ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಗೂನಡ್ಕ ಇದರ ಶಾಲಾ ವಾರ್ಷಿಕೋತ್ಸವದ ಸಂಭ್ರಮ 2025 – 2026 ಡಿ.11ರಂದು ಶಾಲಾ ವಠಾರದಲ್ಲಿ ನಡೆಯಿತು.
ಶಾಲಾ ಅಧ್ಯಕ್ಷ ರುಕ್ಮಯ್ಯ ದಾಸ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಡ್ಯ ಕಾವೇರಿ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾ ಸಾಧಕರನ್ನು ಗೌರವಿಸಿ ಮಾತನಾಡಿದರು.
ಮಾರುತಿ ಪೌಂಡೆಶನ್ ನಿರ್ದೇಶಕಿ ಲೀಲಾವತಿ,ಪೋಷಕರ ಸಮಿತಿ ಅಧ್ಯಕ್ಷ ರಮೇಶ್,ಉಪಾಧ್ಯಕ್ಷ ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಶಾಲಾ ಕಾರ್ಯದರ್ಶಿ ಕಿಶೋರ್ ಕುಮಾರ್ ಸ್ವಾಗತಿಸಿದರು.ಪ್ರಾಂಶುಪಾಲೆ ಶೋಭಾ ಕಿಶೋರ್ ವರದಿ ವಾಚಿಸಿದರು.
ಮಾರುತಿ ಇಂಟೆರ್ ನ್ಯಾಶನಲ್ ಪಬ್ಲಿಕ್ ಸ್ಕೂಲಿನ ವಾರ್ಷಿಕೋತ್ಸವ, ಸಂಭ್ರಮ 2025-26ಕ್ಕೆ ಚಾಲನೆ

















