ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಡಿ.6ರಂದು ಪ್ರತಿ ವರ್ಷದಂತೆ ಈ ಬಾರಿಯು ಅಜ್ಜ – ಅಜ್ಜಿಯರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು ಆಗಮಿಸಿ ಅಜ್ಜ ಅಜ್ಜಿಯರ ಜೀವನದ ಮೌಲ್ಯವನ್ನು ತಿಳಿಸಿ ಈ ಶಾಲೆಯಲ್ಲಿಯೇ ಮೊದಲು ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದೆಂದು ಪ್ರಶಂಶಿಸಿದರು. ಶಾಲೆಯ ಸಂಚಾಲಕರು ಗೀತಾಂ ಜಲಿಯವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಅಜ್ಜ ಅಜ್ಜಿಯರೆಲ್ಲ ಕಥೆ, ಅಭಿನಯಗೀತೆ ,ಮಕ್ಕಳ ಹಾಡನ್ನು ಹಾಡಿ ಮೊಮ್ಮಕ್ಕಳನ್ನು ಸಂತೈಸಿದರು.
ಪುಟಾಣಿಗಳು ಸಹ ನೃತ್ಯ ಹಾಗೂ ಹಾಡು ಭಾಷಣದ ಮೂಲಕ ಅಜ್ಜ ಅಜ್ಜಿಯಂದಿರನ್ನು ಖುಷಿ ಪಡಿಸಿದರು . ಅಜ್ಜಿಯಂದಿರುತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಎಲ್ಲರೂ ಜೊತೆಗೂಡಿ ಸವಿಯಲಾಯಿತು.
ಅಜ್ಜ ಅಜ್ಜಿಯಂದಿರಿಗೆ ಮೋಜಿನ ಆಟಗಳನ್ನು , ಜೊತೆಗೆ ರಾಂಪ್ ವಾಕ್ ಅನ್ನು ಆಯೋಜಿಸಲಾಗಿತ್ತು.
ಯು. ಕೆ.ಜಿ ಪುಟಾಣಿ ಶಜ್ನಾ ಸ್ವಾಗತಿಸಿ, ಸುಕನ್ಯಾ ಪ್ರಾರ್ಥಿಸಿ, ಯು. ಕೆ. ಜಿ.ಪುಟಾಣಿ ದ್ರಿಶಾನಿ ವಂದಿಸಿ , ನಿರ್ಮಾಲ ಕಾರ್ಯಕ್ರಮವನ್ನು ನಿರೂಪಿಸಿದರು.
ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಸುಳ್ಯದಲ್ಲಿ ಮೊದಲ ಬಾರಿಗೆ ಅಜ್ಜ ಅಜ್ಜಿ ದಿನಾಚರಣೆ ಆಚರಣೆ

















