್ ನ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಠೇಲ್, ನಿರ್ದೇಶಕ ಸೈಫುದ್ದೀನ್ ಪಠೇಲ್ ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ

ಅರಂತೋಡು ಪದವಿ ಪೂರ್ವ ಕಾಲೇಜಿಗೆ ಪಠೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೀಲಿಂಗ್ ಪ್ಯಾನ್ ಕೊಡುಗೆ Read More »

ಸೆ. 15ರಂದು “ಸುಸ್ನಿಲ” ಜೇಸಿಐ ಸಪ್ತಾಹ 2026ರ ಸಮಾರೋಪ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ (ರಿ.), ಸುಳ್ಯ ಘಟಕದ ವತಿಯಿಂದ “ಸುಸ್ನಿಲ – ಸ್ನೇಹದ ಸ್ಪಂದನ, ಸೇವೆಯ ಸಂಭ್ರಮ” ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿರುವ ಜೇಸಿಐ ಸಪ್ತಾಹ 2026ರ ಸಮಾರೋಪ ಸಮಾರಂಭವು ಸೆಪ್ಟೆಂಬರ್ 15ರಂದು ಸಂಜೆ 6.30ಕ್ಕೆ ಅಂಬಟೆಅಡ್ಕ, ಸುಳ್ಯ, ಆರೋಹಿ ಎನ್‌ಕ್ಲೀವ್ ಸಭಾಂಗಣದಲ್ಲಿ ನಡೆಯಲಿದೆ.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಹಾಗೂ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಸಲುವಾಗಿ ಸಮಾರೋಪ ಸಮಾರಂಭದಲ್ಲಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.ಜೇಸಿಐಯ ಪ್ರತಿಷ್ಠಿತ ಕಮಲ ಸಹರನ್ ಅವರ ಹೆಸರಿನಲ್ಲಿ

ಸೆ. 15ರಂದು “ಸುಸ್ನಿಲ” ಜೇಸಿಐ ಸಪ್ತಾಹ 2026ರ ಸಮಾರೋಪ Read More »

ಜ್ವರದಿಂದ 38 ವರ್ಷದ ಲೋಕೇಶ್ ನಿಧನ: ಕುಟುಂಬಕ್ಕೆ ಆಘಾತ

ಸುಳ್ಯ, ಸೆ.10: ಸುಳ್ಯದ ಜಯನಗರ ನಿವಾಸಿ ಲೋಕೇಶ್ (38) ಅವರು ಅನಾರೋಗ್ಯದಿಂದ ಸೆಪ್ಟೆಂಬರ್ 10ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಕಳೆದ ಎರಡು ದಿನಗಳ ಹಿಂದೆ ಲೋಕೇಶ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯವರು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ತಂದೆ ಬಾಬು ಕೊಡಕೇರಿ, ತಾಯಿ ರುಕ್ಕಿಣಿ ಹಾಗೂ ಸಹೋದರರಾದ ಹರೀಶ್ ಮತ್ತು ಕರುಣೇಶ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜ್ವರದಿಂದ 38 ವರ್ಷದ ಲೋಕೇಶ್ ನಿಧನ: ಕುಟುಂಬಕ್ಕೆ ಆಘಾತ Read More »

ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿ ಗಳಿಗೆ ಸುಳ್ಯ ತಾಲೂಕು ಆಸ್ಪತ್ರೆ ಯಲ್ಲಿ ವೈದ್ಯಕೀಯ ತಪಾಸಣೆ ಗೆ ಚಾಲನೆ

ಈ ವರ್ಷ ಸುಳ್ಯ ತಾಲೂಕಿನಿಂದ ಸುಮಾರು 40 ಕ್ಕೂ ಮಿಕ್ಕಿದ ಯಾತ್ರಿಕರುಪವಿತ್ರ ಹಜ್ ಯಾತ್ರೆ ಯನ್ನು ಕೈ ಗೊಳ್ಳುತ್ತಿದ್ದು ಎಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಿ ಫಿಟ್ ನೆಸ್ ಸರ್ಟಿಫಿಕೇಟ್ ನ್ನು ಅಪ್ ಲೋಡ್ ಮಾಡಬೇಕಾಗಿದೆಈ ಹಿಂದೆ ಯಾತ್ರಾರ್ಥಿ ಗಳು ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ಹೋಗಿ ಡಿಸ್ಟ್ರಿಕ್ ಸರ್ಜನ್ ರವರಿಂದ ಮೆಡಿಕಲ್ ಸರ್ಟಿಫಿಕೇಟ್ ಪಡಯಬೇಕಾಗಿತ್ತುಕಳೆದ ವರ್ಷ ದಿಂದ ಸರ್ಕಾರ ಎಲ್ಲಾ ತಾಲೂಕು ಆಸ್ಪತ್ರೆ ಗಳಲ್ಲಿ ವ್ಯವಸ್ಥೆ ಕಲ್ಪಿಸಿ ರುವುದು ಅನುಕೂಲ ಕರ ವಾಗಿದೆ ಎಂದು ಸುಳ್ಯ ನಗರಾಭಿವೃದ್ಧಿ ಯೋಜನಾ

ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿ ಗಳಿಗೆ ಸುಳ್ಯ ತಾಲೂಕು ಆಸ್ಪತ್ರೆ ಯಲ್ಲಿ ವೈದ್ಯಕೀಯ ತಪಾಸಣೆ ಗೆ ಚಾಲನೆ Read More »

ಕರ್ನಾಟಕ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಬಿಡುಗಡೆ ಮಾಡಿದೆ

ಕರ್ನಾಟಕದ ವಿವಿಧ ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್‌ ಸಮಿತಿ (DCC) ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಿಸಿದ್ದಾರೆ. ‘ಸಂಘಟನ್‌ ಸೃಜನ ಅಭಿಯಾನ’ದ ಭಾಗವಾಗಿ ಈ ನೇಮಕಾತಿಗಳು ನಡೆಯುತ್ತಿದ್ದು, AICC ವೀಕ್ಷಕರು ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ, ವರದಿ ಸಲ್ಲಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿರಿಯ ನಾಯಕರೊಂದಿಗೂ ಸಮಾಲೋಚನೆ ನಡೆಸಲಾಗಿದೆ.

ಕರ್ನಾಟಕ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಬಿಡುಗಡೆ ಮಾಡಿದೆ Read More »

ಅರಂತೋಡು : ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಾಡು ಕಡಿದು ಸ್ವಚ್ಚತೆ

ಅರಂತೋಡು ಬಸ್ ನಿಲ್ದಾಣ ಶೌಚಾಲಯದ ಮುಂಭಾಗದಲ್ಲಿರುವ ಕಾಡನ್ನು ಸ್ಥಳೀಯರಾದ ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಡಿಸಿ ಸ್ವಚ್ಛ ಗೊಳಿಸಲಾಯಿತು.ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅರಂತೋಡು : ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಾಡು ಕಡಿದು ಸ್ವಚ್ಚತೆ Read More »

ಪಡಿತರ ಚೀಟಿದಾರರಿಗೆ ಇ ಕೆವೈಸಿ ಕಡ್ಡಾಯ,ಯಾವಾಗ ಇಕೆವೈಸಿ ಮಾಡಿಸಲು ಕೊನೆಯ ದಿನ ? ಇಲ್ಲಿದೆ ಮಾಹಿತಿ

ಕರ್ನಾಟಕದ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ ನಕಲಿ ಹಾಗೂ ದ್ವಂದ್ವ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಪಡಿತರ ಸೌಲಭ್ಯ ತಲುಪಿಸುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಪಡಿತರ ಚೀಟಿದಾರರು ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.ರಾಜ್ಯದಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವ ಉದ್ದೇಶದಿಂದ ಇ-ಕೆವೈಸಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಇದರಿಂದ ಒಂದೇ ವ್ಯಕ್ತಿಯ ಹೆಸರಿನಲ್ಲಿ ಇರುವ ದ್ವಂದ್ವ ದಾಖಲೆಗಳನ್ನು

ಪಡಿತರ ಚೀಟಿದಾರರಿಗೆ ಇ ಕೆವೈಸಿ ಕಡ್ಡಾಯ,ಯಾವಾಗ ಇಕೆವೈಸಿ ಮಾಡಿಸಲು ಕೊನೆಯ ದಿನ ? ಇಲ್ಲಿದೆ ಮಾಹಿತಿ Read More »

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಅರ್ಚಕರಾಗಿ ಶೇಷಗಿರಿ ಭಟ್ ಸಿರಸಿ ನೇಮಕ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಅರ್ಚಕರಾಗಿ ಶೇಷಗಿರಿ ಭಟ್ ಸೆ.8ರಂದು ನೇಮಕಗೊಂಡಿದ್ದಾರೆ.ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಸದಸ್ಯರಾದ ಸಂತೋಷ್ ಕುಮಾ‌ರ್ ರೈ ಹಾಗೂ ಚೆಂಡೆವಾದಕರಾದ ಸುಕುಮಾರನ್ ಉಪಸ್ಥಿತರಿದ್ದರು.

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಅರ್ಚಕರಾಗಿ ಶೇಷಗಿರಿ ಭಟ್ ಸಿರಸಿ ನೇಮಕ Read More »

ಬಾಳುಗೋಡು : ಕರಕುಶಲ ವಸ್ತುಗಳ ತಯಾರಿಕೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ

ಬಾಳುಗೋಡು, ಸೆ. 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಸುಳ್ಯ ತಾಲೂಕು ಹಾಗೂ ಬಾಳುಗೋಡು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಶಾಲಾ ಶಿಬಿರ ಕಾರ್ಯಕ್ರಮವು ಸೆ. 9ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳುಗೋಡಿನಲ್ಲಿ ನಡೆಯಿತು.ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶುಭ ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಾಳುಗೋಡು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ನಿತಿನ್ ಕುಮಾರ್ ಅವರು

ಬಾಳುಗೋಡು : ಕರಕುಶಲ ವಸ್ತುಗಳ ತಯಾರಿಕೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ Read More »

error: Content is protected !!
Scroll to Top