ಅಪ್ರಾಪ್ತ ಯುವತಿಯ ಗರ್ಭಿಣಿಯಾಗಿಸಿದ ಆರೋಪಿಯ ಬಂಧನ

ಅಪ್ರಾಪ್ತ ಯುವತಿಯೊಬ್ಬಳನ್ನು ಗರ್ಭಿಣಿಯಾಗಿಸಿದ ಆರೋಪದಲ್ಲಿ ಯುವಕನೋರ್ವನನ್ನು ಸುಳ್ಯ ‌ಬಂಧಿಸಿದ್ದಾರೆ. ಯುವತಿಯ ಮನೆಯವರ ದೂರಿನ ಮೇರೆಗೆ ಬಂಧಿಸಿರುವುದಾಗಿ ತಿಳಿದು ಬಂದಿದೆ.
ಮಂಡೆಕೋಲು ಗ್ರಾಮದ ದಿವಾಕರ ಮತ್ತು ಅದೇ ಗ್ರಾಮದ 14 ವರ್ಷ ಪ್ರಾಯದ ಯುವತಿ ಪ್ರೀತಿಸುತ್ತಿದ್ದರೆನ್ನಲಾಗಿದ್ದು ಯುವಕ ಆಕೆಯನ್ನು ಕೆಲ ತಿಂಗಳ ಹಿಂದೆ ದೈಹಿಕವಾಗಿ ಬಳಸಿಕೊಂಡ ಪರಿಣಾಮ ಆಕೆ ಗರ್ಭಧರಿಸಿದ್ದಾಳೆ. ಕಳೆದ ವಾರ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮನೆಯವರು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಐದು ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಯಿತು. ಬಳಿಕ ಪೋಲೀಸರಿಗೆ ದೂರು ನೀಡಿದರು. ವಿಚಾರಣೆ ನಡೆಸಿದಾಗ ದಿವಾಕರ ಎಂಬುದು ಗೊತ್ತಾಗಿ ಆತನನ್ನು ವಶಕ್ಕೆ ಪಡೆದರೆಂದು ತಿಳಿದುಬಂದಿದೆ. ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top