September 2026

ಮಾರ್ಚ್ ಒಳಗೆ 110 ಕೆ.ವಿ. ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಲು ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ

ಸುಳ್ಯ: ಬಹುನಿರೀಕ್ಷಿತ ಸುಳ್ಯ ತಾಲೂಕಿನ 110 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಸೆ.28ರಂದು ತಾಲೂಕು ಪಂಚಾಯತ್‌ನ ಶಾಸಕರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಸಭೆಯಲ್ಲಿ ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ ಕುರಿತು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು. ಯೋಜನೆಯಡಿ ಒಟ್ಟು 89 ಟವರ್‌ಗಳ ಫೌಂಡೇಷನ್ ನಿರ್ಮಾಣವಾಗಬೇಕಿದ್ದು, ಈ ಪೈಕಿ 57 ಟವರ್‌ಗಳ ಫೌಂಡೇಷನ್ ಕಾಮಗಾರಿ ಪೂರ್ಣಗೊಂಡಿದೆ. 6 ಟವರ್‌ಗಳ ನಿರ್ಮಾಣವೂ ಮುಕ್ತಾಯಗೊಂಡಿದ್ದು, ಇನ್ನೂ 32 ಟವರ್‌ಗಳ

ಮಾರ್ಚ್ ಒಳಗೆ 110 ಕೆ.ವಿ. ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಲು ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ Read More »

ಚುನಾವಣಾ ಆಯೋಗದ ವಿರುದ್ದದ ರಾಹುಲ್ ಗಾಂಧಿ ಆರೋಪ ಪ್ರಜಾಪ್ರಭುತ್ವಕ್ಕೆ ಕಂಟಕ ಸಂಸದ ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿರುವ ಡಾ.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಮೇಲೆ ನಿರಂತರ ದಾಳಿ ಮಾಡುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಚುನಾವಣಾ ಆಯೋಗ ಸೇರಿದಂತೆ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ತೇಜೋವಧೆ ಮಾಡುವುದನ್ನೇ ತನ್ನ ಮುಖ್ಯ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಖೇದಕರ ಎಂದು  ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ ನೀಡಿರುವ ಇತ್ತೀಚಿನ ಸ್ಪಷ್ಟನೆಯು ರಾಹುಲ್ ಗಾಂಧಿಯವರ ಈ ಬೇಜವಾಬ್ದಾರಿ ಧೋರಣೆಯನ್ನು

ಚುನಾವಣಾ ಆಯೋಗದ ವಿರುದ್ದದ ರಾಹುಲ್ ಗಾಂಧಿ ಆರೋಪ ಪ್ರಜಾಪ್ರಭುತ್ವಕ್ಕೆ ಕಂಟಕ ಸಂಸದ ಕ್ಯಾ. ಬ್ರಿಜೇಶ್ ಚೌಟ Read More »

ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಸ್ಥೆಯ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಕಾಳುಮೆಣಸು ಹಾಗೂ ಕಾಫಿಗಿಡ ವಿತರಣೆ  

ಮಂಡೆಕೋಲು: ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಕಾಳುಮೆಣಸು ಹಾಗೂ ಕಾಫಿಗಿಡಗಳನ್ನು ಸಬ್ಸಿಡಿ ದರದಲ್ಲಿ ವಿತರಿಸುವ ಕಾರ್ಯಕ್ರಮವು ಸಂಘದ ಕೇಂದ್ರ ಕಛೇರಿಯ ಆವರಣದಲ್ಲಿ ನಡೆಯಿತು.  ಈಗಾಗಲೇ  ಗಿಡಗಳ ವಿತರಣೆಯ ಯೋಜನೆ ಘೋಷಿಸಿದ ಒಂದೇ ವಾರದಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕಿಂತಲೂ ಮಿಕ್ಕಿದ ಗಿಡಗಳಿಗೆ ಬೇಡಿಕೆ ಬಂದಿದ್ದು ಈಗಾಗಲೇ ಹದಿಮೂರು ಸಾವಿರ ಗಿಡಗಳ ವಿತರಣೆ ಮಾಡಲಾಗಿದೆ.    ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಮಾಜಿ ಅಧ್ಯಕ್ಷರುಗಳಾದ ರಾಮಕೃಷ್ಣ ರೈ ಪೇರಾಲುಗುತ್ತು, ಶಿವಪ್ರಸಾದ್ ಉಗ್ರಾಣಿಮನೆ, ಉಪಾಧ್ಯಕ್ಷರಾದ ಪುರುಷೋತ್ತಮ ಕೆ,

ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಸ್ಥೆಯ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಕಾಳುಮೆಣಸು ಹಾಗೂ ಕಾಫಿಗಿಡ ವಿತರಣೆ   Read More »

ಡಾ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದ ಜನಜಾಗೃತಿ ವೇದಿಕೆ: ಸೆ.5ರಂದು ಸುಳ್ಯದಲ್ಲಿ ಗಾಂಧಿ ಸ್ಮೃತಿ–ಬೃಹತ್ ಜನಜಾಗೃತಿ ಜಾಥಾ

ಸುಳ್ಯ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ–2ರ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸೆ.5ರಂದು ಸುಳ್ಯದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮದ ಪ್ರಥಮ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಸಮರ್ಪಿಸಿ ಆಶೀರ್ವಾದ ಪಡೆಯಲಾಯಿತು.ಜಿಲ್ಲಾಧ್ಯಕ್ಷ ವಿಶ್ವನಾಥ ರೈ ಕಳಂಜಾ ಅವರ ನೇತೃತ್ವದಲ್ಲಿ ಜಿಲ್ಲಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಆಮಂತ್ರಣ ಪತ್ರಿಕೆಯನ್ನು ನೀಡಿ, ಪೂಜ್ಯರ

ಡಾ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದ ಜನಜಾಗೃತಿ ವೇದಿಕೆ: ಸೆ.5ರಂದು ಸುಳ್ಯದಲ್ಲಿ ಗಾಂಧಿ ಸ್ಮೃತಿ–ಬೃಹತ್ ಜನಜಾಗೃತಿ ಜಾಥಾ Read More »

ಕೊನೇ ಕ್ಷಣದಲ್ಲಿ ಬ್ಯಾಂಕ್ ಮುಷ್ಕರ ಮುಂದೂಡಿಕೆ

ಸೆ.28: ದೇಶದಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರ ಕೊನೇ ಕ್ಷಣದಲ್ಲಿ ಮುಂದೂಡಿಕೆಯಾಗಿದೆ. ಸೆ.28ರಿಂದ 30ರವರೆಗೆ ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿದ್ದವು.ಸೆ.27ರ ರಾತ್ರಿ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್‌ (IBA) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್‌ (UFBU) ನಡುವೆ ನಡೆದ ಮಾತುಕತೆಯ ಬಳಿಕ ಮುಷ್ಕರವನ್ನು ಮುಂದೂಡಲು ನಿರ್ಧರಿಸಲಾಗಿದೆ.ಬ್ಯಾಂಕ್‌ಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ, ಉಳಿದ ಶನಿವಾರಗಳನ್ನು ರಜೆಯನ್ನಾಗಿ ಘೋಷಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘಟನೆಗಳು

ಕೊನೇ ಕ್ಷಣದಲ್ಲಿ ಬ್ಯಾಂಕ್ ಮುಷ್ಕರ ಮುಂದೂಡಿಕೆ Read More »

ಮರ್ಕಂಜ : ಕುಣಿತ ಭಜನೆ ಸಂಸ್ಕಾರ ಶಿಬಿರ ಉದ್ಘಾಟನೆ

ಮರ್ಕಂಜ, ಸೆ. 28: ಯುವಶಕ್ತಿ ಮಿತ್ರ ಬಳಗ (ರಿ.) ದಾಸರಬೈಲು, ಮರ್ಕಂಜ ಇದರ ವತಿಯಿಂದ ಸಂಸ್ಕಾರ ಶಿಬಿರ ಹಾಗೂ ಕುಣಿತ ಭಜನಾ ತರಬೇತಿ ಉದ್ಘಾಟನಾ ಕಾರ್ಯಕ್ರಮವು ಸೆ. 27ರಂದು ಬೆಳಿಗ್ಗೆ 9 ಗಂಟೆಗೆ ಮರ್ಕಂಜದ ಅಂಬೇಡ್ಕರ್ ಭವನದ ಹೊರಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಮಂಜುನಾಥೇಶ್ವರ ಭಜನಾ ಪರಿಷತ್‌ನ ಸುಳ್ಯ ತಾಲೂಕು ಅಧ್ಯಕ್ಷ ಸೋಮಶೇಖರ್ ಪೈಕ ಉದ್ಘಾಟಿಸಿ, ಶುಭ ಹಾರೈಸಿದರು.ಕುಣಿತ ಭಜನಾ ತರಬೇತಿಯನ್ನು ಆನಂದ ಬಳ್ಪ ಅವರು ನೀಡಿದರು. ಪ್ರತಿ ಆದಿತ್ಯವಾರ ಸಂಜೆ ತರಬೇತಿ ನಡೆಯಲಿದ್ದು, ಯುವಜನರಲ್ಲಿ

ಮರ್ಕಂಜ : ಕುಣಿತ ಭಜನೆ ಸಂಸ್ಕಾರ ಶಿಬಿರ ಉದ್ಘಾಟನೆ Read More »

ಕೂಲಿ ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ವ್ಯಕ್ತಿ ನಾಪತ್ತೆ

ಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕಲ್ಲಪಣೆ ನಿವಾಸಿ ರಾಮು (35) ಎಂಬವರು ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಸೆ.26ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ರಾಮು ಅವರು ಗುರುವಾರ ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದರು. ಆದರೆ ಬಳಿಕ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರಾಮು ಅವರಿಗೆ ಪಿಟ್ಸ್ ಕಾಯಿಲೆ ಹಾಗೂ ಮದ್ಯಪಾನ ಸೇವಿಸುವ ಅಭ್ಯಾಸವಿದ್ದು, ಅವರಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.ನಾಪತ್ತೆಯಾಗಿರುವ ರಾಮು ಅವರು

ಕೂಲಿ ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ವ್ಯಕ್ತಿ ನಾಪತ್ತೆ Read More »

ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡುವ ಕಾಂಗ್ರೆಸ್‌ ಸರ್ಕಾರದ ದ್ವೇಷ ರಾಜಕಾರಣ ಖಂಡನೀಯ: ಚೌಟ

ಮಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು ಹಿಂದೂ ಪರ ಹೋರಾಟ ಸಂಘಟನೆಗಳ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕುವುದಕ್ಕೆ ಹೊರಟಿರುವುದನ್ನು ಖಂಡಿಸಿ ನಾಳೆ(ಸೋಮವಾರ) ನಡೆಯಲಿರುವ ಬಿ.ಸಿ. ರೋಡ್‌ ಚಲೋ ಪ್ರತಿಭಟನಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್‌ ಚೌಟ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ಸರ್ಕಾರವು ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಪರ ಸಂಘಟನೆಗಳನ್ನು ದಮನಿಸುವ ಪ್ರಯತ್ನ

ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡುವ ಕಾಂಗ್ರೆಸ್‌ ಸರ್ಕಾರದ ದ್ವೇಷ ರಾಜಕಾರಣ ಖಂಡನೀಯ: ಚೌಟ Read More »

ಜೇಸಿಐ ಸುಳ್ಯ ಪಯಸ್ವಿಗೆ ಅರೋಹಣ -2026 ತರಬೇತಿ ಸಮ್ಮೇಳನದಲ್ಲಿ ಟಾಪ್ 4ನೇ ಘಟಕದೊಂದಿಗೆ ಹಲವು ಪ್ರಶಸ್ತಿಗಳ ಮನ್ನಣೆ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಘಟಕವು 2026ರಲ್ಲಿ ವಿವಿಧ ತರಬೇತಿ ಕಾರ‍್ಯಕ್ರಮಗಳ ಆಯೋಜನೆಯಲ್ಲಿ ಸಾಧನೆ ಮೆರೆದಿದ್ದು, ಸಪ್ಟಂಬರ್ 27ರಂದು ಮಂಗಳೂರಿನ ಪಾಲೇಮಾರ್ ಕನ್ವರ್ಸನ್ ಹಾಲ್ ನಲ್ಲಿ ನಡೆದ ಜೇಸಿಐ ಭಾರತ ವಲಯ-15ರ ಅರೋಹಣ ತರಬೇತಿ ಸಮ್ಮೇಳನ – 2026”ರಲ್ಲಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದೆ. ವಲಯ ಮಟ್ಟದಲ್ಲಿ ತರಬೇತಿ ವಿಭಾಗದಲ್ಲಿ ಘಟಕದಿಂದ ಆಯೋಜಿಸಿದ ತರಬೇತಿ ಕಾರ್ಯಕ್ರಮಗಳಲ್ಲಿ 4ನೇ ಸ್ಥಾನವಾಗಿ ಹೊರಹೊಮ್ಮಿದ್ದಲ್ಲದೇ ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಜಾಗೃತಿ ಅಭಿಯಾನ ತರಬೇತಿ ಕಾರ್ಯಾಗಾರ,ಘಟಕ ಮಟ್ಟದ ಇ. ಪಿ.

ಜೇಸಿಐ ಸುಳ್ಯ ಪಯಸ್ವಿಗೆ ಅರೋಹಣ -2026 ತರಬೇತಿ ಸಮ್ಮೇಳನದಲ್ಲಿ ಟಾಪ್ 4ನೇ ಘಟಕದೊಂದಿಗೆ ಹಲವು ಪ್ರಶಸ್ತಿಗಳ ಮನ್ನಣೆ Read More »

ಜೇಸಿಐ ಸುಳ್ಯ ಪಯಸ್ವಿನಿಯ ಅಶೋಕ್ ಚೂಂತಾರುರವರಿಗೆ ಪ್ರೇರಣಾ ಪ್ರಶಸ್ತಿ

ಜೇಸಿಐ ಭಾರತ ವಲಯ 15ರ ಪ್ರತಿಷ್ಠಿತ ತರಬೇತಿ ಸಮ್ಮೇಳನದಲ್ಲಿ ಕೊಡಮಾಡುವ ಪ್ರೇರಣಾ -2026 ಪ್ರಶಸ್ತಿಯು ತರಬೇತಿ ಹಾಗೂ ಸದಸ್ಯರ ಅಭಿವೃದ್ಧಿಯಲ್ಲಿ ತಮ್ಮ ಸಂಸ್ಥೆಗೆ ಮಹತ್ವದ ಕೊಡುಗೆ ನೀಡಿದ ತರಬೇತುದಾರರನ್ನು ಗುರುತಿಸಿ ಗೌರವಿಸಲಾಗಿದ್ದು, ಜೇಸಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಘಟಕದ ಬಹುಮುಖ ಪ್ರತಿಭೆಯ ವ್ಯಕ್ತಿತ್ವದಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರು, ಜೇಸಿಐ ಭಾರತ ವಲಯ 15ರ ಪೂರ್ವ ವಲಯಾದ್ಯಕ್ಷರೂ ಆದ ಜೇಸಿಐ ಪಿಪಿಪಿ ಅಶೋಕ್ ಚೂಂತಾರುರವರು ಇಂದುಮಂಗಳೂರಿನ ಪಾಲೇಮಾರ್ ಕನ್ವರ್ಸನ್ ಸಭಾಂಗಣದಲ್ಲಿ ನಡೆದ ವಲಯ 15ರ ತರಬೇತಿ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಜೇಸಿಐ ಸುಳ್ಯ ಪಯಸ್ವಿನಿಯ ಅಶೋಕ್ ಚೂಂತಾರುರವರಿಗೆ ಪ್ರೇರಣಾ ಪ್ರಶಸ್ತಿ Read More »

error: Content is protected !!
Scroll to Top