ಭಗವದ್ಗೀತೆ ನಮ್ಮ ಜೀವನದ ಮೌಲ್ಯವನ್ನು ತಿಳಿಸುತ್ತದೆ : ಡಾ.ಹರ್ಷವರ್ಧನ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ‌ನ.30ರಂದು ಗೀತಾಜಯಂತಿ ಆಚರಣೆ ಮತ್ತು ಆಶ್ರಮದ ಸ್ವಾಮಿ‌ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 231 ಕೃತಿ ಮಾಲೆ ಮಾತಸ್ತು ಸಕಲ ಜಗತ: ಬಿಡುಗಡೆ ಕಾರ್ಯಕ್ರಮ ನಡೆಯಿತು.
ಆಶ್ರಮದ ಟ್ರಸ್ಟಿ ಪ್ರಣವಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಹರ್ಷವರ್ಧನ ಪುಸ್ತಕ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಭಗವದ್ಗೀತೆ ನಮ್ಮ ಜೀವನದ ಮೌಲ್ಯವನ್ನು ತಿಳಿಸುತ್ತದೆ.ಇದರಲ್ಲಿ ಜೀವನ ನಡೆಸಲು ಬೇಕಾದ ಉಪದೇಶಗಳು ಇವೆ.ಇದನ್ನು‌ ನಾವೇಲ್ಲರೂ ಜೀವನದಲ್ಲಿ‌ ರೂಡಿಸಿಕೊಂಡು ಜೀವನ ನಡೆಸಬೇಕಾಗಿದೆ ಎಂದು ಹೇಳಿದರು.
ಸ್ವಾಮಿಜಿಯವರು ಭಗವದ್ಗೀತೆಯ ಮಹತ್ವವನ್ನು ತಿಳಿಸಿ ಮಾತನಾಡಿ ಕ್ರಷ್ಣ ಗೀತೆಯಲ್ಲಿ‌ ತಿಳಿಸಿದಂತೆ ನಾವು ನಮ್ಮ ಕರ್ಮವನ್ನು‌ ನಿರಂತರವಾಗಿ ಮಾಡಬೇಕು ಆಗ ನಮಗೆ ಜಯ ದೊರೆಯುತ್ತದೆ.ಆಧುನಿಕ ಕಾಲದಲ್ಲಿ ಸ್ವಾರ್ಥಗಳೇ ಜಾಸ್ತಿಯಾಗಿವೆ‌.ಸ್ವಾರ್ಥದ ಬದುಕಿನಿಂದ ಸಾಮಾಜಿಕ ಕಾಳಜಿಯ ಬಗ್ಗೆ ನಾವು ಆಶಕ್ತಿ ತೋರಬೇಕಾಗಿದೆ ಎಂದು ಎಂದು ಹೇಳಿದರು.
ವೇದಿಕೆಯಲ್ಲಿ ಕೃಷಿಕರಾದ ಚಿನ್ನಪ್ಪ ಗೌಡ ನಾರಲು,ಲೋಕೇಶ ಅಡ್ಡಂತ್ತಡ್ಕ,ಚಿತ್ರಕುಮಾರ ಮುಡೂರು,ಆಶ್ರಮದ ಟ್ರಸ್ಟಿ ಪ್ರಣವಿ ,ನಿವೃತ್ತ ಎ.ಎಸ್.ಐ ಕುಶಾಲಪ್ಪ ಗೌಡ ಅತ್ಯಾಡಿ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top