ಸುಳ್ಯ, ಸೆ.10: ಸುಳ್ಯದ ಜಯನಗರ ನಿವಾಸಿ ಲೋಕೇಶ್ (38) ಅವರು ಅನಾರೋಗ್ಯದಿಂದ ಸೆಪ್ಟೆಂಬರ್ 10ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಲೋಕೇಶ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯವರು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ತಂದೆ ಬಾಬು ಕೊಡಕೇರಿ, ತಾಯಿ ರುಕ್ಕಿಣಿ ಹಾಗೂ ಸಹೋದರರಾದ ಹರೀಶ್ ಮತ್ತು ಕರುಣೇಶ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಜ್ವರದಿಂದ 38 ವರ್ಷದ ಲೋಕೇಶ್ ನಿಧನ: ಕುಟುಂಬಕ್ಕೆ ಆಘಾತ





















