ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪೂರ್ಣಚಂದ್ರ ಕಣೆಮರಡ್ಕ ದೀರ್ಘಕಾಲಿನ ಅಸೌಖ್ಯದಿಂದ ಫೆ.4ರಂದು ನಿಧನರಾದರು. ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು.
ಅಸೌಖ್ಯ ಉಲ್ಬಣಿಸಿದಾಗ ಮನೆಯವರು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದಾಗ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಮಂಡೆಕೋಲು ಪ್ರದೇಶದಲ್ಲಿ ಜನಾನುರಾಗಿಯಾಗಿದ್ದ ಮಂಡೆಕೋಲು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪಕ್ಷ ಸಂಘಟಿಸುವಲ್ಲಿ ಶ್ರಮಿಸಿದ್ದರು. ಮಂಡೆಕೋಲು ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು, ಮಂಡೆಕೋಲು ದೇವಸ್ಥಾನಕ್ಕೊಳಪಡುವ ಕಳೇರಿ ಉಳ್ಳಾಕುಲು ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ 10 ವರ್ಷಗಳಿಂದ ದುಡಿಯುತ್ತಿದ್ದರು.
ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿಧನ

















