ಹಾಸ್ಯ ನಟ ಚಿಕ್ಕಣ್ಣ ಗುಟ್ಟಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಹುಡುಗಿ ಪಾವನಾರೊಂದಿಗೆ ನಿಶ್ಚಿತಾರ್ಥ ಮಾಡಿಸಿಕೊಂಡಿದ್ದಾರೆ.
ಇದು ಅರೇಂಜ್ ಮ್ಯಾರೇಜ್ ಎಂದು ತಿಳಿಸಿದ್ದಾರೆ. ‘ಜೋಡೆತ್ತು’ ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ತಮ್ಮ ಮದುವೆಯೂ ಆಗಿರುತ್ತದೆ ಎಂದು ಚಿಕ್ಕಣ್ಣ ಹೇಳಿದ್ದಾರೆ. ಭೂಮಿ ಫಲ ಕೊಡಲು ಉಳುಮೆಗೆ ಜೋಡೆತ್ತು ಬೇಕು, ಬದುಕಿನ ಬಂಡಿ ಸಾಗಲೂ ಪತಿ-ಪತ್ನಿ ಜೋಡೆತ್ತಿನಂತೆ ಸಾಗಬೇಕು ಎಂಬ ಮಾತನ್ನು ಉಲ್ಲೇಖಿಸಿ, ವೃತ್ತಿಯಲ್ಲೂ ವೈಯಕ್ತಿಕವಾಗಿಯೂ ಜೋಡೆತ್ತಿನ ಜೊತೆ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಸಿಕೊಂಡ ಹಾಸ್ಯ ನಟ ಚಿಕ್ಕಣ್ಣ

















