ಆಗಸ್ಟ್ 18 : ವಿವಿಧ ಭೇಡಿಕೆಗಳ ಇಡೇರಿಕೆಗೆ ಒತ್ತಾಯಿಸಿ ಮಂಗಳೂರಿನಲ್ಲಿ BMS ಪ್ರತಿಭಟನೆ

ಭಾರತೀಯ ಮಜೂರ್ ಸಂಘ (BMS) ವತಿಯಿಂದ ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ BMS ವತಿಯಿಂದ ಆಗಸ್ಟ್ 18ರಂದು ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಮಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು
ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಕಲ್ಮಂಜ ತಿಳಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಮಿಕರಿಗೆ ನ್ಯಾಯಯುತ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ, ಪಿಂಚಣಿ, ಆರೋಗ್ಯ ರಕ್ಷಣೆ ಹಾಗೂ ಸುರಕ್ಷಿತ ಕೆಲಸದ ವಾತಾವರಣ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು BMS ಒತ್ತಾಯಿಸುತ್ತದೆ.
ರಾಷ್ಟ್ರೀಯ ಮಟ್ಟದ ಪ್ರಮುಖ ಬೇಡಿಕೆಗಳು



















  1. 2. EPS-95 ಕನಿಷ್ಠ ಮಾಸಿಕ ಪಿಂಚಣಿಯನ್ನು ಪ್ರಸ್ತುತ ₹1,000ರಿಂದ ₹7,500ಕ್ಕೆ ಹೆಚ್ಚಿಸಿ.
    ESIC ವೇತನ ಮಿತಿಯನ್ನು ಪ್ರಸ್ತುತ ₹21,000ರಿಂದ ₹42,000ಕ್ಕೆ ಹೆಚ್ಚಿಸಬೇಕು.
    ಪಿಂಚಣಿದಾರರಿಗೆ DA ಹಾಗೂ ಸಮಗ್ರ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು.
  2. EPF ವೇತನ ಮಿತಿಯನ್ನು ಪ್ರಸ್ತುತ ₹15,000ರಿಂದ ₹30,000ಕ್ಕೆ ಹೆಚ್ಚಿಸಬೇಕು.
  3. ಬೋನಸ್ ಲೆಕ್ಕಾಚಾರಕ್ಕೆ ಪರಿಗಣಿಸುವ ವೇತನ ಮಿತಿಯನ್ನು ಪುಸ್ತುತ ₹7,000ರಿಂದ *18,000ಕ್ಕೆ ಹೆಚ್ಚಿಸಬೇಕು.
  4. ಬೋನಸ್ ಪಾವತಿಗೆ ಅರ್ಹತೆಯ ವೇತನ ಮಿತಿಯನ್ನು ಪ್ರಸ್ತುತ ₹21,000ರಿಂದ ₹42,000ಕ್ಕೆ ಹೆಚ್ಚಿಸಬೇಕು.
  5. ಆಶಾ, ಅಂಗನವಾಡಿ ಸೇರಿದಂತೆ ಎಲ್ಲಾ ಯೋಜನಾ ನೌಕರರ ಗೌರವಧನವನ್ನು ಸಮರ್ಪಕವಾಗಿ ಹೆಚ್ಚಿಸಿ ಅವರಿಗೆ ಸಾಮಾಜಿಕ ಭದ್ರತೆ ಹಾಗೂ ನಿವೃತ್ತಿ ಭದ್ರತೆಯನ್ನು ಖಚಿತಪಡಿಸಬೇಕು.
  6. ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು ಸೇರಿದಂತೆ ಕಾನೂನುಬದ್ಧವಾಗಿ ಅನ್ವಯಿಸುವ ಕಡೆಗಳಲ್ಲಿ, “ಸಮಾನ ಕೆಲಸಕ್ಕೆ ಸಮಾನ ವೇತನ” ವನ್ನು ಜಾರಿಗೊಳಿಸಬೇಕು.
  7. ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗುವ ಅಂಶಗಳನ್ನು ಹೊಂದಿರುವ ಶ್ರಮ ಸಂಹಿತೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು.
    ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
    1. ಗ್ರಾಚ್ಯುಟಿ ಗರಿಷ್ಠ ಮಿತಿಯನ್ನು ಪ್ರಸ್ತುತ ₹20 ಲಕ್ಷದಿಂದ ₹40 ಲಕ್ಷಕ್ಕೆ ಹೆಚ್ಚಿಸಬೇಕು.
  8. ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು ಕನಿಷ್ಠ ₹30,000ಕ್ಕೆ ನಿಗದಿಪಡಿಸಿ, ದೇಶದ ಎಲ್ಲಾ ಕಾರ್ಮಿಕರಿಗೆ ಗೌರವಯುತ ಜೀವನ ನಡೆಸಲು ಅಗತ್ಯವಾದ ಕನಿಷ್ಠ, ಆದಾಯವನ್ನು ಖಚಿತಪಡಿಸಬೇಕು.
    ದಕ್ಷಿಣ ಕನ್ನಡದ ಕಾರ್ಮಿಕರ ಪ್ರಮುಖ ಬೇಡಿಕೆಗಳು
  9. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪ್ರಮುಖ ಬೇಡಿಕೆಗಳು
    ಕಾರ್ಮಿಕರಿಗೆ ನೇರ ಪ್ರಯೋಜನ ಇಲ್ಲದ ಹಾಗೂ ಅನಗತ್ಯ ಯೋಜನೆಗಳನ್ನು ಪರಿಶೀಲಿಸಿ ರದ್ದುಪಡಿಸಿ, ಕಲ್ಯಾಣ ಮಂಡಳಿಯ ಹಣವನ್ನು ನೇರ ಸಾಮಾಜಿಕ ಭದ್ರತಾ ಸೌಲಭ್ಯಗಳಿಗೆ ಬಳಸಬೇಕು.
    ಕಲ್ಯಾಣ ಮಂಡಳಿಯ ಯೋಜನೆಗಳಲ್ಲಿ ನಡೆದಿರುವ ಅವ್ಯವಸ್ಥೆ ಮತ್ತು ಅಕ್ರಮಗಳ ಕುರಿತು ಸೂಕ್ತ ತನಿಖೆ ನಡೆಸಬೇಕು.
    ಸುಳ್ಯ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಸ್ಥಳೀಯ ನದಿ-ಹಳ್ಳಗಳಿಂದ ಕಾನೂನುಬದ್ದವಾಗಿ ಮರಳು ಸಂಗ್ರಹಿಸಿ ಸಾಗಿಸಲು ಸರಳ ಪರವಾನಗಿ ವ್ಯವಸ್ಥೆ ಜಾರಿಗೊಳಿಸಬೇಕು.
    ಕೆಂಪುಕಲ್ಲಿನ ದರ ಏರಿಕೆಯನ್ನು ನಿಯಂತ್ರಿಸಿ, ಕಟ್ಟಡ ಕಾಮಗಾರಿಗಳು ಮತ್ತು ಕಾರ್ಮಿಕರ ಉದ್ಯೋಗಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಬೇಕು.
    ಕಾರ್ಮಿಕರಿಗೆ ನಗದುರಹಿತ (Cashless) ವೈದ್ಯಕೀಯ ಚಿಕಿತ್ಸೆ ಹಾಗೂ ಬಾಕಿ ಇರುವ ವೈದ್ಯಕೀಯ ಮರುಪಾವತಿಯನ್ನು ಶೀಘ್ರವಾಗಿ ನೀಡಬೇಕು.
    ಸ್ವಂತ ನಿವೇಶನವಿಲ್ಲದ ಕಾರ್ಮಿಕರಿಗೆ ಸೈಟ್ ಹಾಗೂ ಮನೆ ನಿರ್ಮಾಣಕ್ಕೆ ಸಮರ್ಪಕ ಸಹಾಯಧನ ನೀಡಬೇಕು.
    ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನದ ಮೊತ್ತ ಹೆಚ್ಚಿಸಿ, ಅರ್ಹ ಮಕ್ಕಳಿಗೆ ತಾಂತ್ರಿಕ ಕಾರಣಗಳಿಂದ ಸೌಲಭ್ಯ ನಿರಾಕರಿಸಬಾರದು. ಬಾಕಿ ಇರುವ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು.
    ಸ್ಥಳೀಯ ಕಟ್ಟಡ ಕಾರ್ಮಿಕರ ಉದ್ಯೋಗ ಮತ್ತು ದುಡಿಯುವ ಹಕ್ಕು ರಕ್ಷಿಸಲು, ಅಕ್ರಮವಾಗಿ ವಲಸೆ ಬಂದು ಕೆಲಸ ಮಾಡುತ್ತಿರುವವರ ಕುರಿತು ಕಾನೂನುಬದ ಪರಿಶೀಲನೆ ಹಾಗೂ ಕ್ರಮ ಕೈಗೊಳ್ಳಬೇಕು.
    60 ವರ್ಷ ಮೇಲ್ಪಟ್ಟ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಅಗತ್ಯ ವೈದ್ಯಕೀಯ
    ನೆರವು ಮುಂದುವರಿಸಬೇಕು. ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಹೊಂದಿದ ಕಾರ್ಮಿಕರಿಗೆ ಕನಿಷ್ಠ ₹10 ಲಕ್ಷ ಪರಿಹಾರ ಹಾಗೂ ₹10,000 ಮಾಸಿಕ ಅಂಗವೈಕಲ್ಯ ಪಿಂಚಣಿ ನೀಡಬೇಕು.
    ಅಪಘಾತ ಅಥವಾ ಗಂಭೀರ ಕಾಯಿಲೆಯಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಕಾರ್ಮಿಕರ ಕುಟುಂಬಕ್ಕೆ ತಾತ್ಕಾಲಿಕ ಜೀವನ ನಿರ್ವಹಣಾ ನೆರವು ನೀಡಬೇಕು.
    ಮಹಿಳಾ ಕಾರ್ಮಿಕರ ಪತ್ನಿಯ ಹೆರಿಗೆ ಸಂದರ್ಭದಲ್ಲಿಯೂ ಸಮರ್ಪಕ ಹೆರಿಗೆ ಸಹಾಯಧನ ಒದಗಿಸಬೇಕು.
    ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ನೀಡಲು ಪ್ರತಿಭಾ ಪುರಸ್ಕಾರವನ್ನು ಮರುಜಾರಿಗೊಳಿಸಬೇಕು.
    ಕಲ್ಯಾಣ ಮಂಡಳಿಯ ಹಣವನ್ನು ಅನಗತ್ಯ ಟೆಂಡರ್‌ಗಳಿಗೆ ಬಳಸುವುದನ್ನು ನಿಲ್ಲಿಸಿ, ಸಾಧ್ಯವಾದಷ್ಟು ಸೌಲಭ್ಯಗಳ ಹಣವನ್ನು ಕಾರ್ಮಿಕರು ಮತ್ತು ಅವರ ಅವಲಂಬಿತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆ ಮಾಡಬೇಕು.
  10. ಆಟೋ ರಿಕ್ಷಾ ಚಾಲಕ-ಮಾಲಕರ ಬೇಡಿಕೆಗಳು
    ಆಟೋ ರಿಕ್ಷಾ ಚಾಲಕರಿಗೆ ಇಂಧನವನ್ನು ಸಬ್ಸಿಡಿ ದರದಲ್ಲಿ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
    ಆಟೋ ರಿಕ್ಷಾ ಪರವಾನಗಿಯನ್ನು ಕನಿಷ್ಠ ಜಿಲ್ಲಾಮಟ್ಟಕ್ಕೆ ವಿಸ್ತರಿಸಿ, ಕೇರಳದ
    ಮಾದರಿಯಲ್ಲಿ ರಾಜ್ಯಾದ್ಯಂತ ಸಂಚರಿಸಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
    ಚಾಲಕರ ಬ್ಯಾಡ್ಜ್ ಕಡ್ಡಾಯತೆಯನ್ನು ಸಡಿಲಗೊಳಿಸಿ/ವಿರಾಯಿತಿಗೊಳಿಸಿ, ಚಾಲಕರಿಗೆ ಅನುಕೂಲಕರವಾದ ಸರಳ ವ್ಯವಸ್ಥೆ ಜಾರಿಗೊಳಿಸಬೇಕು.
    ದಕ್ಷಿಣ ಕನ್ನಡದ ಕಾರ್ಮಿಕರ ಪ್ರಮುಖ ಬೇಡಿಕೆಗಳು
  11. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪ್ರಮುಖ ಬೇಡಿಕೆಗಳು
    ಕಾರ್ಮಿಕರಿಗೆ ನೇರ ಪ್ರಯೋಜನ ಇಲ್ಲದ ಹಾಗೂ ಅನಗತ್ಯ ಯೋಜನೆಗಳನ್ನು ಪರಿಶೀಲಿಸಿ ರದ್ದುಪಡಿಸಿ, ಕಲ್ಯಾಣ ಮಂಡಳಿಯ ಹಣವನ್ನು ನೇರ ಸಾಮಾಜಿಕ ಭದ್ರತಾ ಸೌಲಭ್ಯಗಳಿಗೆ ಬಳಸಬೇಕು.
    ಕಲ್ಯಾಣ ಮಂಡಳಿಯ ಯೋಜನೆಗಳಲ್ಲಿ ನಡೆದಿರುವ ಅವ್ಯವಸ್ಥೆ ಮತ್ತು ಅಕ್ರಮಗಳ ಕುರಿತು ಸೂಕ್ತ ತನಿಖೆ ನಡೆಸಬೇಕು.
    ಸುಳ್ಯ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಸ್ಥಳೀಯ ನದಿ-ಹಳ್ಳಗಳಿಂದ ಕಾನೂನುಬದ್ದವಾಗಿ ಮರಳುa ಸಂಗ್ರಹಿಸಿ ಸಾಗಿಸಲು ಸರಳ ಪರವಾನಗಿ ವ್ಯವಸ್ಥೆ ಜಾರಿಗೊಳಿಸಬೇಕು.
    ಕೆಂಪುಕಲ್ಲಿನ ದರ ಏರಿಕೆಯನ್ನು ನಿಯಂತ್ರಿಸಿ, ಕಟ್ಟಡ ಕಾಮಗಾರಿಗಳು ಮತ್ತು ಕಾರ್ಮಿಕರ ಉದ್ಯೋಗಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಬೇಕು.
    ಕಾರ್ಮಿಕರಿಗೆ ನಗದುರಹಿತ (Cashless) ವೈದ್ಯಕೀಯ ಚಿಕಿತ್ಸೆ ಹಾಗೂ ಬಾಕಿ ಇರುವ ವೈದ್ಯಕೀಯ ಮರುಪಾವತಿಯನ್ನು ಶೀಘ್ರವಾಗಿ ನೀಡಬೇಕು.
    ಸ್ವಂತ ನಿವೇಶನವಿಲ್ಲದ ಕಾರ್ಮಿಕರಿಗೆ ಸೈಟ್ ಹಾಗೂ ಮನೆ ನಿರ್ಮಾಣಕ್ಕೆ ಸಮರ್ಪಕ ಸಹಾಯಧನ ನೀಡಬೇಕು.
    ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನದ ಮೊತ್ತ ಹೆಚ್ಚಿಸಿ, ಅರ್ಹ ಮಕ್ಕಳಿಗೆ ತಾಂತ್ರಿಕ ಕಾರಣಗಳಿಂದ ಸೌಲಭ್ಯ ನಿರಾಕರಿಸಬಾರದು. ಬಾಕಿ ಇರುವ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು.
    ಸ್ಥಳೀಯ ಕಟ್ಟಡ ಕಾರ್ಮಿಕರ ಉದ್ಯೋಗ ಮತ್ತು ದುಡಿಯುವ ಹಕ್ಕು ರಕ್ಷಿಸಲು, ಅಕ್ರಮವಾಗಿ ವಲಸೆ ಬಂದು ಕೆಲಸ ಮಾಡುತ್ತಿರುವವರ ಕುರಿತು ಕಾನೂನುಬದ ಪರಿಶೀಲನೆ ಹಾಗೂ ಕ್ರಮ ಕೈಗೊಳ್ಳಬೇಕು.
    60 ವರ್ಷ ಮೇಲ್ಪಟ್ಟ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಅಗತ್ಯ ವೈದ್ಯಕೀಯನೆರವು ಮುಂದುವರಿಸಬೇಕು. ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಹೊಂದಿದ ಕಾರ್ಮಿಕರಿಗೆ ಕನಿಷ್ಠ ₹10 ಲಕ್ಷ ಪರಿಹಾರ ಹಾಗೂ ₹10,000 ಮಾಸಿಕ ಅಂಗವೈಕಲ್ಯ ಪಿಂಚಣಿ ನೀಡಬೇಕು.ಅಪಘಾತ ಅಥವಾ ಗಂಭೀರ ಕಾಯಿಲೆಯಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಕಾರ್ಮಿಕರ ಕುಟುಂಬಕ್ಕೆ ತಾತ್ಕಾಲಿಕ ಜೀವನ ನಿರ್ವಹಣಾ ನೆರವು ನೀಡಬೇಕು.
    ಮಹಿಳಾ ಕಾರ್ಮಿಕರ ಪತ್ನಿಯ ಹೆರಿಗೆ ಸಂದರ್ಭದಲ್ಲಿಯೂ ಸಮರ್ಪಕ ಹೆರಿಗೆ ಸಹಾಯಧನ ಒದಗಿಸಬೇಕು.ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ನೀಡಲು ಪ್ರತಿಭಾ ಪುರಸ್ಕಾರವನ್ನು ಮರುಜಾರಿಗೊಳಿಸಬೇಕು.
    ಕಲ್ಯಾಣ ಮಂಡಳಿಯ ಹಣವನ್ನು ಅನಗತ್ಯ ಟೆಂಡರ್‌ಗಳಿಗೆ ಬಳಸುವುದನ್ನು ನಿಲ್ಲಿಸಿ, ಸಾಧ್ಯವಾದಷ್ಟು ಸೌಲಭ್ಯಗಳ ಹಣವನ್ನು ಕಾರ್ಮಿಕರು ಮತ್ತು ಅವರ ಅವಲಂಬಿತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆ ಮಾಡಬೇಕು.2. ಆಟೋ ರಿಕ್ಷಾ ಚಾಲಕ-ಮಾಲಕರ ಬೇಡಿಕೆಗಳು
    ಆಟೋ ರಿಕ್ಷಾ ಚಾಲಕರಿಗೆ ಇಂಧನವನ್ನು ಸಬ್ಸಿಡಿ ದರದಲ್ಲಿ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
    ಆಟೋ ರಿಕ್ಷಾ ಪರವಾನಗಿಯನ್ನು ಕನಿಷ್ಠ ಜಿಲ್ಲಾಮಟ್ಟಕ್ಕೆ ವಿಸ್ತರಿಸಿ, ಕೇರಳದ ಮಾದರಿಯಲ್ಲಿ ರಾಜ್ಯಾದ್ಯಂತ ಸಂಚರಿಸಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
    ಚಾಲಕರ ಬ್ಯಾಡ್ಜ್ ಕಡ್ಡಾಯತೆಯನ್ನು ಸಡಿಲಗೊಳಿಸಿ/ವಿರಾಯಿತಿಗೊಳಿಸಿ, ಚಾಲಕರಿಗೆ ಅನುಕೂಲಕರವಾದ ಸರಳ ವ್ಯವಸ್ಥೆ ಜಾರಿಗೊಳಿಸಬೇಕು.

ಆಟೋ, ಕ್ಯಾಬ್ ಹಾಗೂ ಟ್ಯಾಕ್ಸಿಗಳಿಗೆ ನ್ಯಾಯಯುತ ಮತ್ತು ವೈಜ್ಞಾನಿಕ ಪ್ರಯಾಣ ದರ ನಿಗದಿಪಡಿಸಿ, ಕಾಲಕಾಲಕ್ಕೆ ಪರಿಷ್ಕರಿಸಬೇಕು.
ಚಾಲಕ-ಮಾಲಕರಿಗೆ ಸ್ಮಾರ್ಟ್ ಕಾರ್ಡ್ ಹಾಗೂ ಏಕೀಕೃತ ಗುರುತಿನ ಚೀಟಿ ವ್ಯವಸ್ಥೆ
ಜಾರಿಗೊಳಿಸಬೇಕು. ಚಾಲಕರು ಹಾಗೂ ಕುಟುಂಬಗಳಿಗೆ ಜೀವ-ಅಪಘಾತ ವಿಮೆ, ಆರೋಗ್ಯ ರಕ್ಷಣೆ ಮತ್ತು ಪಿಂಚಣಿ ಸೌಲಭ್ಯ ಒದಗಿಸಬೇಕು.
ಆಟೋ, ಕ್ಯಾಬ್ ಹಾಗೂ ಟ್ಯಾಕ್ಸಿ ಖರೀದಿ, ದುರಸ್ತಿ ಮತ್ತು ನವೀಕರಣಕ್ಕೆ ಕಡಿಮೆ ಬಡ್ಡಿದರದ ಸಾಲ ನೀಡಬೇಕು. ಆಟೋ ರಿಕ್ಷಾ ಚಾಲಕ-ಮಾಲಕರ ಕಲ್ಯಾಣ ಮಂಡಳಿಯನ್ನು ಕಟ್ಟಡ ಕಾರ್ಮಿಕರ
ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಬಲಪಡಿಸಿ, ಶಿಕ್ಷಣ, ವೈದ್ಯಕೀಯ, ವಿಮೆ, ಪಿಂಚಣಿ, ಅಪಘಾತ ಪರಿಹಾರ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು.
ಮಂಡಳಿಯಲ್ಲಿ ನೋಂದಾಯಿತ ಚಾಲಕ-ಮಾಲಕರಿಗೆ ಮಕ್ಕಳ ಶಿಕ್ಷಣ, ಮದುವೆ, ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಆರ್ಥಿಕ ನೆರವು ಒದಗಿಸಬೇಕು.
ಅಪಘಾತ, ಅಂಗವೈಕಲ್ಯ ಅಥವಾ ಮರಣದ ಸಂದರ್ಭದಲ್ಲಿ ಚಾಲಕ ಮತ್ತು ಕುಟುಂಬಕ್ಕೆ ಸಮರ್ಪಕ ಪರಿಹಾರ ಹಾಗೂ ಸಾಮಾಜಿಕ ಭದ್ರತೆ ಖಚಿತಪಡಿಸಬೇಕು. ಸಹಜ ಮರಣದ ಸಂದರ್ಭದಲ್ಲಿಯೂ ಅರ್ಹ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು.
ಚಾಲಕರಿಗೆ ತರಬೇತಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳು ಹಾಗೂ ಮಂಡಳಿಯ ಸೌಲಭ್ಯಗಳು ಅರ್ಹ ಚಾಲಕರಿಗೆ ನೇರವಾಗಿ ತಲುಪುವ ವ್ಯವಸ್ಥೆ ಮಾಡಬೇಕು.ಚಾಲಕರ ಮೇಲಿನ ಅನಗತ್ಯ ಕಾನೂನು ಹಾಗೂ ಆಡಳಿತಾತ್ಮಕ ಕಿರುಕುಳವನ್ನು ಕಡಿಮೆ ಮಾಡಿ, ಗೌರವಯುತವಾಗಿ ಜೀವನ ನಡೆಸುವ ವಾತಾವರಣ ಕಲ್ಪಿಸಬೇಕು.3. ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಪ್ರಮುಖ ಬೇಡಿಕೆಗಳು.ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ನ್ಯಾಯಯುತ ಕನಿಷ್ಠ ಕೂಲಿ ನಿಗದಿಪಡಿಸಿ, ಕಾಲಕಾಲಕ್ಕೆ ಪರಿಷ್ಕರಿಸಬೇಕು. ರಬ್ಬರ್ ಬೆಲೆ ಕುಸಿತ ಹಾಗೂ ಮಳೆಗಾಲದ ಆದಾಯ ನಷ್ಟಕ್ಕೆ ಆದಾಯ ರಕ್ಷಣಾ ಯೋಜನೆ ಜಾರಿಗೊಳಿಸಬೇಕು.
ಎಲ್ಲಾ ರಬ್ಬ‌ರ್ ಟ್ಯಾಪಿಂಗ್ ಕಾರ್ಮಿಕರನ್ನು ಗುರುತಿಸಿ ಅಧಿಕೃತವಾಗಿ ನೋಂದಣಿ
ಮಾಡಬೇಕು. ಕಾರ್ಮಿಕರಿಗೆ ಆರೋಗ್ಯ, ಜೀವ-ಅಪಘಾತ ವಿಮೆ ಹಾಗೂ ಆಸ್ಪತ್ರೆ ಚಿಕಿತ್ಸೆಗೆ ₹2
ಲಕ್ಷದವರೆಗೆ ನೆರವು ನೀಡಬೇಕು.
ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ₹15 ಲಕ್ಷ, ಇತರ ಮರಣಕ್ಕೆ ₹2 ಲಕ್ಷ ಪರಿಹಾರ ನೀಡಬೇಕು. ಅಂಗವೈಕಲ್ಯಕ್ಕೆ ಪರಿಹಾರ ಮತ್ತು ಪಿಂಚಣಿ ಹಾಗೂ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ₹3,000 ಮಾಸಿಕ ವೃದ್ಧಾಪ್ಯ ಪಿಂಚಣಿ ನೀಡಬೇಕು.ಮೃತ ಕಾರ್ಮಿಕರ ಪತ್ನಿಗೆ ವಿಧವಾ ವೇತನ ಹಾಗೂ ಅಪ್ರಾಪ್ತ ಮಕ್ಕಳಿಗೆ ಜೀವನ-ಶಿಕ್ಷಣ ನೆರವು ನೀಡಬೇಕು.ಭೂಮಿ ಇಲ್ಲದ ಕಾರ್ಮಿಕರಿಗೆ ಸೈಟ್ ಹಾಗೂ ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು.
ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಶಿಕ್ಷಣ ನೆರವು ಹೆಚ್ಚಿಸಿ, ವಿವಾಹ ಸಹಾಯಧನವನ್ನು ₹1 ಲಕ್ಷಕ್ಕೆ ಹೆಚ್ಚಿಸಬೇಕು.ಮಹಿಳಾ ರಬ್ಬರ್ ಕಾರ್ಮಿಕರಿಗೆ ಮಾತೃತ್ವ, ಆರೋಗ್ಯ ಹಾಗೂ ವಿಶೇಷ ಕಲ್ಯಾಣ ಸೌಲಭ್ಯಗಳು ಒದಗಿಸಬೇಕು.ಹಾಗೂ ವಿಶ್ರಾಂತಿ ಸೌಲಭ್ಯ ಕಲ್ಪಿಸಬೇಕು.
EPF, ESI, ಪಿಂಚಣಿ ಹಾಗೂ ಇ-ಶ್ರಮ್ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.ಗುತ್ತಿಗೆ-ಮಧ್ಯವರ್ತಿ ಶೋಷಣೆ ತಡೆದು ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಉದ್ಯೋಗ ಭದ್ರತೆ ಖಚಿತಪಡಿಸಬೇಕು.
ರಬ್ಬರ್ ಬೋರ್ಡ್‌ ಸಹಾಯಧನ ಹೆಚ್ಚಿಸಿ, ಅರ್ಜಿ ಪ್ರಕ್ರಿಯೆ ಸರಳಗೊಳಿಸಿ ಆನ್‌ಲೈನ್
ವ್ಯವಸ್ಥೆ ಕಲ್ಪಿಸಬೇಕು. ರಬ್ಬರ್ ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾ ಮಟ್ಟದ ರಬ್ಬರ್‌ ಕಾರ್ಮಿಕರ ಕಲ್ಯಾಣ ಸಮಿತಿ ರಚಿಸಬೇಕು. ಕಾರ್ಮಿಕ ಸಂಘಟನೆಗಳು ಮತ್ತು ತೋಟ ಮಾಲೀಕರ ನಡುವೆ ನಿಯಮಿತ ದ್ವಿಪಕ್ಷೀಯ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು.
ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಪರ್ಯಾಯ ಉದ್ಯೋಗ ತರಬೇತಿ ನೀಡಬೇಕು.
ರಬ್ಬರ್ ಕಾರ್ಮಿಕ ಕುಟುಂಬಗಳಿಗೆ ಆರೋಗ್ಯ-ಶಿಕ್ಷಣ-ವಸತಿ-ಸಾಮಾಜಿಕ ಭದ್ರತೆಯ ಸಮಗ್ರ ಕಲ್ಯಾಣ ಯೋಜನೆ ಜಾರಿಗೊಳಿಸಬೇಕು.
BMS ಒತ್ತಾಯ
ಕಾರ್ಮಿಕರ ಸಮಸ್ಯೆಗಳನ್ನು ಕೇವಲ ಘೋಷಣೆಗಳು ಅಥವಾ ತಾತ್ಕಾಲಿಕ ಪರಿಹಾರಗಳ ಮೂಲಕ ಬಗೆಹರಿಸಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಗೌರವಯುತ ಜೀವನ ನಡೆಸಲು ಬೇಕಾದ ನ್ಯಾಯಯುತ ವೇತನ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಖಚಿತಪಡಿಸುವ ಸಮಗ್ರ ನೀತಿಯನ್ನು ಸರ್ಕಾರ ಜಾರಿಗೊಳಿಸಬೇಕು.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರ ಸ್ಥಳೀಯ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು, ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು BMS ಒತ್ತಾಯಿಸುತ್ತದೆ.
ಜಿಲ್ಲೆಯ ಎಲ್ಲಾ BMS ಅಂಗಸಂಸ್ಥೆಗಳು, ಯೂನಿಯನ್ ಪ್ರಮುಖರು, ಕಾರ್ಮಿಕ ಬಂಧುಗಳು ಹಾಗೂ ವಿವಿಧ ಕ್ಷೇತ್ರಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಭಾರತೀಯ ಮಜೂರ್ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮನವಿ ಮಾಡುತ್ತದೆ.

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.)
ಬಿಎಂಎಸ್ ಜೊತೆ ಸಂಯೋಜಿತವಾಗಿದೆ]
ಆಟೋ ರಿಕ್ಷಾ ಚಾಲಕ- ಮಾಲಕರ ಹಕ್ಕುಗಳಿಗಾಗಿ-ಸಾಮಾಜಿಕ ಭದ್ರತೆಗಾಗಿ ಜೀವನೋಪಾಯದ
ರಕ್ಷಣೆಗಾಗಿ- ಗೌರವಯುತ ಬದುಕಿಗಾಗಿ- ಆಟೋ ರಿಕ್ಷಾ ಚಾಲಕರ ಪ್ರಮುಖ ಬೇಡಿಕೆಗಳು

ರಿಕ್ಷಾ ಚಾಲಕರಿಗೆ ಸರಕಾರದಿಂದ ಇಂದನವನ್ನು ಸಬ್ಸಿಡಿ ದರದಲ್ಲಿ ಒದಗಿಸಲು ಕ್ರಮ ಕೈಗೊಳ್ಳಬೇಕು.
ರಿಕ್ಷಾ ಚಾಲಕರಿಗೆ ಸಂಬಂಧಿಸಿ ಆಟೋ ರಿಕ್ಷಾ ಪರವಾನಿಗೆಯನ್ನು ಕನಿಷ್ಠ ಜಿಲ್ಲೆಗೆ ವಿಸ್ತರಿಸಬೇಕು ಹಾಗೂ ಕೇರಳ ರಾಜ್ಯದಲ್ಲಿ ಚಾಲ್ತಿಯಿರುವಂತೆ ರಾಜ್ಯಕ್ಕೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು.
ಚಾಲನ ಪರವಾನಿಗೆ ಸಂಬಂಧಿಸಿ ಬಾಡ್ಜ್ನ್ನು ವಿರಹಿತಗೊಳಿಸಲು ಕ್ರಮ ಕೈಗೊಳ್ಳಬೇಕು.
ಆಟೋ ರಿಕ್ಷಾ, ಕ್ಯಾಬ್ ಹಾಗೂ ಟ್ಯಾಕ್ಸಿಗಳಿಗೆ ನ್ಯಾಯಯುತ ಮತ್ತು ವೈಜ್ಞಾನಿಕ ಪ್ರಯಾಣ ದರ ನಿಗದಿಪಡಿಸಬೇಕು.
ನಿಗದಿಪಡಿಸಿದ ದರವನ್ನು ಕಾಲಕಾಲಕ್ಕೆ ವರಿಷ್ಕರಿಸುವ ವ್ಯವಸ್ಥೆ ಜಾರಿಗೊಳಿಸಬೇಕು.
ಚಾಲಕ-ಮಾಲಕರಿಗೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಬೇಕು.
ಚಾಲಕರು ಹಾಗೂ ಅವರ ಕುಟುಂಬಗಳಿಗೆ ಜೀವ-ಅಪಘಾತ ವಿಮೆ ಮತ್ತು ಆರೋಗ್ಯ ರಕ್ಷಣೆ ಒದಗಿಸಬೇಕು.
ವಯೋವೃದ್ಧ ಹಾಗೂ ನಿವೃತ್ತ ಚಾಲಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು.
ಆಟೋ, ಕ್ಯಾಬ್ ಹಾಗೂ ಟ್ಯಾಕ್ಸಿ ಖರೀದಿ, ದುರಸ್ತಿ ಮತ್ತು ನವೀಕರಣಕ್ಕೆ ಕಡಿಮೆ ಬಡ್ಡಿದರದ ಸಾಲ ಒದಗಿಸಬೇಕು.
ಆಟೋ ರಿಕ್ಷಾ ಚಾಲಕ-ಮಾಲಕರ ಕಲ್ಯಾಣ ಮಂಡಳಿಯನ್ನು ಪರಿಣಾಮಕಾರಿಯಾಗಿ ಬಲಪಡಿಸಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಶಿಕ್ಷಣ, ವೈದ್ಯಕೀಯ, ವಿಮೆ, ಪಿಂಚಣಿ, ಅಪಘಾತ ಪರಿಹಾರ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು.
ಮಂಡಳಿಯಲ್ಲಿ ನೋಂದಾಯಿತ ಚಾಲಕ-ಮಾಲಕರಿಗೆ ಮಕ್ಕಳ ಶಿಕ್ಷಣ, ಮದುವೆ. ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಆರ್ಥಿಕ ನೆರವು ಒದಗಿಸಬೇಕು.
ಅಪಘಾತ, ಅಂಗವೈಕಲ್ಯ ಅಥವಾ ಮರಣದ ಸಂದರ್ಭದಲ್ಲಿ ಚಾಲಕ ಮತ್ತು ಕುಟುಂಬಕ್ಕೆ ಸಮರ್ಪಕ ಪರಿಹಾರ ಹಾಗೂ ಸಾಮಾಜಿಕ ಭದ್ರತೆ ಖಚಿತಪಡಿಸಬೇಕು.
ಸಹಜ ಮರಣದ ಸಂದರ್ಭದಲ್ಲಿಯೂ ಅರ್ಹ ಕುಟುಂಬಕ್ಕೆ ಕಲ್ಯಾಣ ಮಂಡಳಿಯ ಮೂಲಕ ಆರ್ಥಿಕ ನೆರವು ಒದಗಿಸಬೇಕು.
ಚಾಲಕರಿಗೆ ತರಬೇತಿ, ಕೌಶಲ್ಯಾಭಿವೃದ್ಧಿ ಹಾಗೂ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು.
ಚಾಲಕರಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಲ್ಯಾಣ ಮಂಡಳಿಯ ಸೌಲಭ್ಯಗಳು ಸರಳವಾಗಿ ಹಾಗೂ ನೇರವಾಗಿ ತಲುಪುವ ವ್ಯವಸ್ಥೆ ಮಾಡಬೇಕು.
ಚಾಲಕರ ಮೇಲಿನ ಅನಗತ್ಯ ಕಾನೂನು ಮತ್ತು ಆಡಳಿತಾತ್ಮಕ ಒತ್ತಡವನ್ನು ಕಡಿಮೆ ಮಾಡಿ ಗೌರವಯುತವಾಗಿ ಜೀವನ ನಡೆಸುವ ವಾತಾವರಣ ಕಲ್ಪಿಸಬೇಕು ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ
ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ , ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ನಾರಾಯಣ,
,ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರು ಸಂಘದ ಅಧ್ಯಕ್ಷ ಮಧುಸೂದನ
ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರು ಸಂಘ, ಸುಳ್ಯ ಕಾರ್ಯದರ್ಶಿ ಅನಿಲ್ ಮಂಡೆಕೋಲು,ಕಡಬ ತಾಲೂಕು ಭಾರತೀಯ ಮಜ್ದೂರು ಸಂಘದ ಅಧ್ಯಕ್ಷ ಚಂದ್ರಶೇಖರ್ ,ಮನೋಹರ,ಜಗ್ನನಾಥ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top