ಯುವ ವಕೀಲೆ ಆತ್ಮ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ,ಒರ್ವ ಯುವಕನ ಬಂಧನ

ಕಾಸರಗೋಡಿನ ಡಿವೈಎಫ್‌ಐ ನಾಯಕಿ ಯುವ ವಕೀಲೆ ರಂಜಿತಾ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡಕೊಂಡಿದ್ದು ಓರ್ವನನ್ನು ಪೊಲೀಸರು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.
ರಂಜಿತಾ ಅವರ ಆಪ್ತ ಸ್ನೇಹಿತ ಎನ್ನಲಾದ ತಿರುವಲ್ಲ ಮೂಲದ ಅನಿಲ್ ಕುಮಾ‌ರ್ ಬಂಧಿತ ವ್ಯಕ್ತಿ.ಅ. 6ರಂದು ಬೆಳಿಗ್ಗೆ ತಿರುವನಂತಪುರಂನಲ್ಲಿ ಕುಂಬಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಲಾಗಿದೆ.
ಡಿವೈಎಫ್‌ಐ ಮುಖಂಡೆಯಾಗಿರುವ ವಕೀಲೆ ರಂಜಿತಾ ಸೆಪ್ಟೆಂಬ‌ರ್ 30 ರಂದು ಕುಂಬಳೆಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು, ರಂಜಿತ್ ಸಿಪಿಐ(ಎಂ) ಕುಂಬಳ ಸ್ಥಳೀಯ ಸಮಿತಿಯ ಸದಸ್ಯೆ, ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಗ್ರಾಮ ಕಾರ್ಯದರ್ಶಿ ಮತ್ತು ಡಿವೈಎಫ್‌ಐ ಪ್ರಾದೇಶಿಕ ಅಧ್ಯಕ್ಷೆಯಾಗಿದ್ದರು. ರಂಜಿತಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಪ್ರಕರಣ ತನಿಖೆ ಮುಂದುವರೆಸಿದ ಪೊಲೀಸರು ರಂಜಿತಾ ಬಳಸುತ್ತಿದ್ದ ಮೊಬೈಲ್ ಪೋನ್ ನ್ನು ವಶಕ್ಕೆ ಪಡೆದಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top