ಮಂಗಳೂರು: ಆಧುನಿಕ ಜೀವನಶೈಲಿಯಿಂದ ಎದುರಾಗುವ ವಿವಿಧ ಸಮಸ್ಯೆಗಳಿಗೆ ವೈಜ್ಞಾನಿಕ ಮಾರ್ಗದರ್ಶನ ಹಾಗೂ ಸಮಗ್ರ ಆರೈಕೆಯನ್ನು ಒದಗಿಸುವ ಉದ್ದೇಶದಿಂದ ‘Dr. PR’s Lifestyle Clinic – Where Lifestyle Meets Healing’ ಮಂಗಳೂರಿನಲ್ಲಿ ಕಾರ್ಯಾರಂಭಿಸಿದೆ.
ಪಂಪ್ವೆಲ್ ವೃತ್ತದ ಸಮೀಪದ ವಿಶ್ವಾಸ್ ಹೈಟ್ಸ್ ಬಿಲ್ಡಿಂಗ್ನಲ್ಲಿ ಸ್ಥಾಪಿಸಲಾಗಿರುವ ಕ್ಲಿನಿಕ್ನ್ನು ಯೆನೆಪೋಯ ಮೆಡಿಕಲ್ ಕಾಲೇಜಿನ ವಯೋಸಹಜ ಸಮಸ್ಯೆಗಳ ವಿಭಾಗದ ಪ್ರೊಫೆಸರ್ ಹಾಗೂ ಹಿರಿಯ ವೈದ್ಯೆ ಡಾ. ಪ್ರಭಾ ಅಧಿಕಾರಿ ಅವರು ಅ.4ರಂದು ಉದ್ಘಾಟಿಸಿದರು.
ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಹಾಗೂ ಯೋಗ–ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯ ಡಾ. ಪುನೀತ್ ರಾಘವೇಂದ್ರ ಕುಂಟುಕಾಡು ಅವರ ನೇತೃತ್ವದಲ್ಲಿ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ.
ವ್ಯಕ್ತಿಯ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈನಂದಿನ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡುವುದು ಕ್ಲಿನಿಕ್ನ ಪ್ರಮುಖ ಉದ್ದೇಶವಾಗಿದೆ. ಯೋಗ ಚಿಕಿತ್ಸೆ, ವೈಯಕ್ತಿಕ ಆಹಾರ ಕ್ರಮ ರೂಪಿಸುವುದು, ಆಕ್ಯುಪಂಕ್ಚರ್, ಆಕ್ಯುಪ್ರೆಶರ್ ಸೇರಿದಂತೆ ವಿವಿಧ ಚಿಕಿತ್ಸಾ ಹಾಗೂ ಜೀವನಶೈಲಿ ನಿರ್ವಹಣಾ ಸೇವೆಗಳು ಇಲ್ಲಿ ಲಭ್ಯವಿರಲಿವೆ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಅರೋಮಾ ಥೆರಪಿಯನ್ನೂ ಪರಿಚಯಿಸಲಾಗಿದೆ.
ಡಾ. ಪುನೀತ್ ರಾಘವೇಂದ್ರ ಕುಂಟುಕಾಡು, ಡಾ. ಅಜಿತ್ ಹಾಗೂ ಆಹಾರ ತಜ್ಞರು ಕ್ಲಿನಿಕ್ನಲ್ಲಿ ಸಲಹೆ ನೀಡಲಿದ್ದು, ಪ್ರತಿಯೊಬ್ಬರ ಅಗತ್ಯಕ್ಕೆ ಅನುಗುಣವಾಗಿ ಜೀವನಶೈಲಿ ಬದಲಾವಣೆಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಲಕ್ಷ್ಮೀ ಟೀಚರ್ ಕುಂಟುಕಾಡು, ಪುಷ್ಪಿತಾ ಬಿ.ಕೆ., ಡಾ. ಸೌಮ್ಯ ಮಹೇಶ್, ಡಾ. ಶಿಲ್ಪಿ, ಡಾ. ವಿಜಯೇಂದ್ರ ಇಟಗಿ, ಡಾ. ಅಜಿತ್ ಕೆ., ಡಾ. ಅರ್ಪಿತ್ ಕುಮಾರ್, ದರ್ಶನ್ ಪಳಂಗಾಯ ಸೇರಿದಂತೆ ಬಂಧು-ಮಿತ್ರರು ಉಪಸ್ಥಿತರಿದ್ದರು.
ಕ್ಲಿನಿಕ್ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 5ರಿಂದ ರಾತ್ರಿ 8ರವರೆಗೆ ಸೇವೆ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ 8951061986 ಸಂಪರ್ಕಿಸಬಹುದು.
ಜೀವನಶೈಲಿ ಸಮಸ್ಯೆಗಳಿಗೆ ಸಮಗ್ರ ಪರಿಹಾರ: ಮಂಗಳೂರಿನಲ್ಲಿ ‘ಡಾ. ಪಿಆರ್’ಸ್ ಲೈಫ್ಸ್ಟೈಲ್ ಕ್ಲಿನಿಕ್ ಆರಂಭ











