ಸುಳ್ಯ : ರಾಜ್ಯದಲ್ಲಿ ವೇಟ್ ಲಿಫ್ಟಿಂಗ್ ಹಿರಿಯ ವೇಟ್ ಲಿಫ್ಟರ್‌ಗಳ ಶ್ರಮದಿಂದ ಬೆಳೆದು, ಪ್ರಗತಿ ಹಂತವನ್ನು ಕಾಣುತ್ತಿದೆ ಎಂದು ಮಾಜಿ ಅಂತರ್‌ರಾಷ್ಟ್ರೀಯ ವೇಟ್ ಲಿಫ್ಟರ್ ಅರ್ಥರ್ ಡಿಸೋಜಾ ಹೇಳಿದರು.
ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್ ಸಂಸ್ಥೆ ಬೆಂಗಳೂರು ಮಾನ್ಯತೆಯೊಂದಿಗೆ ಸ್ಪೋಟ್ಸ್ ಎಂಡ್ ಆಟ್ಸ್ ಎಸೋಸಿಯೇಶನ್‌ಸುಳ್ಯ ವತಿಯಿಂದ ಸುಳ್ಯದ ಜೂನಿಯರ್‌ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಉದ್ಘಾಟಿಸಿ ಅವರು ಮಾತನಾಡಿದರು. ವೇಟ್ ಲಿಫ್ಟಿಂಗ್‌ನಲ್ಲಿ ಗ್ರಾಮೀಣ ಭಾಗದವರು ಭಾಗವಹಿಸಬೇಕಿದೆ. ಪಟ್ಟಣದಲ್ಲಿ ಬೇರೆ ಬೇರೆ ಅವಕಾಶಗಳಿವೆ. ಆದ್ದರಿಂದ ವೇಟ್‌ಲಿಫ್ಟಿಂಗ್‌ನಲ್ಲಿ ಗ್ರಾಮೀಣರಿಗೆ ಭಾಗವಹಿಸಲು ಪೂರಕ ವಾತವರಣ ಇದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ಮಾತನಾಡಿ, ಅತ್ಯುತ್ತಮ ಸಂಘಟನೆ ಮೂಲಕ ಸುಳ್ಯದಲ್ಲಿ ವೇಟ್‌ಲಿಫ್ಟಿಂಗ್ ಆಯೋಜಿಸಲಾಗಿದೆ. ಕ್ರೀಡೆಗೆ ಇಂದು ಹೆಚ್ಚಿನ ಸಹಕಾರ, ಸೌಲಭ್ಯಗಳನ್ನು ನೀಡಲಾಗುತ್ತಿದ್ದರೂ, ಕ್ರೀಡೆಯ ಆ¸ಕ್ತಿ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮಧ್ಯೆ ಕ್ರೀಡೆಯನ್ನು ಉಳಿಸಿ, ಬೆಳೆಸುವ ಜವಬ್ದಾರಿ ನಮ್ಮ ಮೇಲಿದೆ ಎಂದ ಅವರು ನರೇಂದ್ರ ಮೋದಿ ಅವರು ಖೇಲೋ ಇಂಡಿಯಾ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಒಲಿಂಪಿPಸ್‌ನಲ್ಲಿ ಭಾಗವಹಿಸಲು ವೇದಿಕೆ ಒದಗಿಸುತ್ತಿದ್ದಾರೆ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ಪ್ರಧಾನ ಕರ‍್ಯದರ್ಶಿ ಆನಂದೇಗೌಡ, ತಹಶೀಲ್ದಾರ್ ಮಂಜುಳಾ, ನ.ಪಂ. ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಸದಸ್ಯೆ ಕಿಶೋರಿ ಶೇಟ್, ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಸುಳ್ಯ ಜೂನಿಯರ್‌ಕಾಲೇಜು ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಲಯನ್ಸ ಕ್ಲಬ್ ಅಧ್ಯಕ್ಷ ದೀಪಕ್‌ಕುತ್ತಮೊಟ್ಟೆ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಲಿಂಗಪ್ಪ ಗೌಡ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಕೋಶಾಽಕಾರಿ ಅಶೋಕ ಪ್ರಭು ಸ್ವಾಗತಿಸಿದರು. ಪ್ರಧಾನ ಕರ‍್ಯದರ್ಶಿಸುನಿಲ್‌ಕೇರ್ಪಳವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶನಿವಾರವೂವಿವಿಧ ವಿಭಾಗದ ಸ್ಪರ್ಧೆಗಳು ನಡೆಯಿತು.
ಫಲಿತಾಂಶ:
೪೪ ಕೆ.ಜಿ. ಮಹಿಳಾ ವಿಭಾಗದಲ್ಲಿ ಆಳ್ವಾಸ್‌ಕಾಲೇಜಿ ಪಲ್ಲವಿ ಪ್ರಥಮ, ಉಜಿರೆ ಎಸ್‌ಡಿಎಂ ಸ್ಪೋರ್ಟ್ಸ ಕ್ಲಬ್‌ನ ನಿಶಿಕಾ ದ್ವಿತೀಯಾ, ಉಡುಪಿಯ ಅನ್ವಿತಾ ತೃತೀಯ, ೪೮ ಕೆಜಿ. ಮಹಿಳಾ ವಿಭಾಗದಲ್ಲಿ ಉಜಿರೆ ಎಸ್‌ಡಿಎಂ ಸ್ಪೋರ್ಸ್ ಕ್ಲಬ್‌ನ ಹರ್ಷಿತಾ ಪಿ.ಪಿ. ಪ್ರಥಮ, ಆಳ್ವಾಸ್‌ಏಕಲವ್ಯ ಸಂಜನಾ ದ್ವಿತೀಯ, ಉಡುಪಿ ಜಿಲ್ಲೆಯ ಧನ್ಯಶ್ರೀ ತೃತೀಯ, ಜೂನಿಯರ್ ೪೮ ಕೆ.ಜಿ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಮೂಡುಬಿದಿರೆ ಕಾಲೇಜಿನ ಶ್ರಾವ್ಯ ಪ್ರಥಮ, ಉಜಿರೆ ಎಸ್‌ಡಿಎಂ ಸ್ಪೋರ್ಸ್ ಕ್ಲಬ್‌ನ ಹರ್ಷಿತಾ ಪಿ.ಪಿ. ದ್ವಿತೀಯ, ಸೀನಿಯರ್ ೪೮ ಕೆ.ಜಿ. ಮಹಿಳಾ ವಿಭಾಗದಲ್ಲಿ ಆಳ್ವಾಸ್‌ಕಾಲೇಜಿನ ಶ್ರಾವ್ಯ ಪ್ರಥಮ, ಡಿವೈಇಎಸ್ ಪಲ್ಲವಿ ಎಲ್ ದ್ವಿತೀಯ, ಉಜಿರೆ ಎಸ್‌ಡಿಎಂ ಸ್ಪೋರ್ಸ್ ಕ್ಲಬ್‌ನ ಹರ್ಷಿತಾ ಪಿ.ಪಿ. ತೃತೀಯ, ಯೂತ್ ೫೬ ಕೆಜಿ. ಪುರುಷರ ವಿಭಾಗದಲ್ಲಿ ಡಿವೈಇಎಸ್ ಬೆಳಗಾವಿ ರೋಣಿತ್‌ಕೃಷ್ಣ ಮುರಕಟೆ ಪ್ರಥಮ, ದಾವಣಗೆರೆ ಕುಮಾರ್ ಬೆಲೂರ್ ದ್ವಿತೀಯ, ದಾವಣಗೆರೆ ಗೊಣೇಶ್ ಬಿ. ತೃತೀಯ, ಯೂತ್ ೬೦ ಕೆಜಿ ಪುರುಷರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ರವಿ ಸಿದ್ದಪ್ಪ ಪ್ರಥಮ, ಮಂಗಳ ಥ್ರೋವರ್ಸ್ ಪ್ರಜ್ವಲ್‌ದ್ವಿತೀಯ, ಮೂಡುಬಿದಿರೆ ಜೃನ್ ಪಿಯುಸಿ ರಂಜನ್ ಆರ್.ಕೆ. ತೃತೀಯ, ಜೂನಿಯರ್ ೬೦ ಕೆ.ಜಿ. ಪುರುಷರ ವಿಭಾಗದಲ್ಲಿ ಡಿವೈಇಎಸ್ ಯಶ್ವಂತ್,ಎ ಪ್ರಥಮ, ಸಂಜೀವ ಶೆಟ್ಟಿ ಸ್ಪೋರ್ಸ್ ಹೇಮದ್ರಿ ಬಿ. ದ್ವಿತೀಯ, ಆಳ್ವಾಸ್ ಏಕಲವ್ಯ ಮಧುಲಿಂಗ್ ತೃತೀಯ, ಸೀನಿಯರ್ ೬೦ಕೆಜಿ. ಪುರುಷರ ವಿಭಾಗದಲ್ಲಿ ಎಸ್‌ಡಿಎಂ ಸ್ಪೋರ್ಸ್ಕ್ಲಬ್ ಉಜಿರೆ ಸುಬ್ರಹ್ಮಣ್ಯ ಪ್ರಥಮ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಶಾಂತ್ ಎಃ ದ್ವಿತೀಯ, ಉಜಿರೆ ಸ್ಪೋರ್ಸ್ ಕ್ಲಬ್‌ನ ಕವನ್ ಕೆ. ತೃತೀಯ, ಯೂತ್೬೫ಕೆಜಿ ಪುರುಷರ ವಿಭಾಗದಲ್ಲಿ ದಾವಣಗೆರೆ ಗಣೇಶ್ ವಿ. ಪ್ರಥಮ, ಎಸ್‌ಡಿಎಂ ಸ್ಪೋರ್ಸ್ ಕ್ಲಬ್ ಉಜಿರೆಯ ಸೂರ್ಯಪ್ರಕಾಶ್, ದಾವಣಗೆರೆ ಪವನ್ ಎಚ್. ತೃತೀಯ, ಜೂನಿಯರ್ ೬೫ ಕೆಜಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆಯ ಕೆಂಚಪ್ಪ ಗದ್ದಿ ಪ್ರಥಮ, ಎಸ್‌ಡಿಎಂ ಸ್ಪೋರ್ಸ್ ಕ್ಲಬ್ ಉಜಿರೆಯ ಸೂರ್ಯಪ್ರಕಾಶ್ ದ್ವಿತೀಯ, ದಾವಣಗೆರೆಯ ಮಂಜುನಾಥ್ ತೃತೀಯ, ಸೀನಿಯರ್೬೫ ಕೆಜಿ ಪುರುಷರ ವಿಭಾಗದಲ್ಲಿ ಎಸ್‌ಡಿಎಂ ಸ್ಪೋರ್ಸ್ ಕ್ಲಬ್ ಉಜಿರೆಯ ತಿಪ್ಪಣ್ಣ ಲಕ್ಕಣ್ಣನವರ್ ಪ್ರಥಮ, ಡಿವೈಇಎಸ್ ಯೋಗೀಶ್ ನಾಯಕ್ ಕೆ. ದ್ವಿತೀಯ, ಎಸ್‌ಡಿಎಂ ಸ್ಪೋರ್ಸ್ ಕ್ಲಬ್ ಉಜಿರೆಯ ಮನೋಜ್‌ಬಿ.ಆರ್. ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಸುಳ್ಯ: ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಉದ್ಘಾಟನೆ

















