ಸಾಹಿತ್ಯ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು : ಭಾಗೀರಥಿ ಮುರುಳ್ಯ

ಸಾಹಿತ್ಯ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು ,ಸಾಹಿತಿಗಳ ಪುಸ್ತಕ ಕೊಂಡು ಓದುವ ಹವ್ಯಾಸವೇ ಸಾಹಿತ್ಯಕ್ಕೆ ನೀಡುವ ಪೋತ್ಸಾಹ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯ ಪಟ್ಟರು.
ಅಮರಮುಡ್ನೂರಿನ ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯ ಅಬಸಮ ಸಭಾಂಗಣದ ಡಾ. ಪೈಲೂರು ಗೋಪಾಲಕೃಷ್ಣವೇದಿಕೆಯಲ್ಲಿ
ಡಿ. 30 ರಂದುತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಂಟಮಲೆ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರ ನಿಂತ ನೀರಾಗದೆ ಹರಿಯುವನೀರಾಗಬೇಕೆಂದು ಹೇಳಿದರು.
ಕೆ. ಆ‌ರ್. ತೇಜಕುಮಾರ್ ಬಡ್ಡಡ್ಕ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ಉದಯೋನ್ಮಖ ಸಾಹಿತಿಯೊಬ್ಬರ ಕೃತಿಯೊಂದನ್ನು ಆಯ್ಕೆ ಮಾಡಿ ಸಮ್ಮೇಳನದ ಪುಸ್ತಕವೆಂದು ಪ್ರಕಟಿಸಬೇಕು ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನವನ್ನು ದೀಪ ಪ್ರಜ್ವಲಿಸಿ ಹಿರಿಯ ಸಾಹಿತಿಗಳಾದ ಕೆ. ಪಿ. ಸುರೇಶ ಕಂಜರ್ಪಣೆ ಉದ್ಘಾಟಿಸಿದರು
ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಯವರು ಸಮ್ಮೇಳನಾಧ್ಯಕ್ಷ ತೇಜಕುಮಾರ್ ರವರು ಬರೆದ ಮಜಲಿನಾಚೆ, ಮಮತಾ ರವೀಶ್ ಪಡ್ಡಂಬೈಲು ರವರು ಬರೆದ ಗುಬ್ಬಿದನಿ ಎಂಬ ಹೊಸ ಕೃತಿಗಳನ್ನು ಬಿಡುಗಡೆ ಮಾಡಿದರು.ವೇದಿಕೆಯಲ್ಲಿ ತಹಶೀಲ್ದಾರ್ ಮಂಜುಳ, ಪೂರ್ವಾಧ್ಯಕ್ಷೆ ಲೀಲಾ ದಾಮೋದರ, ದ. ಕ. ಜಿಲ್ಲಾ ಕಸಾಪದ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ, ಅಮರಮಡ್ನೂರು ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ, ಕೊಡಗು ಜಿಲ್ಲಾ ಕಸಾಪದ ಅಧ್ಯಕ್ಷ ಕೇಶವ ಕಾಮತ್, ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್‌ ಮಾಡಬಾಕಿಲು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು,ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ, ಗೌರವ ಕಾರ್ಯದರ್ಶಿ ಚಂದ್ರಮತಿ ಕೆ, ತೇಜಸ್ವಿ ಕಡೆಪಳ, ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಪಂಜ ಹೋಬಳಿ ಘಟಕದ ಅಧ್ಯಕ್ಷೆ ಬಾಬು ಗೌಡ ಅಚ್ರಪ್ಪಾಡಿ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಕೋಶಾಧಿಕಾರಿ ಅರುಣ ಕುಮಾರ ಮುಂಡಾಜೆ, ರಾಮಕ್ರಷ್ಣ ಭಟ್ ಚೊಕ್ಕಾಡಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ರವರು ಪ್ರಸ್ತಾವನೆ ಮಾಡಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸ್ವಾಗತ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿದರು.
ಸಾಹಿತಿ ಎ. ಕೆ. ಹಿಮಕರ ರವರುಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು.
ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಮಾಡಬಾಕಿಲು ವಂದಿಸಿದರು. ಚರಿಷ್ಮಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top