ಆಲೆಟ್ಟಿ ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂಬೂರಿನಲ್ಲಿ ಬೈಕ್ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ಕಪ್ಪಿದ ಘಟನೆ ವರದಿಯಾಗಿದೆ.
ಸಲ್ಮಾನ್ ಎಂಬ ವ್ಯಕ್ತಿ ಬೈಕ್ ಅಪಘಾದಲ್ಲಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ.
ಜ.5ರಂದು ಮಧ್ಯಾಹ್ನ ಅಪಘಾತ ನಡೆದಿತ್ತು. ಬೈಕ್ ಚಲಾಯಿಸಿಕೊಂಡು ಅರಂಬೂರು ರಸ್ತೆಯಲ್ಲಿ ಹೋಗುತಿದ್ದಾಗ ರಸ್ತೆ ಬದಿ ತಡೆಬೇಲಿಗೆ ಗುದ್ದಿ ರಸ್ತೆಗೆ ಎಸೆಯಲ್ಪಟ್ಟರು. ಪರಿಣಾಮ ಬೈಕ್ ಪಲ್ಟಿಯಾಗಿ ಸಲ್ಮಾನ್ ರಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅರಂಬೂರು : ಅಪಘಾತದಲ್ಲಿ ಬೈಕ್ ಸವಾರ ಸಾವು

















