ಉಪ್ಪಿನಂಗಡಿಯಲ್ಲಿ ಹೊಟೇಲ್ ಕಾರ್ಮಿಕರೊಬ್ಬರು ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೇಲೊಂದರಲ್ಲಿ ಕಾರ್ಮಿಕರಾಗಿದ್ದು, ನಸುಕಿನ ವೇಳೆ ಎದ್ದು ಕಾರಿಡಾರ್ ಬಳಿ ಬಂದಾಗ ಅಯತಪ್ಪಿ ಕೆಳಗಿನ ತೋಡಿಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟೇಲ್ ಕಾರ್ಮಿಕ ಮಹಡಿಯಿಂದ ಬಿದ್ದು ಸಾವು

















