ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಹೃದಯದಲ್ಲಿರುತ್ತಾರೆ ಎಂದು
ಧರ್ಮಾಧ್ಯಕ್ಷರು, ಮಂಗಳೂರು ಧರ್ಮಪ್ರಾಂತ್ಯ ಹಾಗೂ ಅಧ್ಯಕ್ಷರು, ಕಥೋಲಿಕ್ ಶಿಕ್ಷಣ ಮಂಡಳಿ, ಮಂಗಳೂರಿನ ಪರಮ ಪೂಜ್ಯ ಡಾ| ಡಾ.ಪೀಟರ್ ಪೌಲ್ ಸಲ್ಡಾನ್ಹಾ
ಹೇಳಿದರು.
ಸುಳ್ಯ ಬೀರಮಂಗಲದಲ್ಲಿರುವ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಸುಳ್ಯ ಇದರ ಅಮೃತ ಮಹೋತ್ಸವ ಅಂಗವಾಗಿ ಜ.20ರಂದು ಶಾಲಾ ವಠಾರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾಷೆ , ಕೈ ಹಿಡಿದು ಬರೆಯಲು ಅಕ್ಷರ, ಓದಲು ಬರೆಯಲು ಯಾರು ಕಲಿಸಿದಾರೋ ಅವರು ಶಿಕ್ಷಕರಾಗುತ್ತಾರೆ.ಅವರು ಹೆಸರು ಅವರ ನೆನಪು ನಮ್ಮ ಜೀವನಕ್ಕೆ ಸಂತೋಷ ಕೊಡುತ್ತದೆ.ಅಮ್ರತ ವರ್ಷ ಕಂಡ ಶಾಲೆ ನೂರು ವರ್ಷವನ್ನು ಪೂರೈಸಲಿ.ವಿದ್ಯಾರ್ಥಿಗಳ ಶಿಕ್ಷಕರ ಜೀವನ ಸುಖಕರವಾಗಿ ಅಭಿವೃದ್ಧಿ ಯನ್ನು ಕಾಣಲಿ ಎಂದು ಅವರು ಹೇಳಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಮಾತನಾಡಿ ಇವತ್ತು ಸಣ್ಣ ವಿಷಯಕ್ಕೂ ವಿದ್ಯಾರ್ಥಿಗಳು ಖಿನ್ನತೆಗೊಳಗಾಗುವ ಕಾಲ ಘಟ್ಟ. ವಿದ್ಯಾರ್ಥಿಗಳ ಬಗ್ಗೆ ಅವರ ಎಳೆಯಲ್ಲಿ ಹೆತ್ತರು ಗಮನ ಹರಿಸುಸಿ ಮಾರ್ಗದರ್ಶನ ಮಾಡುವ ಅಗತ್ಯ ಎಲ್ಲಾರು ಉತ್ತಮ ವಿದ್ಯಾರ್ಥಿಗಳಾಗಿ ಜೀವನದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಕೀರ್ತಿ ತನ್ನಿ ಎಂದು ಹೇಳಿದರು.
ಕಥೋಲಿಕ್ ಶಿಕ್ಷಣ ಮಂಡಳಿ, ಮಂಗಳೂರ ಇದರ ಕಾರ್ಯದರ್ಶಿ ಡಾ. ಪ್ರವೀಣ್ ಲಿಯೋ ಲಸ್ರಾದೊ ಮಾತನಾಡಿ ಶಿಕ್ಷಣ ಇಂದು ವ್ಯಾಪಾರಿಕರಣವಾಗಿದೆ.ಇಂತಹ ಸಂದರ್ಭದಲ್ಲಿ ಕ್ಯಾಥೊಲಿಕ್ ಸಂಸ್ಥೆ ಯಾರಿಗೂ ಅಂಜದೆ ಬಡವರಿಗೆ ದೀನ ದಲಿತರಿಗೆ ಗಣಮಟ್ಟದ ಶಿಕ್ಷಣ ನೀಡುತ್ತಿದೆ.ನಮ್ಮ ಉದ್ದೇಶ ಯಾರು ಶಿಕ್ಷಣದಿಂದ ವಂಚಿತರಾಗಬಾರದೆಂದು.ಶಿಕ್ಷಣ ಸಂಸ್ಥೆ ನಿಮ್ಮೇಲ್ಲರ ಸಹಕಾರದಿಂದ ನಡೆದಿದೆ.ಮುಂದೆಯೂ ಸಹಕಾರ ಅಗತ್ಯ ಇದೆ ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿ, ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಭಾರಧ್ವಾಜ್ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಾಪ UFS ಪ್ರಾಂತೀಯ ಮುಖ್ಯಸ್ಥರು, ಮಂಗಳೂರು ಪ್ರಾಂತ್ಯ ಸಿಸ್ಟರ್ ಕ್ಲೀರಾ ಮಿನೇಜಸ್
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಸುನಿಲ್ ಮಸ್ಕರೇನಸ್,
ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ,ಶಾಲಾ ಶಿಕ್ಷಕಿ ಸಿಸ್ಟರ್ ಆ್ಯಂಟನಿ ಮೇರಿ
ಪೋಷಕ ಸಮಿತಿ ಉಪಾಧ್ಯಕ್ಷ ನವೀನ್ ಚಂದ್ರ ಚಾತುಬಾಯಿ
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ನವೀನ್ ಮಚಾದೊ
ಕು| ಆಧ್ಯ ಜಿ. ಎಸ್ ಶಾಲಾ ನಾಯಕಿ ಪೂಜ್ಯನೀಯ ಒಲ್ವಿನ್ ಡಿ’ಕುನ್ಹಾ ಜೊತೆ ಕಾರ್ಯದರ್ಶಿ, ಶಾಲಾ ಮುಖ್ಯ ಶಿಕ್ಷಕಿ ಆ್ಯಂಟನಿ ಮೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸನ್ಮಾನ ಕಾರ್ಯಕ್ರಮ ನಡೆಯಿತು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಹೃದಯದಲ್ಲಿರುತ್ತಾರೆ : ಡಾ.ಪೀಟರ್ ಪೌಲ್ ಸಲ್ಡಾನ್ಹಾ

















