October 6, 2026

ಅ. 8 ; ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ : ಅಶೋಕ ಪೀಚೆ ಹೇಳಿಕೆ

ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಜನರ ಬದುಕಿಗೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರದಿಯ ವ್ಯಾಪ್ತಿಗೆ ಸುಳ್ಯ ತಾಲೂಕಿನ 15ರಿಂದ 16 ಗ್ರಾಮಗಳು ಒಳಪಡುತ್ತಿದ್ದು, ಇದರಿಂದ ಬಡವರು ಹಾಗೂ ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಮುಖಂಡ ಅಶೋಕ್ ಪೀಚೆಮನೆ ಹೇಳಿದರು. ಸುಳ್ಯದ ಪತ್ರಿಕಾಭವನದಲ್ಲಿ ಅ. 6ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 8ರಂದು ಬೆಳಗ್ಗೆ 10.30ಕ್ಕೆ ಸುಳ್ಯದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ

ಅ. 8 ; ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ : ಅಶೋಕ ಪೀಚೆ ಹೇಳಿಕೆ Read More »

ತೊಡಿಕಾನದಲ್ಲಿ ಆನೆ ಹಾವಳಿ

ತೊಡಿಕಾನ : ಕಾಡಾನೆಗಳ ಹಾವಳಿ ಮುಂದುವರಿದಿದ್ದು, ತೊಡಿಕಾನ ಗ್ರಾಮದ ಮರ್ಪಂಗಲ್ಲಿನ ಅಮೆಮನೆ ಪ್ರದೇಶದಲ್ಲಿ ಆನೆ ದಾಳಿ ನಡೆಸಿ ಕೃಷಿ ಬೆಳೆಗಳಿಗೆ ವ್ಯಾಪಕ ಹಾನಿ ಉಂಟುಮಾಡಿರುವ ಘಟನೆ ಅ.5ರಂದು ಬೆಳಕಿಗೆ ಬಂದಿದೆ.ಶ್ರೀಮತಿ ಸೋಜಾವತಿ ವೆಂಕಟರಮಣ ಗೌಡ ಅವರ ತೋಟಕ್ಕೆ ನುಗ್ಗಿದ ಆನೆಗಳು ಹಲವು ತೆಂಗಿನ ಮರಗಳು ಹಾಗೂ ಅಡಿಕೆ ಮರಗಳನ್ನು ಹಾನಿಗೊಳಿಸಿದ್ದು, ಬಾಳೆ ಗಿಡಗಳನ್ನೂ ತುಳಿದು ನಾಶಪಡಿಸಿವೆ. ಇದರಿಂದ ಕೃಷಿಕರಿಗೆ ಗಣನೀಯ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.ಆನೆಗಳ ಹಾವಳಿಯಿಂದ ಕೃಷಿಕರಲ್ಲಿ ಆತಂಕ ಹೆಚ್ಚಿದ್ದು, ಕಾಡಾನೆಗಳ ಸಂಚಾರದ ಬಗ್ಗೆ ಮುನ್ನೆಚ್ಚರಿಕೆ

ತೊಡಿಕಾನದಲ್ಲಿ ಆನೆ ಹಾವಳಿ Read More »

ರಸ್ತೆ ಅಪಘಾತದಲ್ಲಿ ನಾವೆಲ್ಲರು ಸುರಕ್ಷಿತ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿಕೆ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಇಂದು ರಸ್ತೆ ಅಪಘಾತಕ್ಕೀಡಾಗಿದ್ದು, ಶಾಸಕಿ ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ.ಅಪಘಾತದ ಕುರಿತು ಪ್ರತಿಕ್ರಿಯಿಸಿರುವ ಶಾಸಕಿ ಭಾಗೀರಥಿ ಮುರುಳ್ಯ, ಕಾರಿಗೆ ಸಣ್ಣ ಪ್ರಮಾಣದ ರಸ್ತೆ ಅಪಘಾತ ಸಂಭವಿಸಿದೆ. ದೇವರ ಕೃಪೆಯಿಂದ ಕಾರಿನಲ್ಲಿದ್ದ ಯಾರಿಗೂ ಯಾವುದೇ ರೀತಿಯ ತೊಂದರೆ ಅಥವಾ ಗಾಯವಾಗಿಲ್ಲ. ನಾವೆಲ್ಲರೂ ಸಂಪೂರ್ಣ ಸುರಕ್ಷಿತವಾಗಿದ್ದು, ಕ್ಷೇಮವಾಗಿದ್ದೇವೆ ಎಂದು ತಿಳಿಸಿದ್ದಾರೆ.ಅಪಘಾತದ ಸುದ್ದಿ ತಿಳಿದು ಕಾರ್ಯಕರ್ತರು, ಅಭಿಮಾನಿಗಳು, ಬಂಧು-ಬಳಗ ಹಾಗೂ ಹಿತೈಷಿಗಳು ಆತಂಕಪಡುವ ಅಗತ್ಯವಿಲ್ಲ. ಯಾರೂ ಗಾಬರಿಯಾಗಬೇಡಿ.

ರಸ್ತೆ ಅಪಘಾತದಲ್ಲಿ ನಾವೆಲ್ಲರು ಸುರಕ್ಷಿತ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿಕೆ Read More »

ಮುಚ್ಚಿಲದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತ: ಗಾಯಗಳಿಲ್ಲದೆ ಪಾರು

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾದ ಘಟನೆ ಕರಿಕ್ಕಳ–ನಿಂತಿಕಲ್ ಮಧ್ಯೆ ಮುಚ್ಚಿಲ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.ಕರಿಕ್ಕಳ ಕಡೆಯಿಂದ ನಿಂತಿಕಲ್‌ ಕಡೆಗೆ ಶಾಸಕರು ಪ್ರಯಾಣಿಸುತ್ತಿದ್ದ ವೇಳೆ ಮುಚ್ಚಿಲ ಸಮೀಪ ಎದುರಿನಿಂದ ಸಾಗುತ್ತಿದ್ದ ಕಾರೊಂದು ಏಕಾಏಕಿ ಸಡನ್ ಬ್ರೇಕ್ ಹಾಕಿದೆ ಎನ್ನಲಾಗಿದೆ. ಇದರಿಂದ ಹಿಂಬದಿಯಿಂದ ಬರುತ್ತಿದ್ದ ಶಾಸಕರ ಇನ್ನೋವಾ ಕಾರನ್ನು ನಿಯಂತ್ರಿಸಲು ಸಾಧ್ಯವಾಗದೆ ಎದುರಿನ ಕಾರಿಗೆ ಢಿಕ್ಕಿ ಹೊಡೆದಿದೆ.ಢಿಕ್ಕಿಯ

ಮುಚ್ಚಿಲದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತ: ಗಾಯಗಳಿಲ್ಲದೆ ಪಾರು Read More »

ಅಣಬೆ ಬೇಸಾಯದಿಂದ ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ತರಬೇತಿ

ಮಂಗಳೂರು: ಕಡಿಮೆ ಬಂಡವಾಳದಲ್ಲಿ ಅಣಬೆ ಬೇಸಾಯ ಆರಂಭಿಸಿ, ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಕುರಿತು ರೈತರಿಗೆ ತರಬೇತಿ ನೀಡಲಾಯಿತು.ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ಕೃಷಿ ವಿಜ್ಞಾನ ಕೇಂದ್ರ (ದ.ಕ.), ಮಂಗಳೂರು, ಬ್ಯಾಂಕ್ ಆಫ್ ಬರೋಡಾ ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.), ಮಂಗಳೂರು ಇವರ ಸಹಯೋಗದಲ್ಲಿ ‘ಅಣಬೆ ಬೇಸಾಯ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮ’ ಅ.6ರಂದು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.ತರಬೇತಿಯಲ್ಲಿ ಅಣಬೆ ಬೇಸಾಯದ ವೈಜ್ಞಾನಿಕ ವಿಧಾನಗಳು, ಉತ್ಪಾದನಾ

ಅಣಬೆ ಬೇಸಾಯದಿಂದ ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ತರಬೇತಿ Read More »

ಅಪರಂಜಿ ಚಿನ್ನ ಅಂದುಕೊಂಡದ್ದು ,ಕಾಗೆ ಬಂಗಾರವೇ…?

ಸರಿಯಾದ ಬುದ್ಧಿ, ವಿವೇಕ ಮತ್ತು ತನ್ನತನವನ್ನು ಅರಿತಿರುವ ಒಬ್ಬ ಮನುಷ್ಯನನ್ನು ಯಾರಿಂದಲೂ ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ. ಅಪರಂಜಿ ಚಿನ್ನವನ್ನು ಎಲ್ಲೇ ಇಟ್ಟರೂ, ಯಾವುದೇ ಪರಿಸ್ಥಿತಿಯಲ್ಲಿಟ್ಟರೂ ಅದು ತನ್ನ ಮೂಲ ಗುಣವನ್ನು ಕಳೆದುಕೊಳ್ಳುವುದಿಲ್ಲ. ಅದಕ್ಕಾಗಿಯೇ ಅದು ಅಪರಂಜಿ.ಇದೇ ಮಾತು ಮನುಷ್ಯನ ಗುಣಕ್ಕೂ ಅನ್ವಯಿಸುತ್ತದೆ.ನಿಜವಾದ ಒಳ್ಳೆಯತನ ಹೊಂದಿರುವವರು ಯಾವುದೇ ಪರಿಸ್ಥಿತಿ ಎದುರಾದರೂ ತಮ್ಮ ಮೂಲ ಗುಣವನ್ನು ಸುಲಭವಾಗಿ ಕಳೆದುಕೊಳ್ಳುವುದಿಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವ ಜಾಣ್ಮೆ ಅವರಲ್ಲಿರುತ್ತದೆ. ಬದಲಾವಣೆ ಕಾಣಿಸಿಕೊಂಡರೂ ಅದು ಅವರ ಮೂಲ ಸ್ವಭಾವವನ್ನು ಸಂಪೂರ್ಣವಾಗಿ

ಅಪರಂಜಿ ಚಿನ್ನ ಅಂದುಕೊಂಡದ್ದು ,ಕಾಗೆ ಬಂಗಾರವೇ…? Read More »

ಜೀವನಶೈಲಿ ಸಮಸ್ಯೆಗಳಿಗೆ ಸಮಗ್ರ ಪರಿಹಾರ: ಮಂಗಳೂರಿನಲ್ಲಿ ‘ಡಾ. ಪಿಆರ್‌’ಸ್ ಲೈಫ್‌ಸ್ಟೈಲ್ ಕ್ಲಿನಿಕ್ ಆರಂಭ

ಮಂಗಳೂರು: ಆಧುನಿಕ ಜೀವನಶೈಲಿಯಿಂದ ಎದುರಾಗುವ ವಿವಿಧ ಸಮಸ್ಯೆಗಳಿಗೆ ವೈಜ್ಞಾನಿಕ ಮಾರ್ಗದರ್ಶನ ಹಾಗೂ ಸಮಗ್ರ ಆರೈಕೆಯನ್ನು ಒದಗಿಸುವ ಉದ್ದೇಶದಿಂದ ‘Dr. PR’s Lifestyle Clinic – Where Lifestyle Meets Healing’ ಮಂಗಳೂರಿನಲ್ಲಿ ಕಾರ್ಯಾರಂಭಿಸಿದೆ.ಪಂಪ್‌ವೆಲ್ ವೃತ್ತದ ಸಮೀಪದ ವಿಶ್ವಾಸ್ ಹೈಟ್ಸ್ ಬಿಲ್ಡಿಂಗ್‌ನಲ್ಲಿ ಸ್ಥಾಪಿಸಲಾಗಿರುವ ಕ್ಲಿನಿಕ್‌ನ್ನು ಯೆನೆಪೋಯ ಮೆಡಿಕಲ್ ಕಾಲೇಜಿನ ವಯೋಸಹಜ ಸಮಸ್ಯೆಗಳ ವಿಭಾಗದ ಪ್ರೊಫೆಸರ್ ಹಾಗೂ ಹಿರಿಯ ವೈದ್ಯೆ ಡಾ. ಪ್ರಭಾ ಅಧಿಕಾರಿ ಅವರು ಅ.4ರಂದು ಉದ್ಘಾಟಿಸಿದರು.ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು ಮತ್ತು ಆಸ್ಪತ್ರೆಯ

ಜೀವನಶೈಲಿ ಸಮಸ್ಯೆಗಳಿಗೆ ಸಮಗ್ರ ಪರಿಹಾರ: ಮಂಗಳೂರಿನಲ್ಲಿ ‘ಡಾ. ಪಿಆರ್‌’ಸ್ ಲೈಫ್‌ಸ್ಟೈಲ್ ಕ್ಲಿನಿಕ್ ಆರಂಭ Read More »

error: Content is protected !!
Scroll to Top