ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ದಿ.ಕುರುಂಜಿ ವೆಂಕಟರಮಣ ಗೌಡರ ಸುಪುತ್ರ ಡಾ.ಕೆ.ವಿ.ರೇಣುಕಾಪ್ರಸಾದ್ ಮತ್ತು ಮನೆಯವರು ಸೇವಾ ರೂಪದಲ್ಲಿ ನೀಡುತ್ತಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ ನ.3ರಂದು ಗುತ್ತಿಪೂಜಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಡಾ.ರೇಣುಕಾ ಪ್ರಸಾದ್,ಡಾ.ಜ್ಯೋತಿ ಆರ್ ಪ್ರಸಾದ್ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಮಾಜದ ಪ್ರಮುಖರು, ಕುರುಂಜಿ ಕುಟುಂಬಸ್ಥರು, ಕೆ.ವಿ.ಜಿ ಸಂಸ್ಥೆಗಳ ಸಿಬ್ಬಂದಿಗಳು ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ನಾಳೆ ಬೆಳಗ್ಗೆ ಪೂಜೆ ನಡೆದು ಬೆಳ್ಳಿರಥಯಾತ್ರೆ ಸುಳ್ಯಕ್ಕೆ ಆಗಮಿಸಲಿದೆ.
ಕೋಟೇಶ್ವರದಲ್ಲಿ ಬೆಳ್ಳಿ ರಥಕ್ಕೆ ನಡೆದ ಗುತ್ತಿಪೂಜೆ

















