ದೇಶದ ಉನ್ನತಿಗಾಗಿ ಹಿಂದುತ್ವವನ್ನು ಬಲಿಷ್ಠಗೊಳಿಸುವ  ಅಗತ್ಯ ಇದೆ: ಜಿತೇಂದ್ರ

ದೇಶದ ಉನ್ನತಿಗಾಗಿ ಹಿಂದುತ್ವವನ್ನು ಬಲಿಷ್ಠಗೊಳಿಸುವ ಅಗತ್ಯ ಇದೆ ಎಂದು   ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ  ಗ್ರಾಮ ವಿಕಾಸ ಸಂಯೋಜಕರಾದ ಜಿತೇಂದ್ರ ಹೇಳಿದರು.
ಕಲ್ಲುಗುಂಡಿ ಒತ್ತೆಕೋಲ ಗದ್ದೆಯಲ್ಲಿ ಫೆ.1ರಂದು  ನಡೆದ ಬ್ರಹತ್ ಹಿಂದು ಸಂಘಮದ  ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಜಿ  ಭಾಷಣ  ಮಾತನಾಡಿದರು.
ಹಿಂದೂ ಸಂಘಟನೆ ಬಲಿಷ್ಠವಾಗಬೇಕಾದರೆ ಮೊದಲು ನಾವು ನಾನು  ನಮ್ಮ ಕುಟುಂಬ  ಗ್ರಾಮ , ಊರು ದೇಶ  ಹೇಗಿರಬೇಕು ಎಂಬ ಚಿಂತನೆಗೋಸ್ಕರ ನಾವೆಲ್ಲ ಇಂದು  ಒಟ್ಟು ಸೇರಿದ್ದೇವೆ‌. ಮುಂದಿನ ನಮ್ಮ ದೇಶದ ಉನ್ನತಿಗಾಗಿ  ಹೋರಾಡುವ ಹಾಗೂ ಹಿಂದುತ್ವವನ್ನು ಉಳಿಸುವ ಕಾರ್ಯವನ್ನು ಯುವ ಜನತೆ  ಮೊದಲು ಮಾಡಬೇಕು ಎಂದು ಅವರು ಹೇಳಿದರು.
*ಹಿಂದು ಧರ್ಮದಲ್ಲಿ  ಬಲವಿದೆ* *ಎಂ.ಬಿ*
ಸುಳ್ಯ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಎಂ. ಬಿ ಸದಾಶಿವ  ದೀಪ ದೀಪ ಪ್ರಜ್ವಲಿಸಿ  ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ಹಿಂದೂ ಸಂಘಟನೆಗೆ ಬಲವಿದೆ  ಎಂಬುವುದಕ್ಕೆ  ಇಲ್ಲಿ ಸೇರಿರುವ ಜನರೇ ಸಾಕ್ಷಿ. ಯಾವುದೇ ಬೇಧ , ಭಾವ , ಶ್ರೀಮಂತ  ಬಡವ ಎಂಬ ಭೇದವನ್ನು ನೋಡದೇ  ಹೆಚ್ಚಿನ ಸಂಖ್ಯೆಯಲ್ಲಿ  ಜನರು ಇಂದು ಸೇರಿ ಹಿಂದೂ ಧರ್ಮದಲ್ಲಿ ಬಲವಿದೆ ಎಂದು ತೋರಿಸಿಕೊಟ್ಟಿದ್ದೀರಿ. ಇದು ದೇಶ , ಜಿಲ್ಲೆ, ಗ್ರಾಮಕ್ಕೆ ಮಾದರಿಯಾಗಿದೆ  ಎಂದು ಹೇಳಿದರು.
ಅಪರಾಹ್ನ 2 : 30 ಕ್ಕೆ ಕಲ್ಲುಗುಂಡಿಯ ಕೆಳಗಿನ ಪೇಟೆಯ ಕೂಲಿ ಶೆಡ್ ನಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ  ಬ್ರಹತ್ ಹಿಂದು ಸಂಘಮದ ಶೋಭಾಯಾತ್ರೆಗೆ  ಚಾಲನೆ ನೀಡಲಾಯಿತು. ಬಳಿಕ ಪುಪ್ಪಾಲಂಕೃತಗೊಂಡ ಭವ್ಯ ಭಾರತ ಮಾತೆಯ ರಥದೊಂದಿಗೆ , ಭಾರತ್ ಮಾತಾಕಿ ಜೈ, ಶ್ರೀ ರಾಮ ಚಂದ್ರ ಮಹಾರಾಜ ಕಿ ಜೈ, ವಂದೇ ಮಾತರಂ, ನಾವೆಲ್ಲ ಹಿಂದೂ ನಾವೆಲ್ಲ ಬಂದು ಮೊದಲಾದ  ಘೋಷಣೆಗಳಿಂದ ,ಮಹಿಳಾ ಮಾತೆಯರಿಂದ  ಕಲಶ ಕುಂಭ, ಶಂಖವಾದ್ಯ, ಪುಟಾಣಿ ಮಕ್ಕಳ ಪೌರಾಣಿಕ ವೇಷ,   ಕುಣಿತ ಭಜನೆ, ಕೊಡಗು ವಾದ್ಯ , ಗೊಂಬೆಯಾಟ , ನಾಸಿಕ್ ಬ್ಯಾಂಡ್ ಹಾಗೂ ವಾದ್ಯ ಘೋಷಗಳೊಂದಿಗೆ ಮೂಲಕ ಬೃಹತ್ ಶೋಭಾಯಾತ್ರೆಯು ಕಲ್ಲುಗುಂಡಿಯ ಒತ್ತೆಕೋಲ ಗದ್ದೆಗೆ ಸಾಗಿಬಂತು . ಬಳಿಕ ಸಭಾಕಾರ್ಯಕ್ರಮದ ವೇದಿಕೆಯಲ್ಲಿ ಸ್ಥಳೀಯರಿಂದ ದೇಶದ ಮಹಿಮೆಯ ಸಾರುವ ನೃತ್ಯ ಪ್ರದರ್ಶನ, ಹಾಗೂ ಯಕ್ಷಗಾನ ಬಯಲಾಟ  ನಡೆಯಿತು.  ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.   ಕೃಷ್ಣಪ್ಪ ದಾಸ್ ಶಂಖನಾದ ಮೊಳಗಿಸಿದರು. 
ನಿವೃತ್ತ  ಕನ್ನಡ  ಉಪನ್ಯಾಸಕರಾದ  ಕರುಣಾಕರ ನಿಡಿಂಜಿ , ನಿವೃತ್ತ ಸೈನಿಕ ಜಗದೀಶ್ ಕೆ . ಪಿ,ನಿವೃತ್ತ ಶಿಕ್ಷಕರಾದ  ಕೆ.ಆರ್ ವಿಠ್ಠಲ ಮಾಸ್ತರ್,   ಗೌರಮ್ಮ ದೋಳ ಮನೆ, ಸುಬ್ರಹ್ಮಣ್ಯ ಉಪಾಧ್ಯಾಯ, ಕೊರಗಪ್ಪ ಅರಮನೆ ತೋಟ ,  ಎಸ್. ಪಿ ಲೋಕನಾಥ್,  ಹಾಗೂ
ಸಂಪಾಜೆ ಹಿಂದೂ ಸಂಗಮ  ನಿರ್ವಹಣಾ ಹಾಗೂ ಆಯೋಜನಾ ಸಮಿತಿಯ ಉಪಾಧ್ಯಕ್ಷರು ಸಂಚಾಲಕರು,  ಸರ್ವ ಸದಸ್ಯರು , ಊರಿನ ಹಿಂದೂ ನಾಗರಿಕರು,  ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ  ಉಪಸ್ಥಿತರಿದ್ದರು.
ಸಂಪಾಜೆ ಮಂಡಲದ ಹಿಂದು ಸಂಘಮ ಸಂಚಾಲಕ ಅನಂತ ಎನ್. ಸಿ  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರಮಾದೇವಿ ಬಾಲಚಂದ್ರ ಕಳಗಿ ವಂದಿಸಿದರು. ವಿಕ್ರಾಂತ್ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.



































































































Leave a Comment

Your email address will not be published. Required fields are marked *

error: Content is protected !!
Scroll to Top