ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಹಾಗೂ ಮಕ್ಕಳ ತಕ್ಷಣದ ರಕ್ಷಣಾ ಪರಿಹಾರ ನೀಡುವ ಸಲುವಾಗಿ NCC ‘C’ ಪ್ರಮಾಣ ಪತ್ರ ಹೊಂದಿರುವ ‘ಅಕ್ಕ ಪಡೆ’ ತಂಡದ ರಚನೆಗಾಗಿ, ಮಹಿಳಾ ಅಭ್ಯರ್ಥಿಗಳಿಂದ ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅಕ್ಕ ಪಡೆ ರಚನೆಯು ಸಾಮಾನ್ಯವಾಗಿ ಮಹಿಳೆಯರ ಸುರಕ್ಷತೆಗಾಗಿ ಸ್ಥಳೀಯ ಮಟ್ಟದಲ್ಲಿ ರಚಿಸಲಾದ ವಿಶೇಷ ಮಹಿಳಾ ದಳಗಳಿಗೆ ಬಳಸುವ ಪದವಾಗಿದೆ. ಉದಾಹರಣೆಗೆ, ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ, ಮಹಿಳೆಯರ ಮೇಲೆ ನಡೆಯುವ ಹಿಂಸೆ ಮತ್ತು ಕಿರುಕುಳ ನಿವಾರಣೆಗಾಗಿ ‘ಅಕ್ಕ ಪಡೆ’ ಎಂಬ ಸ್ವಯಂಸೇವಿಕಾ ತಂಡಗಳನ್ನು ರಚಿಸಲಾಗುತ್ತಿದೆ. ಈ ತಂಡದ ರಚನೆಗಾಗಿ ಈಗ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ ಹಾಗೂ ಇದರ ಉದ್ದೇಶ ಮಹಿಳೆಯರ ಸುರಕ್ಷತೆಯ ಸಲುವಾಗಿ ನ್ಯಾಯದಿಂದ ಸಹಕರಿಸುವುದು, ಈ ತಂಡದಲ್ಲಿ ಪೊಲೀಸ್, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ಕ್ಷೇತ್ರದವರು ಮೊದಲಾದವರನ್ನು ಸೇರಿಸಬಹುದಾಗಿದೆ. ಪೊಲೀಸ್ ಠಾಣೆ, ಮಹಿಳಾ ಸಹಾಯ ಕೇಂದ್ರ, ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸಂಪರ್ಕ ಬೆಳೆಸಿ, ತುರ್ತುಸೇವೆಗಳಿಗಾಗಿ ಹೆಲ್ಪ್‌ಲೈನ್ ಸಂಖ್ಯೆಗಳನ್ನು ಜನರಿಗೆ ಈ ಮೂಲಕ ತಲುಪಿಸಲಾಗುವುದು. ಉದಾಹರಣೆಗೆ, ಕೆಲವು ಜಿಲ್ಲೆಗಳಲ್ಲಿ “ಅಕ್ಕ ಪಡೆ” ಮಹಿಳೆಯರಿಗಾಗಿ ರಾತ್ರಿ ಸಮಯದಲ್ಲಿ ಕೂಡ ಸುರಕ್ಷತಾ ಒಂದು ರೌಂಡು ಹಾಗೂ ಶಾಲಾ-ಕಾಲೇಜುಗಳಲ್ಲಿ ‘ಜಾಗೃತಿ ಕಾರ್ಯಕ್ರಮ’ ಹಮ್ಮಿಕೊಳ್ಳುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ;
ಆಸಕ್ತರು ನವೆಂಬರ್ 13, 2025 ರೊಳಗೆ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ ಹೆಚ್ ಮರಿಗೌಡ ರಸ್ತೆ, ಬೆಂಗಳೂರು 560029 ಇಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ;
ಇಮೇಲ್ : dwcd.dd@gmail.com ಅಥವಾ ದೂರವಾಣಿ ಸಂಖ್ಯೆ : 080-29578688 ಗೆ ಕರೆಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



































