ಕರಾವಳಿ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿ ಇತರೆ ಜಿಲ್ಲೆಗಳಿಗಿಂತ ಭಿನ್ನವಾಗಿದ್ದು, ಇಲ್ಲಿ ತುಂಡು ಭೂಮಿಗಳು ಹೆಚ್ಚಾಗಿವೆ. ಇಲ್ಲಿ 1 ಸೆಂಟ್ ಕನಿಷ್ಠ ವಿಸ್ತೀರ್ಣದಿಂದ ಪ್ರಾರಂಭಗೊಳ್ಳುವ ಭೂಮಿಗಳಿವೆ. ರಾಜ್ಯದ ಇತರ ಜಿಲ್ಲೆಗಳಿಗಿಂತ ಇಲ್ಲಿನ ಬೌಗೊಳಿಕ ಸ್ಥಿತಿ ಗತಿ ಗಳು ವಿಭಿನ್ನ ವಾಗಿದ್ದು, ತೋಡು, ನದಿ, ಸಮುದ್ರ ಪೋರoಬೊಕು, ಕಾಡು, ಗುಡ್ಡ, ಬೆಟ್ಟ ಅರಣ್ಯ ಭೂಮಿಗಳು ಹೆಚ್ಚಾಗಿರುವ ಜಿಲ್ಲೆ ಗಳಾಗಿರುವುದರಿಂದ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಬೇಕೆಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟ ರಚಿಸಿ ಮನವಿ ಮಾಡಲಾಗಿದ್ದು ಇದೀಗ ಪ್ರತ್ಯೇಕ ವಲಯ ನಿಯಮಾವಳಿ ಮಾಡದೇ ಇದ್ದರೂ ಅನೇಕ ಸಮಸ್ಯೆ ಗಳಿಗೆ ಪರಿಹಾರ ನೀಡಿ ನಿಯಮಗಳನ್ನು ಸರಳೀಕರಣಗೊಳಿಸಿ ದಾಖಲೆಗಳನ್ನು ಸರಿಪಡಿಸಲು, ವಿನ್ಯಾಸ ಅನುಮೋದನೆ,ಮನೆ ನಿರ್ಮಾಣ, 9/11, ಖಾತೆ ಪಡೆಯಲು ಅನುಕೂಲ ಮಾಡಿರುವುದು ಸಂತಸ ತಂದಿದೆ
ಇದಕ್ಕಾಗಿ ಕರ್ನಾಟಕ ಸರ್ಕಾರ ದ ಮುಖ್ಯ ಮಂತ್ರಿಗಳಾದ ಡಿ. ಕೆ. ಶಿವಕುಮಾರ್, ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಯತೀoದ್ರ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್ ರವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ, ಒಕ್ಕೂಟದ ಸಂಚಾಲಕ ಕೆ. ಎಂ. ಮುಸ್ತಫ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಅವರು ಸುಳ್ಯ ನಗರ ಪಂಚಾಯತ್ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ನಿಯಮಾವಳಿ ಜಾರಿಗೆ ಬರುವ ಮೊದಲಿನ ಬೆಳವಣಿಗೆಗಳಲ್ಲಿ ಸಣ್ಣ-ಸಣ್ಣ ವಿಸ್ತೀರ್ಣದ ನಿವೇಶನಗಳಿಗೆ 9/11, ವಿನ್ಯಾಸ ಅನುಮೋದನೆ ನೀಡಲು,ಕಟ್ಟಡ ನಿರ್ಮಾಣ ಪರವಾನಿಗೆ ನೀಡಲು ಕಾನೂನಿನ ತೊಡಕಿನಿಂದ ಕಷ್ಟಕರವಾಗಿತ್ತು
ಅಲ್ಲದೇ 25 ಸೆಂಟ್ಸ್ ವರೆಗಿನ ಜಾಗವನ್ನು
ವಿನ್ಯಾಸ ಅನುಮೋದನೆ, ಖಾತೆ, 9/11 ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್ ಗಳಿಗೆ ನೀಡಬೇಕೆಂದು ಮನವಿ ಸಲ್ಲಿಸಿದ್ದೆವು ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿಯವರು ಮತ್ತು ಸಚಿವರು ಇಲಾಖೆ ಗೆ ನಿರ್ದೇಶನ ನೀಡಿದ ಸರಕಾರ ಅನೇಕ ನಿಯಮ ಗಳಲ್ಲಿ ಸರಳೀಕರಣ ಗೊಳಿಸಿ ಆದೇಶ ಹೊರಡಿಸಿರುವುದು ಸಂತಸ ತಂದಿದೆ ಎಂದು ಕರಾವಳಿ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟದ ಸಂಚಾಲಕ ಕೆ. ಎಂ. ಮುಸ್ತಫ ತಿಳಿಸಿದರು
ಒಕ್ಕೂಟ ರಚನೆಯಾದ ನಂತರ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನಾನುಕೂಲ ಮತ್ತು ಅಧಿಕಾರಿಗಳಿಗೆ ಇರುವ ಕಾನೂನು ತೊಡಕುಗಳ ಬಗ್ಗೆ ಸರ್ಕಾರಕ್ಕೆ ಕಾಲ ಕಾಲಕ್ಕೆ ವಿವರಿಸಲಾಗಿತ್ತು. ಅಲ್ಲದೇ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್,ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಯತೀದ್ರ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಲಾಗಿತ್ತು ಇದೀಗ ಸರ್ಕಾರ ನಮ್ಮ ಬೇಡಿಕೆ ಗೆ ಸ್ಪಂದಿಸಿ ಸ್ಪಂದಿಸಿದ್ದು, ಈಗ 25 ಸೆಂಟ್ಸ್ (1000 ಚ.ಮೀ) ವರೆಗಿನ ವಿನ್ಯಾಸ ಅನುಮೋದನೆ, 9/11 ಮತ್ತು ಖಾತಾ ಅನುಮೋದನೆಗೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಿದೆ.
ಖಾಸಗಿ ರಸ್ತೆ, ಸರ್ಕಾರಿ ಸಂಪರ್ಕ ರಸ್ತೆ ಗಳ ಬಗ್ಗೆ ಇರುವ ಸಮಸ್ಯೆ ಗಳನ್ನು ಈಗಾಗಲೇ ಸರ್ಕಾರ ಬಗೆ ಹರಿಸಿದ್ದು ಸರ್ಕಾರದ ರಾಜ್ಯ ಪತ್ರದಲ್ಲಿ ( ಗಜೆಟ್ ನೋಟಿಫಿಕೇಶನ್ ) ಆಗಿರುತ್ತದೆ, ಕಟ್ ಕನ್ವರ್ಷನ್ ಬಗ್ಗೆ ನಿಯಮ ಗಳ ಸರಳೀಕರಣಗೊಳಿಸಿ ನಗರ ವ್ಯಾಪ್ತಿಯಲ್ಲಿ ಜ್ಯಾರಿ ಗೊಂಡಿದ್ದು ಗ್ರಾಮಾoತರದಲ್ಲಿ ಹೊರಡಿಸಲಾದ ಆದೇಶ ಸುತ್ತೋಲೆ ಸಾರ್ವಜನಿಕ ಆಕ್ಷೇಪಣೆ ಹಂತದಲ್ಲಿದ್ದು ಶೀಘ್ರದಲ್ಲೇ ಬರಲಿದೆ, ಕರಾವಳಿ ಜಿಲ್ಲೆಗಳನ್ನು ಹಿಲ್ ಏರಿಯಾ ಆಗಿ ಘೋಷಿಸಬೇಕೆಂಬ ಮನವಿಗೆ ಸ್ಪಂದಿಸಿ ದ ಸರಕಾರ ಬೇಡಿಕೆಯನ್ನು ಈಡೇರಿಸಿ ಕನಿಷ್ಠ ರಸ್ತೆ ಅಗಲ 3.65 ಮೀಟರ್ ( 13 ಅಡಿ ) ಗೆ ಕಡಿತ ಗೊಳಿಸಿರುವುದು ರಸ್ತೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದರು
ನಗರ ವ್ಯಾಪ್ತಿಯಲ್ಲಿ ಈಗಾಗಲೇ ಬಿ ಖಾತೆ ಹೊಂದಿದವರಿಗೆ ಎ ಖಾತೆ ಪಡೆಯಬಹುದು, ಗ್ರಾಮಾಂತರ ದಲ್ಲಿ ಕ್ರಮ ಬದ್ದವಲ್ಲದ ಸ್ವತ್ತು ಗಳಿಗೆ ಬಿ ಖಾತೆ ಸೌಲಭ್ಯ ವಿಸ್ತರಣೆ, 1200 ಚದರ ಅಡಿ ವರೆಗೆ ಓಕುಪನ್ಸಿ ಸರ್ಟಿಫಿಕೇಟ್, ಕಂಪ್ಲೀಷನ್ ಸರ್ಟಿಫಿಕೇಟ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ ಈ ಎಲ್ಲಾ ಸೌಲಭ್ಯ ಗಳು ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭೂ ಗ್ಯಾರಂಟಿ ಯೋಜನೆ
ಎಂದು ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿರುತ್ತಾರೆ
ಸರ್ಕಾರದ ಈ ಜನಪರ ನಿರ್ಧಾರಕ್ಕೆ ಕರಾವಳಿ ನಗರ ಪ್ರಾಧಿಕಾರಗಳ ಒಕ್ಕೂಟದ ಸಂಚಾಲಕ *ಕೆ.ಎಂ. ಮುಸ್ತಫಾ ಸುಳ್ಯ* ಅವರು ಮುಖ್ಯ ಮಂತ್ರಿಯವರಿಗೆ ಮತ್ತು ಸ್ಪೀಕರ್ ಆಗಿದ್ದಾಗ ಮತ್ತು ಇದೀಗ ಉಸ್ತುವಾರಿ ಸಚಿವರಾಗಿ ವಿಶೇಷ ಮುತುವರ್ಜಿ ವಹಿಸಿದ ಯು. ಟಿ ಖಾದರ್ ರವರಿಗೆ ಕೆ. ಎಂ. ಮುಸ್ತಫ ಅಭಿನಂದನೆ ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ,ಶಹೀದ್ ಪಾರೆ ಉಪಸ್ಥಿತರಿದ್ದರು.
—

























