September 2026

ಶಿಕ್ಷಕರ ನೇಮಕಾತಿಗೆ ಮತ್ತೆ ಅವಕಾಶ: ಅರ್ಜಿ ಸಲ್ಲಿಕೆ ಗಡುವು ಅ.26ರವರೆಗೆ ವಿಸ್ತರಣೆ

ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಡಿ ನಡೆಯಲಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಈ ಹಿಂದೆ ಸೆ.25ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಇದೀಗ ಅ.26ರವರೆಗೆ ಅವಕಾಶ ಕಲ್ಪಿಸಲಾಗಿದೆ.ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಲು ಅ.28ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯೊಂದಿಗೆ ನೇಮಕಾತಿ ಪರೀಕ್ಷೆಯ ದಿನಾಂಕದಲ್ಲೂ ಬದಲಾವಣೆ ಮಾಡಲಾಗಿದೆ.ಆನ್‌ಲೈನ್‌ ಮೂಲಕ ನಡೆಯಬೇಕಿದ್ದ ಪರೀಕ್ಷೆಯನ್ನು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಸಲು ಇಲಾಖೆ ಉದ್ದೇಶಿಸಿದ್ದು, ಪರೀಕ್ಷೆಯ ನಿಖರ ದಿನಾಂಕವನ್ನು ನಂತರ

ಶಿಕ್ಷಕರ ನೇಮಕಾತಿಗೆ ಮತ್ತೆ ಅವಕಾಶ: ಅರ್ಜಿ ಸಲ್ಲಿಕೆ ಗಡುವು ಅ.26ರವರೆಗೆ ವಿಸ್ತರಣೆ Read More »

ರಾಜ್ಯದಲ್ಲಿ ಇಂದು ಮಳೆ ಮುಂದುವರಿಕೆ ಸಾಧ್ಯತೆ; ಕರಾವಳಿ–ಮಲೆನಾಡಿನಲ್ಲಿ ಎಚ್ಚರಿಕೆ

ಬೆಂಗಳೂರು, ಸೆ.25: ಕರ್ನಾಟಕದ ಹಲವು ಭಾಗಗಳಲ್ಲಿ ಇಂದು ಕೂಡ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಬಲವಾದ ಗಾಳಿಯ ಸಾಧ್ಯತೆಯೂ ಇದೆ.ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲೂ ಮೋಡ

ರಾಜ್ಯದಲ್ಲಿ ಇಂದು ಮಳೆ ಮುಂದುವರಿಕೆ ಸಾಧ್ಯತೆ; ಕರಾವಳಿ–ಮಲೆನಾಡಿನಲ್ಲಿ ಎಚ್ಚರಿಕೆ Read More »

ಸೆ.28ರಿಂದ ಬ್ಯಾಂಕ್ ನೌಕರರ ಮೂರು ದಿನ ಮುಷ್ಕರ,ಐದು ದಿನಗಳ ಕಾಲ ಶಾಖಾ ಸೇವೆಗಳಿಗೆ ವ್ಯತ್ಯಯ ಸಾಧ್ಯತೆ

ನವದೆಹಲಿ, ಸೆ.25: ಬ್ಯಾಂಕ್ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಸರಣಿ ರಜೆ ಹಾಗೂ ಮುಷ್ಕರದ ಹಿನ್ನೆಲೆಯಲ್ಲಿ ಶಾಖಾ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ನೌಕರರು ಮೂರು ದಿನಗಳ ಮುಷ್ಕರ ನಡೆಸಲು ಮುಂದಾಗಿದ್ದಾರೆ.ಬ್ಯಾಂಕ್ ಉದ್ಯೋಗಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರಕ್ಕೆ ಕರೆ ನೀಡಿದೆ. ಪ್ರಮುಖವಾಗಿ ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಇರಬೇಕು ಹಾಗೂ ಎಲ್ಲ ಶನಿವಾರಗಳನ್ನೂ ರಜಾದಿನವನ್ನಾಗಿ ಮಾಡಬೇಕು ಎಂಬ ಬೇಡಿಕೆ

ಸೆ.28ರಿಂದ ಬ್ಯಾಂಕ್ ನೌಕರರ ಮೂರು ದಿನ ಮುಷ್ಕರ,ಐದು ದಿನಗಳ ಕಾಲ ಶಾಖಾ ಸೇವೆಗಳಿಗೆ ವ್ಯತ್ಯಯ ಸಾಧ್ಯತೆ Read More »

ಮಂಡೆಕೋಲು: ರಬ್ಬರ್ ಸೊಸೈಟಿಯ ವಿಶೇಷ ಸಭೆ, ಸದಸ್ಯರಿಗೆ ಸದಸ್ಯತ್ವ ಕಾರ್ಡ್ ವಿತರಣೆ

ಸುಳ್ಯ: ಮಂಡೆಕೋಲು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿಯ ವಿಶೇಷ ಸಭೆ ಗ್ರಾಮ ಪಂಚಾಯತ್ ಕಟ್ಟಡದ ಸಭಾ ಭವನದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಉದ್ಘಾಟಿಸಿದರು. ರಬ್ಬರ್ ಬೋರ್ಡ್ ನ ಸುಳ್ಯ ಕ್ಷೇತ್ರದ ವೀಕ್ಷಣಾಧಿಕಾರಿ ಪವಿತ್ರ ಅವರು ಸರಕಾರದಿಂದ ದೊರೆಯುವ ವಿವಿಧ ಸವಲತ್ತುಗಳಾದ ಗುಂಪು ವಿಮೆ, ರಬ್ಬರ್ ಮೂರ್ತೆದಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ರೈನ್ ಗಾರ್ಡ್ ಹಾಗೂ ಇನ್ನಿತರ ವಿಷಯಗಳ ಕುರಿತಂತೆ ರಬ್ಬರ್ ಬೆಳೆಗಾರರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ

ಮಂಡೆಕೋಲು: ರಬ್ಬರ್ ಸೊಸೈಟಿಯ ವಿಶೇಷ ಸಭೆ, ಸದಸ್ಯರಿಗೆ ಸದಸ್ಯತ್ವ ಕಾರ್ಡ್ ವಿತರಣೆ Read More »

ಜಿಲ್ಲಾ ಮಟ್ಟದ ಗುಡ್ಡಗಾಡು ಓಟ:ರಾಜ್ಯಮಟ್ಟಕ್ಕೆ ಲಿತೇಶ್ ಪೀಚೆ ಆಯ್ಕೆ

ಪೆರಾಜೆ : ಪದವಿ ಪೂರ್ವ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ಎಡಪದವು ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕರ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.ಸ್ಪರ್ಧೆಯಲ್ಲಿ ತಂಡದ ಸದಸ್ಯ ಲಿತೇಶ್ ಪೀಚೆ ಅವರು ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಲಿತೇಶ್ ಅವರು

ಜಿಲ್ಲಾ ಮಟ್ಟದ ಗುಡ್ಡಗಾಡು ಓಟ:ರಾಜ್ಯಮಟ್ಟಕ್ಕೆ ಲಿತೇಶ್ ಪೀಚೆ ಆಯ್ಕೆ Read More »

ಅ.5 ರಂದು ಸುಳ್ಯದಲ್ಲಿ ಬೃಹತ್ ಜನಜಾಗೃತಿ ಸಮಾವೇಶ; ಚೆನ್ನಕೇಶವ ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ, ಸೆ.24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ದಕ್ಷಿಣ ಕನ್ನಡ ಜಿಲ್ಲೆ–2 ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ದಕ್ಷಿಣ ಕನ್ನಡ ಜಿಲ್ಲೆ–2ರ ಆಶ್ರಯದಲ್ಲಿ ಗಾಂಧಿ ಜಯಂತಿ ಸಂಭ್ರಮದ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಆಶಯದೊಂದಿಗೆ ‘ಗಾಂಧಿ ಸಂಸ್ಕೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ’ ಅಕ್ಟೋಬರ್ 5ರಂದು ಸುಳ್ಯದ ಬೂಡು–ಕೇರ್ಪಳದಲ್ಲಿರುವ ಆಶಾ ಪ್ರಕಾಶ್ ಶೆಟ್ಟಿ ಬಂಟರ ಸಮುದಾಯ ಭವನದಲ್ಲಿ ನಡೆಯಲಿದೆ.ಸಮಾವೇಶದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ

ಅ.5 ರಂದು ಸುಳ್ಯದಲ್ಲಿ ಬೃಹತ್ ಜನಜಾಗೃತಿ ಸಮಾವೇಶ; ಚೆನ್ನಕೇಶವ ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಸುಳ್ಯದಲ್ಲಿ ಮಕ್ಕಳ ಪ್ರತಿಭೆಗೆ ವೇದಿಕೆ: ‘ಸಂಕಲ್ಪ ಮಕ್ಕಳ ಹಬ್ಬ–2026’ರ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ, ಸೆ. 24: ರಂಗಮಯೂರಿ ಕಲಾ ಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ‘ಸಂಕಲ್ಪ ಮಕ್ಕಳ ಹಬ್ಬ–2026’ರ ಆಮಂತ್ರಣ ಪತ್ರಿಕೆಯನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ ಸುಳ್ಯ ಶ್ರೀ ಚೆನ್ನಕೇಶವ ದೇವಳದಲ್ಲಿ ಬಿಡುಗಡೆಗೊಳಿಸಿದರು.ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ಅ. 9ರಿಂದ 11ರವರೆಗೆ ನಡೆಯಲಿರುವ ಮಕ್ಕಳ ಹಬ್ಬದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನಗಳು ನಡೆಯಲಿವೆ. ಚಂದ್ರಶೇಖರ ಪೇರಾಲ್, ದಿನೇಶ್ ಮಡಪ್ಪಾಡಿ, ಡಾ. ಜ್ಞಾನೇಶ್,

ಸುಳ್ಯದಲ್ಲಿ ಮಕ್ಕಳ ಪ್ರತಿಭೆಗೆ ವೇದಿಕೆ: ‘ಸಂಕಲ್ಪ ಮಕ್ಕಳ ಹಬ್ಬ–2026’ರ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕಸ್ತೂರಿರಂಗನ್ ವರದಿಯಿಂದ ಸಂಪಾಜೆ ಗ್ರಾಮವನ್ನು ಸಂಪೂರ್ಣ ಕೈಬಿಡಲು ಮನವಿ

ಸಂಪಾಜೆ, ಸೆ.23: ಕಸ್ತೂರಿರಂಗನ್ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಪ್ರದೇಶಗಳು ಹಾಗೂ ಅದರ ಪರಿಣಾಮಗಳ ಕುರಿತು ಗ್ರಾಮಸ್ಥರಿಂದ ಆಕ್ಷೇಪಣೆ, ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯುವ ಉದ್ದೇಶದಿಂದ ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಎಸ್.ಎಲ್. ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗೈರುಹಾಜರಾಗಿ ಸಿಬ್ಬಂದಿಯನ್ನು ಕಳುಹಿಸಿದ್ದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮಸ್ಥರ ಪರವಾಗಿ ಮಾತನಾಡಿದ ತಿರುಮಲ ಸೋನ, ಕಸ್ತೂರಿರಂಗನ್ ವರದಿಗೆ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಆಕ್ಷೇಪಣೆ ಸಲ್ಲಿಸುವಂತೆ

ಕಸ್ತೂರಿರಂಗನ್ ವರದಿಯಿಂದ ಸಂಪಾಜೆ ಗ್ರಾಮವನ್ನು ಸಂಪೂರ್ಣ ಕೈಬಿಡಲು ಮನವಿ Read More »

ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ

ಬೆಂಗಳೂರು, ಸೆ.24: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಹಲವೆಡೆ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು-ಮಿಂಚು ಹಾಗೂ ಬಿರುಗಾಳಿ ಸಂಭವಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.ಸೆ.24ರಂದು ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದ್ದು, ಸೆ.25ರವರೆಗೂ ಗುಡುಗು-ಮಿಂಚಿನೊಂದಿಗೆ ಮಳೆ ಮುಂದುವರಿಯಬಹುದು ಎಂದು IMD ಮುನ್ಸೂಚನೆ ತಿಳಿಸಿದೆ. ಸೆ.26ರಿಂದ ಎಚ್ಚರಿಕೆ ಮಟ್ಟದಲ್ಲಿ ಇಳಿಕೆಯಾಗುವ

ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ Read More »

ಪಶ್ಚಿಮ ಘಟ್ಟದಲ್ಲಿ ಪತಂಗ ಮತ್ತು ಜೀರುಂಡೆಗಳ ಸಮೀಕ್ಷೆ: ಸುಳ್ಯ, ಬೆಳ್ತಂಗಡಿ ರೈತರ ತೋಟಗಳಿಗೆ ಭೇಟಿ ನೀಡಿದ ZSI ವಿಜ್ಞಾನಿಗಳ ತಂಡ

ಸುಳ್ಯ: ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷಾ ಇಲಾಖೆ (Zoological Survey of India) ವತಿಯಿಂದ ಪಶ್ಚಿಮ ಘಟ್ಟ ಪ್ರದೇಶದ ಜೀವವೈವಿಧ್ಯ ಅಧ್ಯಯನದ ಅಂಗವಾಗಿ ಪತಂಗ ಮತ್ತು ಜೀರುಂಡೆ ಕೀಟಗಳ ಸಮೀಕ್ಷೆ ನಡೆಸಲಾಯಿತು. ಇಲಾಖೆಯ ಕೀಟಶಾಸ್ತ್ರಜ್ಞೆ ಡಾ. ಅಪರ್ಣಾ ಕಲಾವಾಟೆ ನೇತೃತ್ವದ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡಿತು. ತಂಡದಲ್ಲಿ ಕಿರಿಯ ಸಹಾಯಕ ಕೀಟಶಾಸ್ತ್ರಜ್ಞ ಗಜಾನನ್ ಇದ್ದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಕೇದಾರನಾಥ್, ಸಂಜೀವಿನಿ NRLMನ TPM ಶ್ವೇತಾ,

ಪಶ್ಚಿಮ ಘಟ್ಟದಲ್ಲಿ ಪತಂಗ ಮತ್ತು ಜೀರುಂಡೆಗಳ ಸಮೀಕ್ಷೆ: ಸುಳ್ಯ, ಬೆಳ್ತಂಗಡಿ ರೈತರ ತೋಟಗಳಿಗೆ ಭೇಟಿ ನೀಡಿದ ZSI ವಿಜ್ಞಾನಿಗಳ ತಂಡ Read More »

error: Content is protected !!
Scroll to Top