ಚಿಕ್ಕಮಗಳೂರಿನಲ್ಲಿ ಮಂಗವೊಂದು ಮನೆಯೊಳಗೆ ನುಗ್ಗಿ ಮಹಿಳೆಗೆ ಕಚ್ಚಿ ಗಾಯಗೊಳಿಸಿದೆ.
ಮಂಗನ ದಾಳಿಯಿಂದಾಗಿ ಮಹಿಳೆಯ ಕೈ–ಮುಖಕ್ಕೆ ಭಾಗಕ್ಕೆ ಗಾಯವಾಗಿದೆ. ಚಿಕ್ಕಮಗಳೂರು ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಪೂಜಾ ಎಂಬವರು ಗಾಯಗೊಂಡ ಮಹಿಳೆ ಎಂದು ಗುರುತಿಸಲಾಗಿದೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಂಗ ದಾಳಿ ನಡೆಸಿದೆ.
ಮಂಗನ ದಾಳಿಯಿಂದ ಗಾಯಗೊಂಡ ಪೂಜಾ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಂಗಗಳ ಹಾವಳಿಯಿಂದ ಶಾಂತವೇರಿ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ.
ಮನೆಯೊಳಗೆ ನುಗ್ಗಿ ಮಹಿಳೆಗೆ ಕಚ್ಚಿ ಗಾಯಗೊಳಿಸಿದ ಮಂಗ

















