ಆರಂತೋಡು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಚತೆಯಲ್ಲಿ ಪಂಚಾಯತ್ “ಗ್ರಾಮ ಸ್ವರಾಜ್” ಸಭಾಂಗಣದಲ್ಲಿ ಸೆ.18ರಂದು ನಡೆಯಿತು.
ಸಭೆಯಲ್ಲಿ ಪಂಚಾಯತ್ ಆಡಳಿತದ ಆಡಳಿತಾವಧಿ 3,4ತಿಂಗಳಲ್ಲಿ ಮುಗಿಯುವುದರಿಂದ ಬೆಂಕಿಗೆ ಆಹುತಿಯಾದ ಘನ ತ್ಯಾಜ್ಯ ಘಟಕ “ಸ್ವಚ್ಛ ಸಂಕೀರ್ಣ”ದ ಕಟ್ಟಡ ರಚನೆಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಕೈಗೊಳ್ಳಳು ಕ್ರಮ ವಹಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮೀಟಿಂಗ್ ಹಾಲ್, ಅಧ್ಯಕ್ಷ ಉಪಾಧ್ಯಕ್ಷರ ಚೇಂಬರ್ ಗಳಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಬದಲಿ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ತೋಡಿಕಾನ ಗ್ರಾಮದಲ್ಲಿ 24/7 ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಶೀಘ್ರದಲ್ಲಿ ನೀರಿನ ಬಳಕೆದಾರರ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ರಸ್ತೆ, ದಾರಿ ದೀಪ ಮುಂತಾದ ಮೂಲಭೂತ ಸೌಕರ್ಯಗಳ ಬಗ್ಗೆ ಎಲ್ಲಾ ವಾರ್ಡಿನ ಪಂಚಾಯತ್ ಸದಸ್ಯಗಳು ಗಮನ ಸೆಳೆದು ಚರ್ಚೆ ನಡೆಸಿದರು.ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ಚಿಟ್ಟನೂರು, ಸದಸ್ಯರುಗಳಾದ. ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ಶಶಿಧರ ದೊಡ್ಡ ಕುಮೆರಿ, ಪುಷ್ಪಾಧರ ಕೊಡಂಕೇರಿ, ಸುಜಯ ಮೇಲೆಅಡ್ತಲೆ, ಶ್ವೇತಾ ಅರಮನೆ ಗಾಯ, ಮಾಲಿನಿ ಉಳುವಾರು, ಹರಿಣಿ ದೇರಾಜೆ, ಉಷಾ ಅಡ್ಯಡ್ಕ, ವಿನೋದ ತೊಡಿಕಾನ, ಸರಸ್ವತಿ ಬಿಳಿ ಯಾರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಂ ಆರ್. ಎಲ್ಲರನ್ನೂ ಸ್ವಾಗತಿಸಿ ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಪಂಚಾಯತ್ ಹಾಗೂ ಸ್ವಚ್ಛತಾ ಘಟಕದ ಸಿಬ್ಬಂದಿಗಳು ಸಹಕರಿಸಿದರು.ಬೆಳ್ಳಾರೆಯ ಡಾl ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಾದ ತನುಷ್, ಮಹಿಮಾ, ಜನನಿ 3 ಜನ ವಿದ್ಯಾರ್ಥಿಗಳು ಅಧ್ಯಕ್ಷರ ಅನುಮತಿಯೊಂದಿಗೆ ವೀಕ್ಷಕರಾಗಿ ಹಾಜರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top