September 2026

88ನೇ ತಿಂಗಳಿಗೂ ಮುಂದುವರಿದ ಆರಂತೋಡು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ

ಆರಂತೋಡು, ಸೆ.27: ಆರಂತೋಡು ಗ್ರಾಮ ಪಂಚಾಯತ್‌ನ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನವು ನಿರಂತರ 88ನೇ ತಿಂಗಳಿಗೂ ಮುಂದುವರಿದಿದೆ.ಸೆ.27ರಂದು ಭಾನುವಾರ ಸ್ಪಂದನಾ ಗೆಳೆಯರ ಬಳಗ (ರಿ.) ಅಡ್ತಲೆ, ಆರಂತೋಡು ಇದರ ಸಹಯೋಗದಲ್ಲಿ 88ನೇ ತಿಂಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಪರಿಸರ ಸ್ವಚ್ಛತೆ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಸ್ಪಂದನಾ ಗೆಳೆಯರ ಬಳಗದ ಪದಾಧಿಕಾರಿಗಳು, ಆರಂತೋಡು ಗ್ರಾಮ ಪಂಚಾಯತ್‌ನಿಂದ ವರ್ಗಾವಣೆಗೊಂಡ ನಿರ್ಗಮಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ,

88ನೇ ತಿಂಗಳಿಗೂ ಮುಂದುವರಿದ ಆರಂತೋಡು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ Read More »

ಅರಂತೋಡು ಸರ್ಕಾರಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನಕ್ಕೆ ಮನವಿ

ಅರಂತೋಡು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಅರಂತೋಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಅನುದಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಯಿತು.ಶಾಲೆಯ ಅಗತ್ಯ ಮೂಲಸೌಕರ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ

ಅರಂತೋಡು ಸರ್ಕಾರಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನಕ್ಕೆ ಮನವಿ Read More »

ಸೇವಾ ಸಂಕಲ್ಪ: ಅರಂತೋಡು ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಿಳಾ ಮೋರ್ಚಾದಿಂದ ಗೌರವ

ಅರಂತೋಡು: ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಸಮರ್ಪಣೆಯ ಹಿನ್ನೆಲೆ ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಅರಂತೋಡು ಶಕ್ತಿ ಕೇಂದ್ರದ ಅರಂತೋಡು ಅಂಗನವಾಡಿಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಲಾಯಿತು.ಅಂಗನವಾಡಿ ಶಿಕ್ಷಕಿ ಹೊನ್ನಮ್ಮ, ಸಹಾಯಕಿ ದೇವಕಿ ಹಾಗೂ ಆಶಾ ಕಾರ್ಯಕರ್ತೆ ತಿರುಮಲೇಶ್ವರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸುಳ್ಯ ಮಂಡಲ ಸಮಿತಿ ಹಾಗೂ ಮಹಿಳಾ ಮೋರ್ಚಾ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ

ಸೇವಾ ಸಂಕಲ್ಪ: ಅರಂತೋಡು ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಿಳಾ ಮೋರ್ಚಾದಿಂದ ಗೌರವ Read More »

ಯುವಜನ ಸಂಯುಕ್ತ ಮಂಡಳಿ ಮಹಾಸಭೆ: ರಂಜಿತ್ ಅಡ್ತಲೆಗೆ ಯುವರತ್ನ ಪ್ರಶಸ್ತಿ ಪ್ರದಾನ

ಸುಳ್ಯ, ಸೆ.26: ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ವಾರ್ಷಿಕ ಮಹಾಸಭೆ ಹಾಗೂ 2025-26ನೇ ಸಾಲಿನ ಯುವರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಸೆ.26ರಂದು ಸುಳ್ಯದಲ್ಲಿ ನಡೆಯಿತು.ಸಮಾರಂಭದಲ್ಲಿ ಸಮಾಜಸೇವೆ, ಯುವಜನ ಸಂಘಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ 2025-26ನೇ ಸಾಲಿನ ಯುವರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ರಂಜಿತ್ ಅಡ್ತಲೆ ಅವರನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪ್ರಶಸ್ತಿ ನೀಡಿ ಗೌರವಿಸಿದರು.ನಂತರ ಮಾತನಾಡಿದ ಅವರು ಯುವಜನರು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಯುವಶಕ್ತಿಯನ್ನು ಸಕಾರಾತ್ಮಕ ಚಟುವಟಿಕೆಗಳಿಗೆ ಬಳಸಿಕೊಂಡು

ಯುವಜನ ಸಂಯುಕ್ತ ಮಂಡಳಿ ಮಹಾಸಭೆ: ರಂಜಿತ್ ಅಡ್ತಲೆಗೆ ಯುವರತ್ನ ಪ್ರಶಸ್ತಿ ಪ್ರದಾನ Read More »

ಅ.5ರಂದು ಸುಳ್ಯದಲ್ಲಿ ಬೃಹತ್ ಜನಜಾಗೃತಿ ಸಮಾವೇಶ

ಸುಳ್ಯ, ಸೆ.26: ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಾಗೂ ವ್ಯಸನಮುಕ್ತ ಬದುಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ-2ರ ಆಶ್ರಯದಲ್ಲಿ ಅ.5ರಂದು ಸುಳ್ಯದಲ್ಲಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ.ಕೇರ್ಪಳ ಬೂಡು ಬಂಟರ ಸಮುದಾಯ ಭವನದಲ್ಲಿ øನಡೆಯಲಿರುವ ಸಮಾವೇಶದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಜಿಲ್ಲಾ ಜನಜಾಗೃತಿ

ಅ.5ರಂದು ಸುಳ್ಯದಲ್ಲಿ ಬೃಹತ್ ಜನಜಾಗೃತಿ ಸಮಾವೇಶ Read More »

ಕರಾವಳಿ ನಗರ ಪ್ರಾಧಿಕಾರಗಳ ಒಕ್ಕೂಟದ ಮನವಿಗೆ ಸರ್ಕಾರದ ಸ್ಪಂದನೆ : ಜನ ಪರ ನಿರ್ಧಾರಕ್ಕೆ ಒಕ್ಕೂಟದ ಸಂಚಾಲಕ ಕೆ.ಎಂ. ಮುಸ್ತಫಾ ಸುಳ್ಯ ಅವರಿಂದ ಸರ್ಕಾರಕ್ಕೆ ಶ್ಲಾಘನೆ

ಕರಾವಳಿ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿ ಇತರೆ ಜಿಲ್ಲೆಗಳಿಗಿಂತ ಭಿನ್ನವಾಗಿದ್ದು, ಇಲ್ಲಿ ತುಂಡು ಭೂಮಿಗಳು ಹೆಚ್ಚಾಗಿವೆ. ಇಲ್ಲಿ 1 ಸೆಂಟ್ ಕನಿಷ್ಠ ವಿಸ್ತೀರ್ಣದಿಂದ ಪ್ರಾರಂಭಗೊಳ್ಳುವ ಭೂಮಿಗಳಿವೆ. ರಾಜ್ಯದ ಇತರ ಜಿಲ್ಲೆಗಳಿಗಿಂತ  ಇಲ್ಲಿನ ಬೌಗೊಳಿಕ ಸ್ಥಿತಿ ಗತಿ ಗಳು ವಿಭಿನ್ನ ವಾಗಿದ್ದು, ತೋಡು, ನದಿ, ಸಮುದ್ರ ಪೋರoಬೊಕು, ಕಾಡು, ಗುಡ್ಡ, ಬೆಟ್ಟ ಅರಣ್ಯ ಭೂಮಿಗಳು ಹೆಚ್ಚಾಗಿರುವ ಜಿಲ್ಲೆ ಗಳಾಗಿರುವುದರಿಂದ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಬೇಕೆಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟ ರಚಿಸಿ

ಕರಾವಳಿ ನಗರ ಪ್ರಾಧಿಕಾರಗಳ ಒಕ್ಕೂಟದ ಮನವಿಗೆ ಸರ್ಕಾರದ ಸ್ಪಂದನೆ : ಜನ ಪರ ನಿರ್ಧಾರಕ್ಕೆ ಒಕ್ಕೂಟದ ಸಂಚಾಲಕ ಕೆ.ಎಂ. ಮುಸ್ತಫಾ ಸುಳ್ಯ ಅವರಿಂದ ಸರ್ಕಾರಕ್ಕೆ ಶ್ಲಾಘನೆ Read More »

ಮಾಧ್ಯಮ ಅಕಾಡೆಮಿ ತರಬೇತಿಗೆ ‘ಸುದ್ದಿ ಬಿಡುಗಡೆ’ ಪತ್ರಕರ್ತೆಯರ ಆಯ್ಕೆ

ಸುಳ್ಯ: ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಉಪಕ್ರಮದಡಿ ಮೈಸೂರಿನಲ್ಲಿ ಸೆ. 27ರಿಂದ 30ರವರೆಗೆ ನಡೆಯಲಿರುವ ತರಬೇತಿ ಕಾರ್ಯಕ್ರಮಕ್ಕೆ ಸುಳ್ಯದ ಸುದ್ದಿ ಬಿಡುಗಡೆ ವಾರಪತ್ರಿಕೆಯ ಪತ್ರಕರ್ತೆಯರಾದ ಜಯಶ್ರೀ ಕೊಯಿಂಗೋಡಿ ಹಾಗೂ ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಆಯ್ಕೆಯಾಗಿದ್ದಾರೆ.ಜಯಶ್ರೀ ಕೊಯಿಂಗೋಡಿ ಹಾಗೂ ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಅವರು ಹಲವು ವರ್ಷಗಳಿಂದ ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.ಜಯಶ್ರೀ ಕೊಯಿಂಗೋಡಿ ಅವರು ಸುಳ್ಯ ಕಸಬಾ ಕೊಯಿಂಗೋಡಿಯ ಶಿವಕುಮಾರ್ ಕೊಯಿಂಗೋಡಿ

ಮಾಧ್ಯಮ ಅಕಾಡೆಮಿ ತರಬೇತಿಗೆ ‘ಸುದ್ದಿ ಬಿಡುಗಡೆ’ ಪತ್ರಕರ್ತೆಯರ ಆಯ್ಕೆ Read More »

ಅ.9 ರಿಂದ 11 ವರೆಗೆ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ಹಬ್ಬ-2026

ಸುಳ್ಯದ ರಂಗಮಯೂರಿ ಕಲಾಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ, ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಕಸಿತ ಭಾರತದ ಕಡೆ ಮಕ್ಕಳ ನಡೆ ಎಂಬ ಧೈಯದೊಂದಿಗೆ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಸಂಕಲ್ಪ ಮಕ್ಕಳ ಹಬ್ಬ – 2026 ಅ.9ರಿಂದ 11ರವರೆಗೆ ಮೂರು ದಿನಗಳ ಕಾಲ ಸುಳ್ಯದ ಅಮರ ಶ್ರೀಭಾಗ್ ನ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ ಕಾರ್ಯಕ್ರಮ ಸಂಯೋಜಕರಾದ ಲೋಕೇಶ್ ಊರುಬೈಲು ಮತ್ತು ರಂಜಿತ್ ಅಡ್ತಲೆ ತಿಳಿಸಿದರು.ಸುಳ್ಯದ ಪ್ರೆಸ್

ಅ.9 ರಿಂದ 11 ವರೆಗೆ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ಹಬ್ಬ-2026 Read More »

ಪೆರ್ನಾಜೆಯಲ್ಲಿ ಕಾಡಾನೆ ದಾಂಧಲೆ: ಬಾಳೆ, ಅಡಿಕೆ ಗಿಡಗಳಿಗೆ ಹಾನಿ

ಪೆರ್ನಾಜೆ, ಸೆ.25: ಪೆರ್ನಾಜೆ ಗ್ರಾಮದಲ್ಲಿ ಕಾಡಾನೆಯೊಂದು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಉಂಟು ಮಾಡಿದ ಘಟನೆ ಸೆ.25ರಂದು ವರದಿಯಾಗಿದೆ.ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಸುಮಾರು 10 ಬಾಳೆ ಗಿಡಗಳು ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸಿದೆ. ಕಾಡಾನೆ ದಾಂಧಲೆಯಿಂದ ಕೃಷಿಕರಿಗೆ ಆತಂಕ ಎದುರಾಗಿದ್ದು, ಬೆಳೆ ನಷ್ಟದಿಂದ ರೈತರು ಚಿಂತಿತರಾಗಿದ್ದಾರೆ.ಪೆರ್ನಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕೃಷಿಕರ ಬೆಳೆಗಳನ್ನು ರಕ್ಷಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಪೆರ್ನಾಜೆಯಲ್ಲಿ ಕಾಡಾನೆ ದಾಂಧಲೆ: ಬಾಳೆ, ಅಡಿಕೆ ಗಿಡಗಳಿಗೆ ಹಾನಿ Read More »

ಡೇಟಾ ಬೇಡದ ಮೊಬೈಲ್ ಬಳಕೆದಾರರಿಗೆ ಸಿಹಿಸುದ್ದಿ

ನವದೆಹಲಿ: ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಕೆ ಮಾಡದ ಗ್ರಾಹಕರಿಗೆ ಅನಗತ್ಯ ಡೇಟಾ ಪ್ಯಾಕ್‌ಗಳಿಗಾಗಿ ಹಣ ಖರ್ಚು ಮಾಡುವ ಪರಿಸ್ಥಿತಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಧ್ವನಿ ಕರೆ ಹಾಗೂ SMS ಸೇವೆಗಳಿಗೆ ಮಾತ್ರ ಸೀಮಿತವಾದ ಪ್ರತ್ಯೇಕ ರೀಚಾರ್ಜ್ ಪ್ಲಾನ್‌ಗಳಿಗೆ TRAI ಅವಕಾಶ ಕಲ್ಪಿಸಿದೆ.ಇಂತಹ Voice & SMS Only Packs‌ನಲ್ಲಿ ಇಂಟರ್ನೆಟ್ ಡೇಟಾ ಇರುವುದಿಲ್ಲ. ಕರೆ ಹಾಗೂ ಸಂದೇಶ ಸೇವೆ ಮಾತ್ರ ಅಗತ್ಯವಿರುವ ಫೀಚರ್‌ಫೋನ್ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಆಯ್ಕೆ ಮಾಡಬಹುದು. TRAI ಮಾಹಿತಿಯಂತೆ, ಈ ವರ್ಗದ

ಡೇಟಾ ಬೇಡದ ಮೊಬೈಲ್ ಬಳಕೆದಾರರಿಗೆ ಸಿಹಿಸುದ್ದಿ Read More »

error: Content is protected !!
Scroll to Top