ಚೆಂಬು ಗ್ರಾಮದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತ ಠಾಣೆಯ ಪೋಲೀಸರು ಫೆ.10ರಂದು ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಕೆಡ್ಡಸದ ಹಿನ್ನಲೆಯಲ್ಲಿ ಚೆಂಬು ಗ್ರಾಮದಲ್ಲಿ ಕೆಲವರು ಸೇರಿಕೊಂಡು ಗದ್ದೆಯೊಂದರಲ್ಲಿ ಕೋಳಿ ಅಂಕ ಆಯೋಜಿಸಿದ್ದರು.ಕೋಳಿ ಅಂಕ ನಡೆಸಲು ಕಬ್ಬಿಣದ ಬೇಲಿಯನ್ನು ಹಾಕಿದ್ದರು.ಆ ವೇಳೆಗೆ ಸ್ಥಳದಲ್ಲಿದ್ದ ಜನರು ಓಡಿ ತಪ್ಪಿಸಿಕೊಂಡರು. ಕೋಳಿ ಅಂಕ ನಡೆಸಲು ಗದ್ದೆಯಲ್ಲಿ ಇರಿಸಿದ್ದ ಕಬ್ಬಿಣದ ಬೇಲಿಯನ್ನು ಪೊಲೀಸರು ವಶಕ್ಕೆ ಪಡೆದರು. ಕೋಳಿಯಾಗಲೀ, ಜನರಾಗಲಿ ಅವರಿಗೆ ಸಿಗಲಿಲ್ಲವೆಂದು ತಿಳಿದುಬಂದಿದೆ.
ಚೆಂಬು : ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ














































