ಅರಮನೆಗಯ ಸೇತುವೆ ಮುಂದಿನ ಮಳೆಗಾಲಕ್ಕೆ ಮೊದಲು ಸಂಚಾರಕ್ಕೆ ಮುಕ್ತವಾಗಲಿ : ಶಾಸಕಿ ಭಾಗೀರಥಿ ಮುರುಳ್ಯ

ಅರಂತೋಡು : ಅರೆಮನೆಗಯ ಭಾಗದ ಜನರ ಬಹುಕಾಲದ ಬೇಡಿಕೆ ಇಡೇರುವ ಹಂತದಲ್ಲಿದೆ.ಮುಂದಿನ ಮಳೆಗಾಲಕ್ಕೆ ಮೊದಲು ಈ ಸೇತುವೆ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಲಿ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಸುಳ್ಯ ತಾಲೂಕಿನ‌ ಅರಂತೋಡು ಗ್ರಾಮ ಪಂಚಾಯತ್ ಮತ್ತು ಮರ್ಕಂಜ ಗ್ರಾಮ ವ್ಯಾಪ್ತಿಗೆ ಒಳಪಟ್ಟ ಬಲ್ನಾಡ್ ಹೊಳೆಗೆ ಅರಮನೆಗಯ ಎಂಬಲ್ಲಿ‌ ಸುಮಾರು 175 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಇದಕ್ಕೆ ಅನುದಾನ ಮಂಜುರಾಗಲು ಭಾಜಪ ನಾಯಕರು ಸಹಕಾರ ಮಾಡಿದ್ದಾರೆ. ಹೆಚ್ಚಾಗಿ ಲೋಕೋಪಯೋಗಿ ಸಚಿವ ಸತೀಸ್ ಜಾರೋಕಿ ಹೊಳಿ ತುಂಬಾ ಸಹಕಾರ ಮಾಡಿದ್ದಾರೆ.ಅವರನ್ನೆ ಕರೆದು ಸೇತುವೆ ಉದ್ಘಾಟಿಸಿ ಆ ಸಂದರ್ಭದಲ್ಲಿ ಅವರನ್ನು‌ ಅಭಿನಂದಿಸಲಾಗುವುದೆಂದು ಎಂದು ಅವರು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ” ಬಹು ಬೇಡಿಕೆಯ ಅರಮನೆಗಯ ಸೇತುವೆ ಈಗ ನಮ್ಮ ನಿಮ್ಮೆಲ್ಲರ ಪರಿಶ್ರಮದಿಂದ ನಿರ್ಮಾಣವಾಗುತ್ತಿದೆ . ಅದರಲ್ಲೂ ಸೇತುವೆ ನಿರ್ಮಾಣಕ್ಕೆ ಬಹು ವರ್ಷಗಳಿಂದ ಹೋರಾಡಿದ ನಮ್ಮ ಎಲ್ಯಣ್ಣ ಅರಮನೆಯವರ ಪರಿಶ್ರಮಕ್ಕೆ ಇಂದು ಶಾಶ್ವತ ಪರಿಹಾರ ಲಭಿಸಿದೆ. ಇಂದು ಶಾಸಕರು ಗುದ್ದಲಿಪೂಜೆ ನೆರವೇರಿಸಿ ಗ್ರಾಮಸ್ಥರ ಭರವಸೆಗೆ ಜೀವ ತುಂಬಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ವೆಂಕಟ್ ವಳಲಂಬೆ ,ಹರೀಶ್ ಕಂಜಿಪಿಲಿ, ಗೀತಾ ಹೊಸಳಿಕೆ, ಅರಂತೋಡು ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು _ತೊಡಿಕಾನ ಪ್ರಾ. ಕೃ. ಪ.ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ, ವಿನಯ್ ಮುಳುಗಾಡು ಮಾಜಿ ಗ್ರಾ.ಪಂ ಸದಸ್ಯ ಎಲ್ಯಣ್ಣ ಅರಮನೆಗಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ವೆಂಕಟ್ ದಂಬೆಕೋಡಿ,, ದಯಾನಂದ ಕುರುಂಜಿ,ಗೋವಿಂದ ಅಳವುಪಾರೆ, ಶ್ರೀಕಾಂತ್ ಮಾವಿನಕಟ್ಟೆ , ಶಶಿಕಲಾ ನೀರಬಿದರೆ,ಕುಸುಮಾಧರ ಎ ಟಿ, ವಿನಯ ಕುಮಾರ್ ಕಂದಡ್ಕ, ಸತೀಶ್ ನಾಯ್ಕ್ , ಪ್ರದೀಪ್ ಮನವಳಿಕೆ , ಹೊನ್ನಪ್ಪ ಮಾಸ್ತರ್, ಎಂಜಿನಿಯರ್ ಗಳಾದ ಗೋಪಾಲ್ , ಪರಮೇಶ್ವರ,ಗುತ್ತಿಗೆದಾರ ಆಕಾಶ್ , ಜನಾರ್ಧನ ಮೇಲಡ್ತಲೆ, ಶಶೀಕುಮಾರ್ ಉಳುವಾರು,ರಂಜಿತ್ ಅಡ್ತಲೆ,ತೇಜ್ ಕುಮಾರ್ ಅರಮನೆಗಯ ಸ್ಪಂದನ ಗೆಳೆಯರ ಬಳಗ, ಚಂದನ ಯುವತಿ ಮಂಡಲ ಅಡ್ತಲೆ ಅಧ್ಯಕ್ಷರು ಪದಾಧಿಕಾರಿಗಳು, ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ತಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅರಂತೋಡು ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ ಸರ್ವರನ್ನು ಸ್ವಾಗತಿಸಿ , ಗೋವಿಂದ ಅಳವುಪಾರೆ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top