ಸುಳ್ಯ ತಾಲೂಕಿನ ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.24 ರಿಂದ ಫೆ.9 ರ ತನಕ, ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
2 ರಂದು ಮುಂಜಾನೆ ಪೂರ್ವ ಸಂಪ್ರದಾಯದಂತೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಲ್ಲಿ ಶ್ರೀ ದೇವಾಲಯಕ್ಕೆ ತೀರ್ಥ ತರಲಾಯಿತು, ಸಂಜೆ ಶ್ರೀ ರಕೇಶ್ವರಿ ದೈವದ ಸನ್ನಿಧಿಯಲ್ಲಿ ತಂಬಿಲ ಸೇವೆ ಹಾಗೂ ಭಂಡಾರ ತೆಗೆಯುವುದು. ರಾತ್ರಿ ದೇಗುಲದಲ್ಲಿ ಮಹಾಪೂಜೆ. ನಿತ್ಯ ಬಲಿ, ಅನ್ನಸಂತರ್ಪಣೆ. ಶ್ರೀ ರಕೇಶ್ವರಿ ದೈವದ ನೇಮ ನಡೆಯಿತು.ಇಂದು ಸಂಜೆ ಫೆ.3 ರಂದು ಸಂಜೆ ಗಂಟೆ 4 ರಿಂದ ವಿವಿಧ ಊರುಗಳಿಂದ ಸಂಗ್ರಹಣೆ ಮಾಡಿದ ಹಸಿರು ಕಾಣಿಕೆಗಳನ್ನು ಮೆರವಣಿಗೆಯಲ್ಲಿ ಪುತ್ಯ ಸತ್ಯಕಟ್ಟೆಯಿಂದ ದೇವಳಕ್ಕೆ ತರುವುದು. ಸಂಜೆ ಉಗ್ರಾಣ ತುಂಬಿಸುವುದು. ಮಹಾಪೂಜೆ ದಂಡಮಾಲೆ ಹಾಕಿ ಬಲಿ ಹೊರಡುವುದು, ಬೇತಾಳಗಳು ಇಳಿಯುವುದು, ಅನ್ನಸಂತರ್ಪಣೆ ನಡೆಯಲಿದೆ.
ಪಂಜ :: ರಕ್ತೇಶ್ವರಿ ದೈವದ ಕೋಲ

















