ಚೆಂಬು ಗ್ರಾಮದ ವೀರಪ್ಪ ಗೌಡ ಪೂಜಾರಿಗದ್ದೆ ಎಂಬವರ ಮನೆಯಿಂದ ನ.5ರಂದು ಚಿನ್ನ ಹಾಗೂ ನಗದು ಕಳವಾಗಿರುವ ಘಟನೆ ವರದಿಯಾಗಿದೆ.
ವೀರಪ್ಪ ಗೌಡರು ಬೆಳಗ್ಗೆ ಸುಳ್ಯಕ್ಕೆ ಬಂದಿದ್ದರು. ಅವರ ಪತ್ನಿ ಮನೆಗೆ ಬೀಗ ಹಾಕಿ ತೋಟಕ್ಕೆ ಹೋಗಿದ್ದರೆಂದು ತಿಳಿದುಬಂದಿದೆ. ಗುರುವಾರ ಬೆಳಿಗ್ಗೆ ಮನೆಯ ಕಪಾಟು ನೋಡಿದಾಗ ಕಪಾಟಿನಲ್ಲಿದ್ದ ಚಿನ್ನ ಹಾಗೂ ನಗದು ಕಾಣೆಯಾಗಿದೆ.
ಚೆಂಬು : ನಗ ಹಾಗೂ ನಗದು ಕಳವು














































