ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಗೌಡ ಸಮುದಾಯದ ಪ್ರತಿಭೆl ಸುಶ್ಮಿತಾ ಬೆದ್ರುಪಣೆಯವರನ್ನು ಅರಂತೋಡು ಗೌಡ ಗ್ರಾಮ ಸಮಿತಿ, ಮಹಿಳಾ ಸಮಿತಿ ಮತ್ತು ತರುಣ ಸಮಿತಿ ವತಿಯಿಂದ. ಆರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮ ದಲ್ಲಿ ಸೆ.16ರಂದು ಅಭಿನಂದಿಸಲಾಯಿತು.ಗೌಡ ಗ್ರಾಮ ಸಮಿತಿಯ ಅಧ್ಯಕ್ಷರು ಮತ್ತು ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಗಳಾದ ತೀರ್ಥರಾಮ ಆಡ್ಕಬಳೆ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕಾ ವಾಗಿ ಮಾತಾಡಿ ಎಲ್ಲರನ್ನು ಸ್ವಾಗತಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ವಿಶ್ರಾಂತ ಪ್ರಾಂಶುಪಾಲರಾದ ಕೆ. ಆರ್. ಗಂಗಾಧರ್ ರವರು ಸುಸ್ಮಿತಾ ಳನ್ನು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿ ದರು. ಗೌಡ ಗ್ರಾಮ ಸಮಿತಿ ಯ ಕಾರ್ಯದರ್ಶಿ ಭವಾನಿ ಶಂಕರ ಅಡ್ತಲೆ ಯವರು ಮುಂಬರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಸಮುದಾಯದರು ಅನುಸರಿಸಬೇಕಾದ ವಿಧಾನ ಬಗ್ಗೆ ಮಾಹಿತಿ ನೀಡಿದರು. ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಕೇಶವ ಅಡ್ತಲೆ ಮತ್ತು ಮಹಿಳಾ ಸಮಿತಿಯ ಅಧ್ಯಕ್ಷ ರಾದ ವಾರಿಜ ಕುರುಂಜಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿಯಾದ ದಮಯಂತಿ ಆಡ್ಕ ಬಳೆ ಯವರು ಪ್ರಾರ್ಥನೆಗೈದರು. ಗೌಡ ಗ್ರಾಮ ಸಮಿತಿ ಸದಸ್ಯೆ ಭಾರತಿ ಪುರುಷೋತ್ತಮ ಉಳುವಾರುರವರು ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮವನ್ನು ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪಾ ಮೇದಪ್ಪ ರವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಮಿತಿ ಸದಸ್ಯರು, ಪ್ರಮುಖರು ಭಾಗವಹಿಸಿದ್ದರು.
ಅರಂತೋಡು ಗೌಡ ಗ್ರಾಮ ಸಮಿತಿಯ ವತಿಯಿಂದ ಭಾರತೀಯ ಸೈನ್ಯದ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಗೌಡ ಸಮುದಾಯ ಪ್ರತಿಭೆ ಸುಶ್ಮಿತಾರಿಗೆ ಅಭಿನಂದನಾ ಕಾರ್ಯಕ್ರಮ

















