ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕಡಮಕಲ್ ಭೇಟಿ

ದಶಕಗಳ ಬೇಡಿಕೆಯಾದ, ಮಡಿಕೇರಿ – ಗಾಳಿಬೀಡು – ಕಡಮಕಲ್ – ಕುಕ್ಕೇಸುಬ್ರಹ್ಮಣ್ಯ ರಸ್ತೆಯ ಬಗ್ಗೆ ಮತ್ತು ಕಡಮಕಲ್ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಹಿನ್ನೆಲೆಯಲ್ಲಿ
ಸಮಾಲೋಚನಾ ಸಭೆಯನ್ನು ಮಡಿಕೇರಿ ಶಾಸಕ ಮಂತರ್ ಗೌಡ
ನ. 14ರಂದು ಸಂಜೆ ಕಡಮಕಲ್ ನಲ್ಲಿ ನಡೆಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನೂರಾರು ಸಂಖ್ಯೆಯಲ್ಲಿ ಸೇರಿದ ಸ್ಥಳೀಯರು ಮತ್ತು
ಗುತ್ತಿಗಾರು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮದ ನಾಯಕರು, ಗ್ರಾಮಸ್ಥರು ಮಡಿಕೇರಿ,ಗಾಳಿಬೀಡು, ಕಡಮಕಲ್ ಕುಕ್ಕೇ ಸುಬ್ರಹ್ಮಣ್ಯ ರಸ್ತೆಯ ಅಗತ್ಯತೆ ಮತ್ತು ಕಾನೂನು ತೋಡಕುಗಳನ್ನು ನಿವಾರಿಸಿ ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಸ್ಥಳೀಯ ನಿವಾಸಿಗಳಿಗೆ ಹಕ್ಕುಪತ್ರ, ಕುಡಿಯುವ ನೀರು, ಮೊಬೈಲ್ ಟವರ್ ನಿರ್ಮಾಣ, ರಸ್ತೆ ಅಭಿವೃದ್ಧಿ ಬಗ್ಗೆ ತುರ್ತಾಗಿ ಕ್ರಮ ಕೈಗೊಲ್ಲುವುದಾಗಿ ತಿಳಿಸಿದರು. ಮಡಿಕೇರಿ – ಗಾಳಿಬೀಡು – ಕಡಮಕಲ್ – ಸಂಪರ್ಕ ರಸ್ತೆಗೆ ಇರುವ ಕಾನೂನು ತೋಡಕುಗಳನ್ನು ನಿವಾರಿಸಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸುವ ಕುರಿತಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಪ್ರವೀಣ್ ಮುಂಡೋಡಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆ.ಕೆ ಹರಿಪ್ರಸಾದ್, ಪುಷ್ಪ ಪೂನಾಚ್ಚ, ತೆಣ್ಣೀರ ಮೈನಾ, ಸೇರಿದಂತೆ ಮಡಿಕೇರಿಯ ಮುಖಂಡರು, ಸ್ಥಳೀಯರಾದ ಭವಾನಿಶಂಕರ್ ಪಿಂಡಿಮನೆ, ಸೋಮಶೇಖರ್ ಕಡಮಕಲ್, ಶರತ್ ಕಡಮಕಲ್, ರವಿಕುಮಾರ್ ಕಿರೀಭಾಗ, ಮಂಜುನಾಥ್ ಮಡ್ತಿಲ, ರವೀಂದ್ರ ರುದ್ರಪಾದ, ರಾಮಕೃಷ್ಣ ಹರಿಹರ, ದಿನೇಶ್ ಮಡ್ತಿಲ, ಶೇಖರ್ ಅಂಬೇಕಲ್ಲು, ಕಮಲಾಕ್ಷ ಕೊಲ್ಲಾಮೋಗ್ರು, ಪವನ್ ಕೋನಡ್ಕ, ಪರಮೇಶ್ವರ್ ಕೆಂಬಾರೆ, ರಂಜಿತ್ ಪೈಕ, ಪರಮೇಶ್ವರ್ ನಾಯ್ಕ ಚಣಿಲ, ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top