September 2026

ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ವಿಕೃತ ಕಳ್ಳನ ಕದ್ದುಮುಚ್ಚಿ ಎಂಟ್ರಿ; ಬಟ್ಟೆ ಕದ್ದವ ಸಿಸಿಟಿವಿ ಬಲೆಗೆ!

ಬೆಳ್ಳಾರೆ: ವಿದ್ಯಾರ್ಥಿನಿಯರ ಸರ್ಕಾರಿ ವಿದ್ಯಾರ್ಥಿನಿಲಯದ ಆವರಣಕ್ಕೆ ಮುಂಜಾನೆ ವೇಳೆ ಅಕ್ರಮವಾಗಿ ನುಗ್ಗಿ, ವಿದ್ಯಾರ್ಥಿನಿಯರು ಒಣಗಲು ಹಾಕಿದ್ದ ಬಟ್ಟೆಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ರಾಮಚಂದ್ರ ಕೊಳ್ತಿಗೆ ಎಂದು ಗುರುತಿಸಲಾಗಿದೆ.ವಿದ್ಯಾರ್ಥಿನಿಯರು ಹಿಂದಿನ ದಿನ ಒಣಗಲು ಹಾಕಿದ್ದ ಬಟ್ಟೆಗಳು ಕಾಣೆಯಾಗಿರುವುದನ್ನು ಗಮನಿಸಿ ಹಾಸ್ಟೆಲ್ ಮೇಲ್ವಿಚಾರಕಿಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಮೇಲ್ವಿಚಾರಕಿ ಹಾಸ್ಟೆಲ್ ಆವರಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಂಜಾನೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, ಒಣಗಲು ಹಾಕಿದ್ದ ಬಟ್ಟೆಗಳನ್ನು ಕೊಂಡೊಯ್ಯುತ್ತಿರುವ ದೃಶ್ಯ

ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ವಿಕೃತ ಕಳ್ಳನ ಕದ್ದುಮುಚ್ಚಿ ಎಂಟ್ರಿ; ಬಟ್ಟೆ ಕದ್ದವ ಸಿಸಿಟಿವಿ ಬಲೆಗೆ! Read More »

ವಿಶ್ವ ಹಿಂದೂ ಪರಿಷದ್ ಹಿಂದು ಧರ್ಮಕ್ಕೆ ರಕ್ಷಾ ಕವಚವಾಗಿದೆ : ಔಘಡ್ ಪೀರ್ ರಾಜೇಶ್ ನಾಥ್ ಜೀ

ಸುಳ್ಯ : ವಿಶ್ವ ಹಿಂದೂ ಪರಿಷದ್ ಹಿಂದೂ ಧರ್ಮಕ್ಕೆ ರಕ್ಷಾ ಕವಚವಾಗಿದೆ ಎಂದು ಮರ್ಕಂಜ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರಿ ಮಠದ ಧರ್ಮದರ್ಶಿ ಔಘಡ್ ಪೀರ್ ರಾಜೇಶ್ ನಾಥ್ ಜೀ ಹೇಳಿದರು.ಸುಳ್ಯ ವಿಶ್ವಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾ ವಾಹಿನಿ,ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸೆ.8 ರಂದು 13 ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ, ವೀರ ಯುವಕರ ಅಟ್ಟಿ ಮಡಕೆ ಒಡೆಯುವ ಶೋಭಾಯಾತ್ರೆಯ

ವಿಶ್ವ ಹಿಂದೂ ಪರಿಷದ್ ಹಿಂದು ಧರ್ಮಕ್ಕೆ ರಕ್ಷಾ ಕವಚವಾಗಿದೆ : ಔಘಡ್ ಪೀರ್ ರಾಜೇಶ್ ನಾಥ್ ಜೀ Read More »

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸುಳ್ಯ ತಾಲೂಕಿನ ಅಂಬ್ಯುಲೆನ್ಸ್ ಚಾಲಕ ಮಾಲಕರಿಗೆ ಸಸ್ಟೆನೆಬಲ್ ಸ್ಟೀಲ್ ಬಾಟಲ್ ವಿತರಣೆ

ಸುಳ್ಯ: ಪರಿಸರ ಕಾಳಜಿ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ‘ಸಸ್ಟೇನಬಲ್ ಸಿಪ್ಪಿಂಗ್ ದಿನದ’ ಅಂಗವಾಗಿ ಸುಳ್ಯ ತಾಲೂಕಿನ ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದವರಿಗೆ ಮರುಬಳಕೆ ಮಾಡಬಹುದಾದ ಸ್ಟೇನ್‌ಲೆಸ್ ಸ್ಟೀಲ್ ನೀರಿನ ಬಾಟಲಿಗಳನ್ನು ಸುಳ್ಯದ ಅಂಬ್ಯುಲೆನ್ಸ್ ನಿಲ್ದಾಣದಲ್ಲಿ ವಿತರಿಸಲಾಯಿತು.ಏಕಬಳಕೆಯ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು,ಈ ಸಂದರ್ಭದಲ್ಲಿ ಮಾತನಾಡಿದ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸುಳ್ಯ ತಾಲೂಕಿನ ಅಂಬ್ಯುಲೆನ್ಸ್ ಚಾಲಕ ಮಾಲಕರಿಗೆ ಸಸ್ಟೆನೆಬಲ್ ಸ್ಟೀಲ್ ಬಾಟಲ್ ವಿತರಣೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗಾಂಧಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಪದಾಧಿಕಾರಿಗಳ ಅಕ್ಟೋಬರ್‌ 2 ಗಾಂಧಿ ಜಯಂತಿ ಪ್ರಯುಕ್ತ ನಡೆಯುವ ಕಾರ್ಯಕ್ರಮದ ಕುರಿತಾದ ಪೂರ್ವಭಾವಿ ಸಭೆಯು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ರೈ ಕಳಂಜರವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಎನ್‌ ಎ ರಾಮಚಂದ್ರರವರು ನೆರವೇರಿಸಿದರು. ಸಭೆಯಲ್ಲಿ ಅಕ್ಟೋಬರ್‌ 2 ಗಾಂಧಿ ಜಯಂತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗಾಂಧಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ Read More »

ಪವಿತ್ರ ಶಿಲುಬೆಯ ಚರ್ಚ್ ಬೆಳ್ಳಾರೆಯಲ್ಲಿ ಮೊಂತಿ ಫೆಸ್ತ್ ಆಚರಣೆ

ಪವಿತ್ರ ಶಿಲುಬೆಯ ಚರ್ಚ್ ಬೆಳ್ಳಾರೆಯಲ್ಲಿ ಮಾತೆ ಮರಿಯಮ್ಮನವರ ಜನ್ಮ ದಿನಾಚರಣೆಯನ್ನು ( ಮೊಂತಿ ಫೆಸ್ತ್) ಅದ್ದೂರಿಯಾಗಿ ಆಚರಿಸಲಾಯಿತು. ಹೂಗಳಿಂದ ಶೃಂಗರಿಸಿದ ಮೇರಿ ಮಾತೆಯ ಪ್ರತಿಮೆಯನ್ನು ಭಕ್ತಿ ಪೂರ್ವಕವಾಗಿ ಮೆರವಣಿಗೆಯಲ್ಲಿ ಚರ್ಚಿನ ದ್ವಾರದಿಂದ ಪವಿತ್ರ ಶಿಲುಬೆಯ ಚರ್ಚ್ ವರೆಗೆ ತರಲಾಯಿತು. ಧರ್ಮಗುರುಗಳಾದ ರೆ.ಫಾ. ಡಾ|| .ಆಂಟನಿ ಪ್ರಕಾಶ್ ಮೊಂತೆರೋ ರವರು ಹೊಸ ತೆನೆಗಳನ್ನು ಆಶೀರ್ವದಿಸಿದರು. ನಂತರ ಮಾತೆ ಮರಿಯಳ ಪ್ರತಿಮೆಗೆ ಮಕ್ಕಳು ಮತ್ತು ಹಿರಿಯರು ಹೂಗಳನ್ನು ಅರ್ಪಿಸಿದರು. ಬಳಿಕ ಪವಿತ್ರ ಶಿಲುಬೆಯ ಚರ್ಚ್ ನ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರಬಲಿ

ಪವಿತ್ರ ಶಿಲುಬೆಯ ಚರ್ಚ್ ಬೆಳ್ಳಾರೆಯಲ್ಲಿ ಮೊಂತಿ ಫೆಸ್ತ್ ಆಚರಣೆ Read More »

ಆಲೆಟ್ಪಿ : ಪರಿಶಿಷ್ಟ ಪಂಗಡದ ರೈತರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಾಗೂ ಕೃಷಿ ಪರಿಕರ ವಿತರಣಾ ಕಾರ್ಯಕ್ರಮ

ಆಲೆಟ್ಟಿ: ಐಸಿಎಆರ್–ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಆಲೆಟ್ಟಿ ಹಾಗೂ ಶ್ರೀ ಲಕ್ಷ್ಮೀ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಪರಿಶಿಷ್ಟ ಪಂಗಡದ ರೈತರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಾಗೂ ಕೃಷಿ ಪರಿಕರ ವಿತರಣಾ ಕಾರ್ಯಕ್ರಮ ನಡೆಯಿತು.ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಟಿ.ಜೆ. ರಮೇಶ, ಐಸಿಎಆರ್–IIHRನ ಪ್ರಧಾನ ವಿಜ್ಞಾನಿ ಡಾ. ವಿ. ಶಂಕರ್, ಜಿಲ್ಲಾ ಯೋಜನಾ

ಆಲೆಟ್ಪಿ : ಪರಿಶಿಷ್ಟ ಪಂಗಡದ ರೈತರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಾಗೂ ಕೃಷಿ ಪರಿಕರ ವಿತರಣಾ ಕಾರ್ಯಕ್ರಮ Read More »

ಕುಂದಲ್ಪಾಡಿ ಚಂದ್ರಶೇಖರ ನಿಧನ

ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂದಲ್ಪಾಡಿ ಚಂದ್ರಶೇಖರ ಅವರು ಸೆ.8ರಂದು ಸ್ವಗ್ರಹದಲ್ಲಿ ಅಸೌಖ್ಯದಿಂದ ನಿಧನರಾದರು. ಅವರಿಗೆ 86 ವರ್ಷ ಪ್ರಾಯವಾಗಿತ್ತು.ಮ್ರತರು ಪತ್ನಿ ಜಾನಕಿ,ಮಕ್ಕಳಾದ ಲೀಲಾವತಿ,ಪುಷ್ಪಾವತಿ,ಚಂದ್ರಕಲಾ,ರತ್ನಾಕರ,ತಾರಾಮಣಿ,ಮೊಮ್ಮಕ್ಕಳನ್ನು ,ಅಳಿಯದಿಂದರನ್ನುಬಂಧುಗಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.ಅಂತ್ಯ ಕ್ರಿಯೆಯು ಇಂದು ಸಂಜೆ ಸ್ವಗೃಹದಲ್ಲಿ ನಡೆಯಲಿರುವುದು ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಲ್ಪಾಡಿ ಚಂದ್ರಶೇಖರ ನಿಧನ Read More »

ಮೆದುಳಿನ ರಕ್ತಸ್ರಾವದಿಂದ 35ರ ಹರೆಯದ ಮೋಹನ್ ನಾಯ್ಕ ದಡ್ಡು ನಿಧನ

ಕಡಬ: ಪಪ್ಸ್ ಸರಬರಾಜು ಮಾಡುವ ಉದ್ದೇಶದಿಂದ ಕಾರಿನಲ್ಲಿ ಹೊರಟಿದ್ದ ಎಡಮಂಗಲ ಗ್ರಾಮದ ಯುವ ಬೇಕರಿ ಉದ್ಯಮಿ ಮೋಹನ್ ನಾಯ್ಕ ದಡ್ಡು (35) ಅವರು ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.8ರಂದು ನಿಧನರಾದರು.ಎಡಮಂಗಲದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಮೋಹನ್ ನಾಯ್ಕ ಅವರು ಸೆಪ್ಟೆಂಬರ್ 6ರಂದು ಸಿದ್ಧಪಡಿಸಿದ್ದ ಪಪ್ಸ್‌ಗಳನ್ನು ಸರಬರಾಜು ಮಾಡಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾಗಿ ಅಸ್ವಸ್ಥಗೊಂಡರೆನ್ನಲಾಗಿದೆ. ತಕ್ಷಣ ಅವರನ್ನು ಕಡಬ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ

ಮೆದುಳಿನ ರಕ್ತಸ್ರಾವದಿಂದ 35ರ ಹರೆಯದ ಮೋಹನ್ ನಾಯ್ಕ ದಡ್ಡು ನಿಧನ Read More »

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ – ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಗುರುವಂದನೆ ಕಾರ್ಯಕ್ರಮ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ – ಮುದ್ದು ಕೃಷ್ಣ ರಾದೆ ಸ್ಪರ್ಧೆ ಹಾಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 5ರಂದು ಆಯೋಜಿಸಲಾಯಿತು.ಘಟಕಾಧ್ಯಕ್ವರಾದ ಜೆಎಪ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರು ಶಿಕ್ಷಕರು ಆದ ಶ್ರೀಮತಿ ಗೀತಾಂಜಲಿ ಟಿ. ಜಿ., ಜೇಸಿಐ ಸುಳ್ಯ ಪಯಸ್ವಿಯ ಕಾರ್ಯದರ್ಶಿ ತಾರಾ ಚೂಂತಾರು, ಸಪ್ತಾಹ ನಿರ್ದೇಶಕ ವಿನೋದ್ ಎಂ. ಎನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ಮಕ್ಕಳು ಮುದ್ದು

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ – ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಗುರುವಂದನೆ ಕಾರ್ಯಕ್ರಮ Read More »

ಸುಳ್ಯದಲ್ಲಿ ಯಶಸ್ವಿಯಾಗಿ ನಡೆದ ಸ್ವರ್ಣಂ ಕೃಷ್ಣ ವೇಷ ಸ್ಪರ್ಧೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸ್ವರ್ಣಂ ಜ್ಯುವೆಲ್ಸ್‌ ಹಾಗೂ ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸಹಯೋಗದಲ್ಲಿ ಪುಟಾಣಿ ಮಕ್ಕಳಿಗಾಗಿ ಸ್ವರ್ಣಂ ಕೃಷ್ಣ ವೇಷ ಸ್ಪರ್ಧೆ ಸೆ.06ರಂದು ಸ್ವರ್ಣಂ ಜ್ಯುವೆಲ್ಲರಿಯ ಆವರಣದಲ್ಲಿ ನಡೆಯಿತು. ಸೂಂತೋಡು ಡೆಂಟಲ್‌ ಕ್ಲಿನಿಕ್‌ ನ ವೈದ್ಯೆ ಡಾ. ಶ್ರಮಿಕಾ ಸೂಂತೋಡು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ದ.ಕ. ಜಿಲ್ಲಾ ಗೌರವಾಧ್ಯಕ್ಷ ಹರೀಶ್‌ ಬಂಟ್ವಾಳ್‌ ಗೌರವ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸ್ವರ್ಣಂ ಜ್ಯುವೆಲರಿ ಪಾಲುದಾರ

ಸುಳ್ಯದಲ್ಲಿ ಯಶಸ್ವಿಯಾಗಿ ನಡೆದ ಸ್ವರ್ಣಂ ಕೃಷ್ಣ ವೇಷ ಸ್ಪರ್ಧೆ Read More »

error: Content is protected !!
Scroll to Top