ಕಲ್ಚೆರ್ಪೆಯಲ್ಲಿ ಗಬ್ಬೆದ್ದು ನಾರುತ್ತಿದೆ ಸುಳ್ಯ ನಗರದ ಕಸದ ರಾಶಿ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ಸುಳ್ಯ ನಗರದ ತ್ಯಾಜ್ಯಗಳನ್ನು  ಬರ್ನಿಂಗ್ ಮಾಡಲಾಗುತ್ತಿದ್ದು ಕಳೆದ ಕೆಲವು ಸಮಯದಿಂದ ತ್ಯಾಜ್ಯಗಳು ಬರ್ನಿಂಗ್ ಆಗದೆ ರಾಶಿ ಬಿದ್ದುಕೊಂಡು ದುರ್ವಾಸನೆ ಬೀರುತ್ತಿದೆ‌.
ಸುಳ್ಯ ನಗರದ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯಗಳನ್ನು
ಇದೀಗ ನೇರವಾಗಿ   ದಿನ ನಿತ್ಯ ತಂದು ರಾಶಿ ಹಾಕಲಾಗುತ್ತದೆ.ಯಂತ್ರ ಕೆಟ್ಟು ಹೋದ ಹಿನ್ನಲೆಯಲ್ಲಿ ಅವೈಜ್ಞಾನಿಕ ವಾಗಿ ಡಿಸೇಲ್ ಪೆಟ್ರೋಲ್ ಸುರಿದು ಸ್ವಲ್ಪ ಪ್ರಮಾಣದ ಕಸವನ್ನು ಸುಡಲಾಗುತ್ತಿದೆ‌.ಇದರಿಂದ ಸುತ್ತಲ ಪರಿಸರದಲ್ಲಿ ವ್ಯಾಪಕವಾಗಿ ಹೊಗೆ ಕಾಣಿಸಿಕೊಂಡು ಸ್ಥಳೀಯರಿಗೆ ಸಮಸ್ಯೆಯಾಗಿದೆ‌ ಎಂದು ಸ್ಥಳೀಯರು ದೂರಿದ್ದಾರೆ.
*ಗಬ್ಬು ವಾಸನೆ*
ಕಲ್ಚೆರ್ಪೆ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯಗಳು ರಾಶಿ ಬಿದ್ದಿರುವ ಹಿನ್ನಲೆಯಲ್ಲಿ ಪರಿಸರ ಗಬ್ಬು ವಾಸನೆ  ಬೀರುತ್ತಿದೆ. ಅಲ್ಲದೆ ಅಲ್ಲಲ್ಲಿ ಕೊಳಚೆ ನೀರು ಶೇಖರಣೆಗೊಂಡು ಸೊಳ್ಳೆಗಳು ಬೆಳೆಯುತ್ತಿದೆ.ಇದರಿಂದ ಸ್ಥಳೀಯರಿಗೆ ಭಯಾನಕ ರೋಗ ಹರಡುವ ಭೀತಿ ಎದುರಾಗಿದೆ.
ತ್ಯಾಜ್ಯ ಬರ್ನಿಂಗ್ ಸ್ಥಳದ  ಮೇಲ್ಚಾವಣಿಯ ಶೀಟ್ ಗಳು ಒಟ್ಟೆಯಾಗಿ ಅಲಲ್ಲಿ ಸೋರುತ್ತಿವೆ.
*ಕೆಲಸದವರಿಗೆ ಸಂಬಳ ನೀಡಿಲ್ಲ*
ತ್ಯಾಜ್ಯ ಬರ್ನಿಂಗ್ ಘಟಕದಲ್ಲಿ ಕೆಲಸ ಮಾಡುವವರಿಗೆ ಸಂಬಳ ನೀಡಿಲ್ಲ ಎಂದು ಅವರು ಮಾದ್ಯಮದವರೊಂದಿಗೆ ದೂರಿಕೊಂಡಿದ್ದು.ನಗರ ಪಂಚಾಯತ್ ಗೆ  ಹೋಗಿ ಕೇಳಿದರೆ ನಿಮ್ಮನ್ನು ನಾವು ನೇಮಕ ಮಾಡಿಲ್ಲ ನಿಮ್ಮನ್ನು ನೇಮಕ ಮಾಡಿದವರ ಬಳಿ ಹೋಗಿ ಕೇಳಿ ಎಂದು ಬೈದು ಕಳುಹಿಸಿದ್ದಾರೆ ಎಂದು ಇಲ್ಲಿಯ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.
*ನಗರ ಪಂಚಾಯತ್ ಗೆ ಮುತ್ತಿಗೆಗೆ ಸಿದ್ದತೆ*
ಇದೀಗ ಕಸ ಬರ್ನಿಂಗ್ ಯಂತ್ರ ಕೆಟ್ಟು ಹೋಗಿದೆ.ಕಳೆದ ಹಲವು ಸಮಯದಿಂದ ಸ್ಥಳೀಯರು ಕಸ ವೈಜ್ಞಾನಿಕವಾಗಿ ವಿಲೇವಾರಿಯಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ತಕ್ಷಣ ರಾಶಿ ಬಿದ್ದ ಕಸವನ್ನು   ವಿಲೇವಾರಿ ಮಾಡದಿದ್ದರೆ ಸುಳ್ಯ ನಗರ ಪಂಚಾಯತಿಗೆ ಮುತ್ತಿಗೆ ಹಾಕಲು ಸಿದ್ದತೆ ನಡೆಸುತ್ತಿದ್ದಾರೆ.
ಕಲ್ಚೆರ್ಪೆಯ ಜನರು ಸುಳ್ಯ ನಗರ ಕಸವನ್ನು ತಂದು ಸಮರ್ಕವಾಗಿ    ವಿಲೇವಾರಿ ಮಾಡದಿರುವ ಹಿನ್ನಲೆಯಲ್ಲಿ ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ‌.ಬರ್ನಿಂಗ್ ಮೆಷಿನ್ ಕೆಟ್ಟು ಹೋದ ಹಿನ್ನಲೆಯಲ್ಲಿ ಕಸ ಇಲ್ಲಿ ರಾಶಿ ಬಿದ್ದು ದುರ್ನಾತ ಬೀರುತ್ತಿದೆ.ಈ ಹಿಂದೆ ನಗರ ಪಂಚಾಯತಿಗೆ ನಾವು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದೇವು.ಸೆ.30ರ ಒಳಗೆ ರಾಶಿ ಬಿದ್ದ ತ್ಯಾಜ್ಯ ವಿಲೇವಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈ ಭರವಸೆ ಇದೀಗ ಹುಸಿಯಾಗಿದ್ದು ತಕ್ಷಣ ತ್ಯಾಜ್ಯ ತೆರವು ಮಾಡದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯ ನಿವಾಸಿ ಅಶೋಕ ಪೀಚೆ ತಿಳಿಸಿದ್ದಾರೆ.
ಕಲ್ಚೆರ್ಪೆಯಲ್ಲಿ ಕಸ ರಾಶಿ ಬಿದ್ದದು ಹೌದು ಯಂತ್ರ ಕೆಟ್ಟು ಹೋಗಿಲ್ಲ ಗ್ಯಾಸ್ ಖಾಲಿಯಾಗಿದೆ‌‌.ಗ್ಯಾಸ್ ತರಿಸಿ ಕಸ ಬರ್ನಿಂಗ್ ಮಾಡುತ್ತೇವೆ ಎಂದು
ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ    ಬಸವರಾಜ್ ತಿಳಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top